ಯುಪಿ ಹಿಂಸಾಚಾರ: ಸಚಿವ ಅಜಯ್ ಮಿಶ್ರಾರನ್ನು ಭೇಟಿಯಾದ ಅಮಿತ್ ಶಾ
ನವದೆಹಲಿ, ಅಕ್ಟೋಬರ್ 06: ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಕೇಂದ್ರ ಗೃಹ ರಾಜ್ಯ ಸಚಿವ ಅಜಯ್ ಮಿಶ್ರಾ ಪುತ್ರ ಆಶೀಶ್ ಮಿಶ್ರಾ ರೈತರ ಮೇಲೆ ಕಾರು ಹರಿಸಿದ್ದಾರೆ. ಇದರಿಂದಾಗಿ ನಾಲ್ವರು ರೈತರು ಸಾವನ್ನಪ್ಪಿದ್ದಾರೆ ಎಂದು ಆರೋಪಗಳು ಇದೆ. ಈ ನಡುವೆ ಕೇಂದ್ರ ಗೃಹ ರಾಜ್ಯ ಸಚಿವ ಅಜಯ್ ಮಿಶ್ರಾರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾಗಿದ್ದಾರೆ. ಈ ನಡುವೆ ಅಜಯ್ ಮಿಶ್ರಾ ರಾಜೀನಾಮೆ ನೀಡಲು ಒತ್ತಡವಿದೆಯೇ ಎಂಬ ಅನುಮಾನಗಳು ಮೂಡಿ ಬಂದಿದೆ.
ಇನ್ನು ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಗೃಹ ರಾಜ್ಯ ಸಚಿವ ಅಜಯ್ ಮಿಶ್ರಾ ಈ ರೀತಿ ಒತ್ತಡವಿದೆ ಎಂಬ ಸುದ್ದಿಯನ್ನು ನಿರಾಕರಿಸಿದ್ದಾರೆ, "ನಾನು ಯಾಕೆ ರಾಜೀನಾಮೆ ನೀಡಬೇಕು. ನಾನು ರಾಜೀನಾಮೆ ನೀಡಬೇಕು ಎಂದು ನನ್ನ ಮೇಲೆ ಯಾವುದೇ ಒತ್ತಡವೂ ಇಲ್ಲ. ನಾವು ಈ ಉತ್ತರ ಪ್ರದೇಶದ ಘಟನೆಯ ಬಗ್ಗೆ ತನಿಖೆಯನ್ನು ನಡೆಸುತ್ತೇವೆ. ಯಾರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಅವರ ವಿರುದ್ಧ ಕ್ರಮವನ್ನು ಕೈಗೊಳ್ಳುತ್ತೇವೆ," ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿದಂತೆ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ ನಾಲ್ವರು ವಾಹನವು ಹಿಂಬದಿಯಿಂದ ವೇಗವಾಗಿ ಹರಿದು ಹೋದ ಹಿನ್ನೆಲೆ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಹಾಗೆಯೇ ಓರ್ವನ ಮೇಲೆ ಗುಂಡು ಹಾರಿಸಲಾಗಿದೆ ಎಂದು ಕೂಡಾ ಈಗ ಕೊಂಚ ಚೇತರಿಸಿಕೊಂಡಿರುವ ಗಾಯಾಳು ರೈತರು ಆರೋಪ ಮಾಡಿದ್ದಾರೆ.

ಹಾಗೆಯೇ ಈ ವಾಹನದಲ್ಲಿ ಕೇಂದ್ರ ಗೃಹ ರಾಜ್ಯ ಸಚಿವ ಅಜಯ್ ಮಿಶ್ರಾರ ಪುತ್ರ ಆಶೀಶ್ ಮಿಶ್ರಾ ಕೂಡಾ ಇದ್ದರು ಎಂಬ ಆರೋಪಗಳು ಕೇಳಿ ಬಂದಿದೆ. ಈ ಹಿನ್ನೆಲೆ ಆಶೀಶ್ ಮಿಶ್ರಾ ವಿರುದ್ದ ಎಫ್‌ಐಆರ್ ಕೂಡಾ ದಾಖಲು ಆಗಿದೆ. ಆದರೆ ಈವರೆಗೆ ಬಂಧನ ಮಾಡಿಲ್ಲ. ಈ ನಡುವೆ ಸಚಿವ ಅಜಯ್ ಮಿಶ್ರಾ ಆ ಕಾರು ತಮಗೆ ಸೇರಿದ್ದು ಎಂದು ಒಪ್ಪಿಕೊಂಡಿದ್ದಾರೆ. ಆದರೆ ಆ ಕಾರಿನಲ್ಲಿ ತಮ್ಮ ಪುತ್ರ ಇರಲಿಲ್ಲ ಆತ ಬೇರೆ ಕಾರ್ಯಕ್ರಮದಲ್ಲಿ ಇದ್ದ ಎಂದು ಹೇಳಿದ್ದಾರೆ. ಈ ಘಟನೆ ನಡೆದ ದಿನದಿಂದಲೇ ಸಚಿವರು ತನ್ನ ಮಗ ಘಟನಾ ಸ್ಥಳದಲ್ಲಿ ಇರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಸಚಿವರ ಪುತ್ರ ಆಶೀಶ್ ಪುತ್ರಾ ಕೂಡಾ ತಾನು ಅಲ್ಲಿ ಇರಲಿಲ್ಲ ಎಂದು ಹೇಳಿಕೊಂಡಿದ್ದಾರೆ.
"ಮೊದಲನೇ ದಿನದಿಂದ ಆ ಕಾರು ನಮ್ಮದೇ ಎಂಬುವುದನ್ನು ನಾವು ಸ್ಪಷ್ಟವಾಗಿ ಹೇಳಿದ್ದೇವೆ. ಆದರೆ ಕಾರಿನಲ್ಲಿ ನನ್ನ ಮಗ ಇರಲಿಲ್ಲ. ಆ ಕಾರು ನಮ್ಮ ಹೆಸರಲ್ಲಿ ರಿಜಿಸ್ಟರ್ ಆಗಿದೆ. ನಮ್ಮ ಕಾರ್ಯಕರ್ತರನ್ನು ಕರೆದುಕೊಂಡು ಬೇರೆ ಕಡೆಗೆ ನಮ್ಮ ಕಾರು ಹೋಗುತ್ತಿತ್ತು. ನನ್ನ ಮಗ ಬೇರೆ ಕಾರ್ಯಕ್ರಮದಲ್ಲಿ ಇದ್ದ," ಎಂದಿದ್ದಾರೆ. "ಬೆಳಿಗ್ಗೆ 11 ಗಂಟೆಯಿಂದ ಸಂಜೆಯವರೆಗೂ ನನ್ನ ಮಗ ಬೇರೆ ಕಾರ್ಯಕ್ರಮದಲ್ಲಿಯೇ ಇದ್ದ. ಆ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಇದ್ದರು. ಅದರ ವಿಡಿಯೋ, ಫೋಟೋ ಎಲ್ಲವೂ ಇದೆ. ಹಾಗೆಯೇ ಆತನ ಲೊಕೇಶನ್ ಅನ್ನು ನೋಡಿದರೂ ನಿಮಗೆ ತಿಳಿಯುತ್ತದೆ. ಆಶೀಶ್ ಮಿಶ್ರಾ ಬೇರೆ ಕಾರ್ಯಕ್ರಮದಲ್ಲಿ ಇದ್ದರು ಎಂದು ಹೇಳಲು ಸಾವಿರಾರು ಜನರು ಸಾಕ್ಷಿ ಇದ್ದಾರೆ," ಎಂದು ಕೂಡಾ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ಈ ನಡುವೆ "ಸುಮಾರು ಮೂರು ಗಂಟೆ ಹೊತ್ತಿಗೆ ಸಚಿವರು ದಾರಿ ಬದಲಾಯಿಸಿದ್ದಾರೆ ಎಂದು ನಮಗೆ ತಿಳಿಯಿತು. ಆದ್ದರಿಂದ ನಾವು ಹಿಂದಕ್ಕೆ ತೆರಳುತ್ತಿದ್ದೆವು. ಆದರೆ ದಿಢೀರನ್ನೇ ವೇಗವಾಗಿ ಹಿಂಬದಿಯಿಂದ ಬಂದ ಕಾರು ನಮ್ಮ ಮೇಲೆ ಹರಿದು ಕೊಂಡು ಹೋಯಿತು. ಕಾರು ಬಹುಶಃ ಗಂಟೆಗೆ ನೂರು ಕಿಲೋ ಮೀಟರ್ ವೇಗದಲ್ಲಿ ಇದ್ದಂತೆ ಇತ್ತು. ಸಂಚು ಮಾಡಿಯೇ ನಮ್ಮ ಮೇಲೆ ಕಾರು ಹರಿಸಲಾಗಿದೆ. ಅಜಯ್ ಮಿಶ್ರಾರ ಪುತ್ರ ಹಾಗೂ ಆತನ ಜೊತೆಗಾರರು ಆ ಕಾರಿನಲ್ಲಿ ಇದ್ದರು. ಬಳಿಕ ನನಗೆ ಪ್ರಜ್ಞೆ ತಪ್ಪಿತು. ಇನ್ನು ಈ ಸಂದರ್ಭದಲ್ಲಿ ತಳಮಳಗೊಂಡ ಜನರು ಬೆಂಗಾವಲು ವಾಹನದಲ್ಲಿದ್ದವರ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ನಮ್ಮ ಜನರು ಆ ಪೈಕಿ ಕೆಲವರನ್ನು ರಕ್ಷಿಸಿ ಪೊಲೀಸರ ವಶಕ್ಕೆ ಒಪ್ಪಿಸಿದ್ದೇವೆ.
(ಒನ್‌ಇಂಡಿಯಾ ಸುದ್ದಿ)
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications