JNU Students Clash: ಎಬಿವಿಪಿ, ಎಡ ಬೆಂಬಲಿಗರ ನಡುವೆ ಮಾರಾಮಾರಿ

ನವದೆಹಲಿ, ಏಪ್ರಿಲ್ 10: ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯ JNU ಮತ್ತೊಮ್ಮೆ ಸುದ್ದಿಯಲ್ಲಿದೆ. ರಾಮನವಮಿ- ರಂಜಾನ್ ಆಚರಣೆ ನಡುವೆ ಆಹಾರ ಸೇವನೆ ವಿಷಯವಾಗಿ ವಿಶ್ವವಿದ್ಯಾಲಯದ ಕ್ಯಾಂಪಸಲ್ಲಿರುವ ಕಾವೇರಿ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿ ಸಂಘಟನೆಗಳ ನಡುವೆ ಮಾರಾಮಾರಿ ನಡೆದಿದೆ. ವಿದ್ಯಾರ್ಥಿಗಳ ನಡುವೆ ಮಾಂಸಾಹಾರ ಸೇವನೆ ವಿಷಯದಲ್ಲಿ ಮಾತಿಗೆ ಮಾತು ಬೆಳೆದು, ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿ, ಕಲ್ಲೆಸೆತ, ರಕ್ತಗಾಯ ಉಂಟಾಗಿದ್ದು, ಪೊಲೀಸರು ಮತ್ತೊಮ್ಮೆ ಕ್ಯಾಂಪಸ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಪ್ರಸ್ತುತ ಪರಿಸ್ಥಿತಿ ಶಾಂತವಾಗಿದೆ ಎಂದು ನೈಋತ್ಯ ವಲಯದ ಡಿಸಿಪಿ ತಿಳಿಸಿದ್ದಾರೆ.

ಎರಡೂ ಸಂಘಟನೆಗಳ ವಿದ್ಯಾರ್ಥಿಗಳು ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದಾರೆ. ಆದರೆ ಎಬಿವಿಪಿ ಬೆಂಬಲಿಗರು ಘೋಷಣೆಗಳನ್ನು ಕೂಗುತ್ತಾ ಕ್ಯಾಂಪಸ್‌ನ ಹೊರಗೆ ಬಂದು ಪ್ರತಿಭಟನೆ ನಡೆಸಿದ ನಂತರ ಕ್ಯಾಂಪಸ್‌ನ ಮುಖ್ಯ ದ್ವಾರವನ್ನು ಮುಚ್ಚಲಾಯಿತು ಎಂದು ಮೂಲಗಳು ತಿಳಿಸಿವೆ. ವಿದ್ಯಾರ್ಥಿ ಸಂಘಟನೆಗಳ ಸಂಘರ್ಷೆಯಿಂದ ಸುಮಾರು 50 ರಿಂದ 60ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಗಾಯಗಳಾಗಿರುವ ವರದಿ ಬಂದಿದೆ.

ರಾಮನವಮಿ ಸೇರಿದಂತೆ ಸದ್ಯ ದೆಹಲಿಯಲ್ಲಿ ಚೈತ್ರ ನವರಾತ್ರಿ ಆಚರಣೆ ಜಾರಿಯಲ್ಲಿರುವುದರಿಂದ ದೆಹಲಿಯ ಕೆಲ ಭಾಗಗಳಲ್ಲಿ ಮಾಂಸಾಹಾರ ಮಾರಾಟಕ್ಕೆ ನಿರ್ಬಂಧ ಹೇರಲಾಗಿತ್ತು. ಈ ನಡುವೆ ಇಂದು ಹಾಸ್ಟೆಲ್‌ನ ಮೆಸ್‌ನಲ್ಲಿ ಕೆಲ ವಿದ್ಯಾರ್ಥಿಗಳು ಸಂಜೆ ಮಾಂಸಾಹಾರ ಸೇವಿಸುತ್ತಿದ್ದರು. ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ವಿದ್ಯಾರ್ಥಿಗಳು ಮಾಂಸಾಹಾರ ಸೇವಿಸದಂತೆ ಎಡಪಂಥೀಯ ವಿದ್ಯಾರ್ಥಿಗಳನ್ನು ತಡೆದಿದ್ದಾರೆ.

Left, ABVP students clash in JNU over eating non-veg food on Ram Navami


ಈ ಕುರಿತಂತೆ ಎರಡು ಗುಂಪಿನ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭದಲ್ಲಿ ಕಾವೇರಿ ಹಾಸ್ಟೆಲ್‌ನ ಮೆಸ್ ಕಾರ್ಯದರ್ಶಿ ಮೇಲೆ ಎಬಿವಿಪಿ ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆದರೆ, ಆರೋಪವನ್ನು ತಳ್ಳಿ ಹಾಕಿರುವ ಎಬಿವಿಪಿ ಸಂಘಟನೆ ಸದಸ್ಯರು, ಕಾವೇರಿ ಹಾಸ್ಟೆಲ್‌ನಲ್ಲಿ ರಾಮನವಮಿ ಪ್ರಾರ್ಥನೆಗೆ ಎಡಪಂಥೀಯ ವಿದ್ಯಾರ್ಥಿಗಳು ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ನೋಟಿಸ್ ಜಾರಿ ಮಾಡಿದ ವಿವಿ

ವಿದ್ಯಾರ್ಥಿಗಳ ನಡುವೆ ಘರ್ಷಣೆಯ ನಂತರ ವಿಶ್ವವಿದ್ಯಾಲಯವು ನೋಟಿಸ್ ಜಾರಿ ಮಾಡಿ, ಕ್ಯಾಂಪಸ್ ಮೆಸ್‌ನಲ್ಲಿ ಮಾಂಸಾಹಾರ ಸೇವನೆಗೆ ಯಾವುದೇ ನಿರ್ಬಂಧವಿಲ್ಲ ಎಂದು ಹೇಳಿದೆ. ವಿಶ್ವವಿದ್ಯಾನಿಲಯ ಆಡಳಿತದಿಂದ ಯಾವುದೇ ನಿಷೇಧವಿಲ್ಲ ಎಂದು ಅದು ಹೇಳಿದೆ.

"ರಂಜಾನ್ ಅಥವಾ ರಾಮನವಮಿ ... ಪ್ರತಿಯೊಬ್ಬರೂ ಅದನ್ನು ಅವರ ರೀತಿಯಲ್ಲಿ ಆಚರಿಸಬಹುದು" ಎಂದು ಜೆಎನ್‌ಯು ರೆಕ್ಟರ್ ಅಜಯ್ ದುಬೆ ಅವರು ಇಂಡಿಯಾ ಟುಡೆ ಟಿವಿಗೆ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.

Left, ABVP students clash in JNU over eating non-veg food on Ram Navami

''ಪ್ರತಿಯೊಬ್ಬರೂ ಅವರವರ ಧರ್ಮ ಪಾಲಿಸುತ್ತಾರೆ, ಊಟದ ವ್ಯವಸ್ಥೆಯನ್ನು ವಿದ್ಯಾರ್ಥಿ ಸಮಿತಿಯೇ ನಡೆಸುತ್ತಿದ್ದು, ಅವರೇ ಮೆನು ನಿರ್ಧರಿಸುತ್ತಾರೆ, ಸದ್ಯಕ್ಕೆ ಕ್ರಮ ಕೈಗೊಳ್ಳಲಾಗಿದೆ, ವಾರ್ಡನ್ ನೋಟಿಸ್ ಜಾರಿ ಮಾಡಿದ್ದು, ಪ್ರತಿಯೊಬ್ಬರು ಪೂಜೆ ಸಲ್ಲಿಸಬಹುದು ಎಂದು ಸ್ಪಷ್ಟಪಡಿಸಿದ್ದಾರೆ. ಅವನ/ಅವಳ ನಂಬಿಕೆಯ ಪ್ರಕಾರ ವಿಶ್ವವಿದ್ಯಾನಿಲಯದಿಂದ ಯಾವುದೇ ನಿಷೇಧವಿಲ್ಲ," ಎಂದು ಅವರು ಹೇಳಿದರು.

"ಎಬಿವಿಪಿ ಗೂಂಡಾಗಳು ತಮ್ಮ ದ್ವೇಷದ ರಾಜಕೀಯ ಮತ್ತು ವಿಭಜಕ ಅಜೆಂಡಾದಿಂದಾಗಿ ಕಾವೇರಿ ಹಾಸ್ಟೆಲ್‌ನಲ್ಲಿ ಹಿಂಸಾತ್ಮಕ ವಾತಾವರಣವನ್ನು ಸೃಷ್ಟಿಸಿದ್ದಾರೆ" ಎಂದು ಜೆಎನ್‌ಯು ವಿದ್ಯಾರ್ಥಿ ಸಂಘ (ಜೆಎನ್‌ಯುಎಸ್‌ಯು) ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+