ಕ್ರಿಶ್ಚಿಯನ್ ಮೈಖೆಲ್ ಪರ ವಕೀಲಿಕೆ; ಜೋಸೆಫ್ ಉಚ್ಚಾಟಿಸಿದ ಕಾಂಗ್ರೆಸ್
ನವದೆಹಲಿ, ಡಿಸೆಂಬರ್ 5: ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ವ್ಯವಹಾರದಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡಿದ ಆರೋಪ ಎದುರಿಸುತ್ತಿರುವ ಕ್ರಿಶ್ಚಿಯನ್ ಮೈಖೆಲ್ ಪರವಾಗಿ ಕೋರ್ಟ್ ನಲ್ಲಿ ಬುಧವಾರ ವಕೀಲಿಕೆ ಮಾಡಿದ ಅಲ್ ಜೋ ಜೋಸೆಫ್ ಅವರನ್ನು ಯುವ ಕಾಂಗ್ರೆಸ್ ನಿಂದ ಉಚ್ಚಾಟನೆ ಮಾಡಲಾಗಿದೆ.
ಭಾರತೀಯ ಯುವ ಕಾಂಗ್ರೆಸ್ ಕಾನೂನು ವಿಭಾಗದ ರಾಷ್ಟ್ರೀಯ ಉಸ್ತುವಾರಿಯಾಗಿದ್ದರು ವಕೀಲ ಅಲ್ ಜೋ ಜೋಸೆಫ್. ಮೈಖೆಲ್ ಪ್ರಕರಣವನ್ನು ಒಪ್ಪಿಕೊಳ್ಳುವ ಮುನ್ನ ಕಾಂಗ್ರೆಸ್ ಪಕ್ಷವನ್ನು ಸಂಪರ್ಕಿಸಿಲ್ಲ ಎಂಬ ಕಾರಣಕ್ಕೆ ಅವರನ್ನು ಉಚ್ಚಾಟನೆ ಮಾಡಲಾಗಿದೆ.

ಅಲ್ ಜೋ ಕೆ ಜೋಸೆಫ್ ತಮ್ಮಷ್ಟಕ್ಕೆ ಈ ಪ್ರಕರಣವನ್ನು ವಹಿಸಿಕೊಂಡಿದ್ದಾರೆ. ಈ ಪ್ರಕರಣವನ್ನು ಕೈಗೆತ್ತಿಕೊಳ್ಳುವ ಮೊದಲು ಅವರು ಯುವ ಕಾಂಗ್ರೆಸ್ ಅನ್ನು ಸಂಪರ್ಕಿಸಿಲ್ಲ. ಇಂಥ ಕಾರ್ಯಗಳನ್ನು ಯುವ ಕಾಂಗ್ರೆಸ್ ಬೆಂಬಲಿಸುವುದಿಲ್ಲ. ಆದ್ದರಿಂದ ಕಾನೂನು ವಿಭಾಗದ ಅಲ್ ಜೋ ಜೋಸೆಫ್ ರನ್ನು ತೆಗೆದುಹಾಕಿ, ತಕ್ಷಣದಿಂದ ಜಾರಿ ಆಗುವಂತೆ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಜಂಟಿ ಕಾರ್ಯದರ್ಶಿ ಕೃಷ್ಣ ಅಲ್ಲವರು ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.












Click it and Unblock the Notifications