ಆಮ್ ಆದ್ಮಿಗೆ ಆಧಾರವಾಗಬಲ್ಲರೇ ಈ 10 ಮಂದಿ?
ನವದೆಹಲಿ, ಜ.10- ಲೋಕಸಭಾ ಚುನಾವಣೆ ಮುನ್ನಾ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷ ದೇಶಾದ್ಯಂತ ತನ್ನ ಅಸ್ವಿತ್ವವನ್ನು ಭದ್ರಪಡಿಸಿಕೊಳ್ಳುತ್ತಿದೆ. ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲಾ ನೇತೃತ್ವದ ಎಎಪಿ ಪಕ್ಷವು ನವೀನ ರೀತಿಯಲ್ಲಿ ಇಂದು ಫೋನ್ ಮೂಲಕ ಪಕ್ಷಕ್ಕೆ ಸದಸ್ಯತ್ವ ನೋಂದಣಿ ಕಾರ್ಯ ಆರಂಭಿಸಿದೆ. ಈಗಾಗಲೇ 1 ಕೋಟಿ ಗೂ ಅಧಿಕ ಮಂದಿ AAPಗೆ ಅಂಕಿತ ಎಂದು ಕರೆ ಮಡಿ ಹೇಳಿದ್ದಾರೆ.
ಇದಕ್ಕೂ ಮುನ್ನ, ನಾನಾ ಕ್ಷೇತ್ರಗಳ ಕೆಲ ಪ್ರಮುಖರು ಬೇರೆ ಯಾವುದೇ ಕರೆ ಕೇಳಿಸಿಕೊಳ್ಳದೆಯೇ, ಭ್ರಷ್ಟಾಚಾರ ನಿರ್ಮೂಲನೆಗೆ ಪಣ ತೊಟ್ಟವರಂತೆ ಆಮ್ ಆದ್ಮಿಯತ್ತ ಆಕರ್ಷಿತರಾಗಿ, ಸೀದಾ AAP ಸೇರಿಕೊಂಡಿದ್ದಾರೆ. ಇದರಿಂದ ಪಕ್ಷದ ತೂಕ ಹೆಚ್ಚಾಗಿದೆ. ಪ್ರಮುಖ ವ್ಯಕ್ತಿಗಳ ಪಟ್ಟಿ ಹೀಗಿದೆ: ( AAP: ಲೋಕಸಭೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ )

ಆಮ್ ಆದ್ಮಿ ಪಕ್ಷಕ್ಕೆ ಹಾರಿದ Captain Gopinath
ಕ್ಯಾಪ್ಟನ್ ಗೋಪಿನಾಥ್ (62)- ಅಗ್ಗದ ಸಂಚಾರ ದರದ ಏರ್ ಡೆಕ್ಕನ್ ವಿಮಾನಯಾನ ಆರಂಭಿಸಿದ ಕ್ಯಾಪ್ಟನ್ ಗೋಪಿನಾಥ್ ಜನವರಿ 3ರಂದು ಆಮ್ ಆದ್ಮಿ ಪಕ್ಷಕ್ಕೆ ಹಾರಿದ್ದಾರೆ. ಇವರು 2009ರಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಬಿಜೆಪಿಯ ಅಭ್ಯರ್ಥಿ ಅನಂತಕುಮಾರ್ ವಿರುದ್ಧ ಸ್ಪರ್ಧಿಸಿ ಪರಾಭವಗೊಂಡಿದ್ದರು. ಎಎಪಿಯ ಭ್ರಷ್ಟಾಚಾರ ವಿರೋಧಿ ನಿಲುವನ್ನು ಮೆಚ್ಚಿ ತಾನು ಎಎಪಿಗೆ ಸೇರುವುದಾಗಿ ಗೋಪಿನಾಥ್ ಹೇಳಿದ್ದಾರೆ.
ಆದರೆ 'ತಾವು Air Deccan ಕಂಪನಿಯ ಹಾರಾಟದಲ್ಲಿದ್ದಾಗ ಮಾಡಿದ್ದ 400 ಕೋಟಿ ರೂ ಸಾಲವನ್ನು ಮರುಪಾವತಿ ಮಾಡಿಯೇ ಇಲ್ಲ ಬಿಜೆಪಿ ನಾಯಕರೊಬ್ಬರು' ಕ್ಯಾಪ್ಟನ್ ಗೋಪಿನಾಥ್ ಅವರ ಚರಿತ್ರೆಯನ್ನು ಕೆದಕಿದ್ದಾರೆ.

ಮೋದಿ ಕಟು ವಿರೋಧಿ, ನೃತ್ಯ ಕಲಾವಿದೆ ಮಲ್ಲಿಕಾ ಸಾರಾಭಾಯಿ
Mallika Sarabhai (60) - ಗುಜರಾತ್ ಮುಖ್ಯಮಂತ್ರಿ, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಕಟು ವಿರೋಧಿ, ನೃತ್ಯ ಕಲಾವಿದೆ, ನಟಿ ಹಾಗು ಸಮಾಜ ಸೇವಕಿ ಮಲ್ಲಿಕಾ ಸಾರಾಭಾಯಿ ಇದೇ ವಾರ ಎಎಪಿಗೆ ಸೇರಿದರು.
2009ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಲ್ ಕೆ ಆಡ್ವಾಣಿ ವಿರುದ್ಧ ಗಾಂಧಿ ನಗರ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಭಾರಿ ಸೋಲು ಅನುಭವಿಸಿದ್ದರು. ಖ್ಯಾತ ವಿಜ್ಞಾನಿ ವಿಕ್ರಮ್ ಸಾರಾಭಾಯಿ ಮತ್ತು ಶಾಸ್ತ್ರೀಯ ನೃತ್ಯ ಕಲಾವಿದೆ ಮೃಣಾಲಿನಿ ಸಾರಾಭಾಯಿ ಪುತ್ರಿ.

ಖ್ಯಾತ ಟಿವಿ ನಿರೂಪಕ ಅಶುತೋಷ್ ಎಎಪಿ ಜತೆ
Ashutosh (47)- IBN7 ವಾಹಿನಿಯ ಹಿರಿಯ ಸಂಪಾದಕ ಮತ್ತು ಖ್ಯಾತ ಟಿವಿ ನಿರೂಪಕ ಅಶುತೋಷ್ ಎಎಪಿ ಜತೆ ಸೇರುವುದಾಗಿ ಟ್ವೀಟ್ ಮಾಡಿ, ಎಎಪಿ ಜತೆ ಸೇರಿಸಿಕೊಂಡಿದ್ದಾರೆ.

ಮೀರಾ ಸನ್ಯಾಲ್ ದಕ್ಷಿಣ ಮುಂಬೈನಿಂದ ಮುಂದಿನ ಲೋಕಸಭಾ ಚುನಾವಣೆಗೆ
Meera Sanyal (52)- ರಾಯಲ್ ಬ್ಯಾಂಕ್ ಆಫ್ ಸ್ಕಾಟ್‌ಲ್ಯಾಂಡ್ (RBS, India) ಮಾಜಿ ಅಧ್ಯಕ್ಷ ಮತ್ತು ಸಿಇಓ. ಮೀರಾ ಸನ್ಯಾಲ್ 2009ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ದಕ್ಷಿಣ ಮುಂಬೈಯಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಮೀರಾ, ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ನವದೆಹಲಿ ಮತ್ತು ಗ್ರೇಟರ್ ಕೈಲಾಶ್ ಕ್ಷೇತ್ರಗಳಲ್ಲಿ AAP ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದರು. ದಕ್ಷಿಣ ಮುಂಬೈನಿಂದ ಮುಂದಿನ ಲೋಕಸಭಾ ಚುನಾವಣೆಯಲ್ಲಿ AAPಯಿಂದ ಸ್ಪರ್ಧಿಸುವ ಬಯಕೆ ವ್ಯಕ್ತಪಡಿಸಿದ್ದಾರೆ.

ಸಮೀರ್ ನಾಯರ್: AAP ಸಂವಹನ ಮಾಧ್ಯಮ ಮುಖ್ಯಸ್ಥ
Sameer Nair (49) - ಎನ್‌ಡಿಟಿವಿ ಮತ್ತು ಸ್ಟಾರ್ ಟಿವಿ ವಾಹಿನಿಯ ಮಾಜಿ ಸಿಇಓ. ದೆಹಲಿ ವಿಧಾನಸಭಾ ಚುನಾವಣೆಗಿಂತ ಮೊದಲು ಎಎಪಿ ಸೇರಿದ್ದರು. AAP ಸಂವಹನ ಮುಖ್ಯಸ್ಥರಾಗಿದ್ದಾರೆ.

ವಿ ಬಾಲಕೃಷ್ಣನ್ -ಇನ್ಫೋಸಿಸ್ ನಿಂದ ಆಮ್ ಆದ್ಮಿ ಪಕ್ಷಕ್ಕೆ
V Balakrishnan (48) - ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಪ್ರಮುಖ ಇನ್ಫೋಸಿಸ್ ಆಡಳಿತ ಮಂಡಳಿಯ ಸ್ಥಾನದಿಂದ ಕೆಳಗಿಳಿಸಿದ್ದ ವಿ ಬಾಲಕೃಷ್ಣನ್, ಇದೀಗ AAP ಸೇರಿಕೊಂಡಿದ್ದಾರೆ. ದೆಹಲಿ ವಿಧಾನಸಭಾ ಚುನಾವಣೆಳಲ್ಲಿ ಮತದಾರನ ನಾಡಿಮಿಡಿತ ಅರಿತು, ದೇಶವನ್ನು ಭ್ರಷ್ಟಾಚಾರ ಮುಕ್ತಗೊಳಿಸಬೇಕೆಂಬ ಮಹದುದ್ದೇಶದಿಂದ AAP ಕೈಹಿಡಿದಿದ್ದಾರೆ. ಇದಕ್ಕಾಗಿ, 2014ರ ಲೋಕಸಭಾ ಚುನಾವಣೆಯ ಮೇಲೆ ಅಪಾರ ಭರವಸೆಯಿಟ್ಟಿದ್ದಾರೆ.

ಕನುಭಾಯಿ ಕಲ್ಸಾರಿಯಾ: ಮೂರು ಬಾರಿ BJP ಶಾಸಕ
Kanubhai Kalsaria (60) - ಗುಜರಾತಿನ ಬಿಜೆಪಿ ಮಾಜಿ ಶಾಸಕ ಕನುಭಾಯಿ ಕಲ್ಸಾರಿಯಾ ಗುಜರಾತಿನಲ್ಲಿನ ಭೂ ಮತ್ತು ಪರಿಸರ ಸಂರಕ್ಷಣೆ ಸಂಬಂಧಿ ಪ್ರತಿಭಟನೆಗಳಲ್ಲಿ ಯಾವತ್ತೂ ಮುಂಚೂಣಿಯಲ್ಲಿರುತ್ತಾರೆ. ಮಹುವಾ ಕ್ಷೇತ್ರದಿಂದ ಮೂರು ಬಾರಿ ರಾಜ್ಯ ವಿಧಾನಸಭೆಗೆ ಸತತವಾಗಿ ಚುನಾವಣೆಯಲ್ಲಿ ಗೆದ್ದು ಬಂದಿದ್ದಾರೆ. ಆದರೆ 2012ರಲ್ಲಿ ಬಿಜೆಪಿಯಿಂದ ವಿಮುಖಗೊಂಡರು. ಆಗಲೂ ಚುನಾವಣೆಯಲ್ಲಿ ಸ್ಪರ್ಧಿಸಿದರಾದರೂ ನಾಲ್ಕನೆಯ ಬಾರಿಗೆ ವಿಜಯ ಮಾಲೆ ಧರಿಸಲಾಗಲಿಲ್ಲ.

ಅಲ್ಕಾ ಲಂಬಾ: 20 ವರ್ಷಗಳ ಕಾಂಗ್ರೆಸ್ ನಂಟು ಖತಮ್
Alka Lamba (38) - ಕಾಂಗ್ರೆಸ್ಸಿನ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (NSUI) ಮಾಜಿ ಸದಸ್ಯೆ ಅಲ್ಕಾ ಲಂಬಾ ಕಾಂಗ್ರೆಸ್ ಪಕ್ಷದೊಂದಿಗೆ ಇದ್ದ 20 ವರ್ಷಗಳ ನಂಟನ್ನು ತೊರೆದು ಕಳೆದ ವರ್ಷ ಡಿಸೆಂಬರ್‌ನಲ್ಲಿ ಎಎಪಿ ಸೇರಿದ್ದಾರೆ. 2003ರಲ್ಲಿ ದೆಹಲಿಯಲ್ಲಿ ಮೋತಿ ನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯ ಮದನಲಾಲ್ ಖುರಾನಾ ವಿರುದ್ಧ ಸ್ಪರ್ಧಿಸಿ, ಸೋಲುಂಡಿದ್ದರು.

ಹೆಚ್ ಎಸ್ ಫೂಲ್ಕಾ: ಸುಪ್ರೀಂ ಕೋರ್ಟಿನ ಹಿರಿಯ ವಕೀಲೆ
HS Phoolka (58) ಸುಪ್ರೀಂ ಕೋರ್ಟಿನ ಹಿರಿಯ ವಕೀಲೆ. 1984ರಲ್ಲಿ ಸಿಕ್ಖ್ ವಿರೋಧಿ ದಂಗೆಯಲ್ಲಿ ಸಂತ್ರಸ್ತರ ಪರ ಸುದೀರ್ಘ ಕಾನೂನು ಸಮರ ನಡೆಸಿದ್ದಾರೆ. Shiromani Akali Dal ಮತ್ತು Delhi Sikh Grudwara Management Committee ಜತೆ ನಿಕಟ ಸಂಪರ್ಕ ಹೊಂದಿದ್ದರಾದರೂ Akali Dal ಬದಲು ಇದೀಗ AAP ಸೇರಿದ್ದಾರೆ.

ಆದರ್ಶ ಶಾಸ್ತ್ರಿ: ಲಾಲ್ ಬಹಾದೂರ್ ಶಾಸ್ತ್ರಿ ಮೊಮ್ಮಗ AAPಗೆ
Adarsh Shastri (40)- ಭಾರತದ ಮಾಜಿ ಪ್ರಧಾನಿ ಲಾಲ್ ಬಹಾದೂರ್ ಶಾಸ್ತ್ರಿ ಅವರ ಮೊಮ್ಮಗ. ಕಾಂಗ್ರೆಸ್ ನಾಯಕ ಅನಿಲ್ ಶಾಸ್ತ್ರಿ ಅವರ ಪುತ್ರ ಆದರ್ಶ ಶಾಸ್ತ್ರಿ ಆ್ಯಪಲ್ ಇನ್ಕ್ ಸಂಸ್ಥೆಯಲ್ಲಿ ಕೋಟಿ ಲೆಕ್ಕದಲ್ಲಿ ಸಂಬಳ ಪಡೆಯುತ್ತಿದ್ದವರು, ಅಂತಹ ನೌಕರಿ ಬಿಟ್ಟು AAPಗೆ ಅಂಕಿತರಾಗಿದ್ದಾರೆ.












Click it and Unblock the Notifications