ಎಲ್.ಕೆ.ಅಡ್ವಾಣಿ ಪತ್ನಿ ಕಮಲಾ ಅಡ್ವಾಣಿ ವಿಧಿವಶ

Posted By:
Subscribe to Oneindia Kannada

ನವದೆಹಲಿ, ಏಪ್ರಿಲ್ 06 : ಹಿರಿಯ ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿ ಅವರ ಪತ್ನಿ ಕಮಲಾ ಅಡ್ವಾಣಿ ಅವರು ವಿಧಿವಶರಾಗಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಬುಧವಾರ ನಿಧನ ಹೊಂದಿದರು.

ಬುಧವಾರ ಸಂಜೆ ನವದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕಮಲಾ ಅಡ್ವಾಣಿ (85) ಅವರು ವಿಧಿವಶರಾದರು. ಇಂದು ಬೆಳಗ್ಗೆ ಕಮಲಾ ಅಡ್ವಾಣಿ ಅವರಿಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸಂಜೆ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ.

kamala advani

ಎರಡು ಮೂರು ವರ್ಷಗಳಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಕಮಲಾ ಅವರನ್ನು ಹಲವು ಬಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. 2015ರ ಡಿಸೆಂಬರ್‌ನಲ್ಲಿಯೂ ಕಮಲಾ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

1965ರಲ್ಲಿ ಕಮಲಾ ಅವರು ಎಲ್‌.ಕೆ.ಅಡ್ವಾಣಿ ಅವರನ್ನು ವಿವಾಹವಾಗಿದ್ದರು. ಪತಿ ಎಲ್.ಕೆ.ಅಡ್ವಾಣಿ, ಪುತ್ರಿ ಪ್ರತಿಭಾ ಅಡ್ವಾಣಿ, ಪುತ್ರ ಜಯಂತ್ ಅವರನ್ನು ಕಮಲಾ ಅವರು ಆಗಲಿದ್ದಾರೆ. ಅಡ್ವಾಣಿ ಅವರ ರಾಜಕೀಯ ಬೆಳವಣಿಗೆಗಳಲ್ಲಿ ಕಮಲಾ ಅವರ ಪಾತ್ರವೂ ದೊಡ್ಡದಿದೆ.

ಗುಜರಾತ್‌ನ ಗಾಂಧಿನಗರ ಕ್ಷೇತ್ರದಿಂದ ಎಲ್‌.ಕೆ.ಅಡ್ವಾಣಿ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದಾಗ ಇಳಿವಯಸ್ಸಿನಲ್ಲಿಯೂ ಕಮಲಾ ಅವರು ಪ್ರಚಾರ ನಡೆಸಿದ್ದರು. ಪ್ರತಿವರ್ಷ ದಸರಾ ಹಬ್ಬದ ಸಮಯದಲ್ಲಿ ಗುಜರಾತ್‌ನ ಸೋಮನಾಥ ದೇವಾಲಯಕ್ಕೆ ಕಮಲಾ ಅವರು ಭೇಟಿ ನೀಡುತ್ತಿದ್ದರು.

ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮುಂತಾದ ನಾಯಕರು ಕಮಲಾ ಅಡ್ವಾಣಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಸುದ್ದಿದನಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BJP veteran leader Lal Krishna Advani's wife Kamla Advani died of heart failure in AIIMS, New Delhi on Wednesday, April 6, 2016.
Please Wait while comments are loading...