ಮೇಡ್ ಇನ್ ಇಂಡಿಯಾ ಕೊರೊನಾ ಲಸಿಕೆ ಹೆಚ್ಚು ಪರಿಣಾಮಕಾರಿ-ಅದರ್ ಪೂನವಾಲಾ

ನವದೆಹಲಿ, ಏಪ್ರಿಲ್ 13 : ಅಮೆರಿಕ ಅಭಿವೃದ್ದಿ ಪಡಿಸಿರುವ ಫೈಜರ್ ಮತ್ತು ಮಾಡೆರ್ನಾ ಲಸಿಕೆಗಳಿಗಿಂತ ಭಾರತದಲ್ಲಿ ಉತ್ಪಾದಿಸಿದ ಕೋವಿಡ್ 19 ಲಸಿಕೆಗಳು ಹೆಚ್ಚು ಪರಿಣಾಮಕಾರಿ ಹಾಗೂ ಸುರಕ್ಷಿತ ಎಂದು ಸೀರಂ ಇನ್ಸ್‌ಟಿಟ್ಯೂಟ್ ನ ಸಿಇಒ ಅದರ್ ಪೂನವಾಲಾ ತಿಳಿಸಿದ್ದಾರೆ.

ಈ ಕುರಿತು ಎಎನ್‌ಐ ಸುದ್ದಿ ಸಂಸ್ಥೆ ಜೊತೆ ಬುಧವಾರ ಮಾತನಾಡಿರುವ ಅವರು ಭಾರತದಲ್ಲಿ ಉತ್ಪಾದಿಸಿದ ಕೊರೊನಾ ಲಸಿಕೆಗಳು ಕೊರೊನಾ ವಿರುದ್ದ ಹೋರಾಡುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿದ್ದು, ಫೈಜರ್ ಮತ್ತು ಮಾಡೆರ್ನಾ ಲಸಿಕೆಗಳ ರೀತಿ ಅಡ್ಡ ಪರಿಣಾಮಗಳನ್ನ ಹೊಂದಿಲ್ಲ ಅಂತ ತಿಳಿಸಿದ್ದಾರೆ.

"ಫೈಜರ್ ಮತ್ತು ಮಾಡೆರ್ನಾ ಲಸಿಕೆಗಳನ್ನ ಭಾರತದಲ್ಲಿ ಪರಿಚಯಿಸಿದೇ ಇರುವುದು ಒಳ್ಳೆಯದಾಯಿತು. ಏಕೆಂದರೆ ಅಮೆರಿಕದಲ್ಲಿರುವ ಬಹುತೇಕ ಜನರು ಈ ಲಸಿಕೆಗಳನ್ನ ಎರಡು ಡೋಸ್ ತೆಗೆದುಕೊಂಡಿದ್ದಾರೆ. ಜೊತೆಗೆ ಮೂರನೇಯ ಬೂಸ್ಟರ್ ಡೋಸ್‌ನ್ನು ಸಹ ಹಾಕಿಸಿಕೊಂಡಿದ್ದಾರೆ. ಆದರೆ ಲಸಿಕೆ ಪೂರ್ಣ ಪ್ರಮಾಣದಲ್ಲಿ ತೆಗೆದುಕೊಂಡಿದ್ದರು ಸಹ ಈಗಲೂ ಕೊರೊನಾಗೆ ಅಮೆರಿಕದ ಜನರು ತುತ್ತಾಗುತ್ತಿದ್ದಾರೆ. ಆದರೆ ಭಾರತದಲ್ಲಿ ಉತ್ಪಾದಿಸಿದ ಕೋವಿಡ್ 19 ಲಸಿಕೆ ಹಾಗಲ್ಲ, ಕೊರೊನಾ ಹರಡುವಿಕೆಯನ್ನ ತಡೆಯುವುದರ ಜೊತೆಗೆ ಹೆಚ್ಚು ರಕ್ಷಣೆಯನ್ನ ನೀಡುತ್ತದೆ" ಅಂತ ಹೇಳಿಕೆ ನೀಡಿದ್ದಾರೆ.

 Made in India Corona Vaccine Better Than Pfizer and Moderna Says Adar Poonawalla

ಅಲ್ಲದೆ ಈಗಾಗಲೇ ಸೀರಂ ಸಂಸ್ಥೆ ಉತ್ಪಾದಿಸಿರುವ ಕೋವಿಶೀಲ್ಡ್‌ ಲಸಿಕೆಯ 10 ಕೋಟಿ ಡೋಸ್‌ನ್ನು 80ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡಿದ್ದೇವೆ. ಸದ್ಯಕ್ಕೆ ಕೊರೊನಾ ಪ್ರಕರಣಗಳು ಇಳಿಕೆಯಾಗುತ್ತಿರುವ ಹಿನ್ನಲೆ ಲಸಿಕೆ ಬೇಡಿಕೆ ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ.

 Made in India Corona Vaccine Better Than Pfizer and Moderna Says Adar Poonawalla

ಜೊತೆಗೆ ಕೆಲ ದೇಶಗಳಲ್ಲಿ ಎಮ್ ಆರ್ ಎನ್‌ ಎ (ಫೈಜರ್, ಮಾಡೆರ್ನಾ) ಲಸಿಕೆ ತೆಗೆದುಕೊಂಡ ಹೆಚ್ಚಿನ ಜನರು ಆಸ್ಪತ್ರೆಗೆ ಸೇರಿದ್ದಾರೆ ಅಂತ ವರದಿಯಾಗಿದೆ. ಏಕೆಂದರೆ ಆ ಲಸಿಕೆಗಳು ಅಡ್ಡ ಪರಿಣಾಮ ಬೀರುತ್ತಿದ್ದು, ಕೊರೊನಾದಿಂದ ರಕ್ಷಣೆ ನೀಡುವಲ್ಲಿ ಪರಿಣಾಮಕಾರಿಯಾಗಿಲ್ಲ ಅಂತ ಸುದ್ದಿ ಸಂಸ್ಥೆ ಎಎನ್‌ಐಗೆ ಅದರ್ ಪೂನವಲಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+