ಮೋದಿ ಜಾತಿ ಅವಹೇಳನೆ: ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ದೂರು
ನವದೆಹಲಿ, ಏಪ್ರಿಲ್ 15: 'ಕಳ್ಳರಿಗೆಲ್ಲ ಮೋದಿ ಎಂಬ ಸರ್ ನೇಮ್ ಇರುವುದು ಏಕೆ?' ಎಂದು ಲೇವಡಿ ಮಾಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಸೋಮವಾರ ಚುನಾವಣಾ ಆಯೋಗವನ್ನು ಭೇಟಿ ಮಾಡಿದ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಖಾತೆ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ನೇತೃತ್ವದ ತಂಡ, ಆಯೋಗದ ಅಧಿಕಾರಿಗಳಿಗೆ ದೂರು ಸಲ್ಲಿಸಿತು.

ಬಳಿಕ ಮಾತನಾಡಿದ ನಖ್ವಿ, 'ಮೋದಿಜಿ ಅವರ ಜಾತಿಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ನಾಚಿಕೆಗೇಡಿನ ಹೇಳಿಕೆ ನೀಡಿದ್ದಾರೆ. ಜತೆಗೆ ಎಲ್ಲ ಮೋದಿಗಳೂ ಏಕೆ ಕಳ್ಳರಾಗಿದ್ದಾರೆ?' ಎಂದು ಕುಹಕವಾಡಿದ್ದಾರೆ ಎಂದು ಕಿಡಿಕಾರಿದರು.
MA Naqvi, BJP after meeting with EC: Rahul Gandhi ji made shameful comments on Modi ji's caste & said"Why are all Modis thieves?"Modi ji comes from a backward community, ppl with feudal mindset have hatred towards him.We've appealed to EC to take action against Rahul ji &Congress pic.twitter.com/hQ4Hwh3mzj
— ANI (@ANI) 15 April 2019
'ಮೋದಿಜಿ ಅವರು ಹಿಂದುಳಿದ ಸಮುದಾಯದಿಂದ ಬಂದವರಾಗಿದ್ದಾರೆ. ಜಮೀನ್ದಾರಿ ಮನಸ್ಥಿತಿಯ ಜನರು ಅವರೆಡೆಗೆ ದ್ವೇಷ ಕಾರುತ್ತಾರೆ. ರಾಹುಲ್‌ಜಿ ಮತ್ತು ಕಾಂಗ್ರೆಸ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ನಾವು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದೇವೆ' ಎಂಬುದಾಗಿ ಅವರು ತಿಳಿಸಿದ್ದಾರೆ.
ವಂಚನೆ ಪ್ರಕರಣದಲ್ಲಿ ದೇಶಬಿಟ್ಟು ಹೋಗಿರುವ ನೀರವ್ ಮೋದಿ ಮತ್ತು ಲಲಿತ್ ಮೋದಿ ಹೆಸರನ್ನು ಪರೋಕ್ಷವಾಗಿ ಉಲ್ಲೇಖಿಸಿದ್ದ ರಾಹುಲ್, ಅವರ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಥಳಕು ಹಾಕಿ 'ಎಲ್ಲ ಕಳ್ಳರ ಸರ್‌ನೇಮ್ 'ಮೋದಿ' ಎಂಬ ಹೆಸರು ಹೊಂದಿರುವುದು ಹೇಗೆಂದು ನನಗೆ ಅಚ್ಚರಿಯಾಗುತ್ತಿದೆ' ಎಂದಿದ್ದರು.












Click it and Unblock the Notifications