• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚೀನಾ ವಶದಲ್ಲಿದೆಯೇ ಲಡಾಖ್? ಮೋದಿ ವಿರುದ್ಧ ರಾಹುಲ್ 'ವಿಡಿಯೋ' ಅಸ್ತ್ರ

|
Google Oneindia Kannada News

ಲಡಾಖ್, ಜುಲೈ 3: ಲಡಾಖ್ ವಿಚಾರಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ಮೋದಿ ವಿರುದ್ಧ ಆರೋಪ ಮುಂದುವರಿಸಿದ್ದಾರೆ. ಚೀನಾ ಜೊತೆಗೆ ಘರ್ಷಣೆ ಆದ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಲಡಾಖ್‌ಗೆ ತೆರಳಿ ಸೈನಿಕರಿಗೆ ಸ್ಫೂರ್ತಿ ಹೆಚ್ಚಿಸಿದ್ದಾರೆ.

   China reacts to Modi's surprise visit to galwan valley | Oneindia Kannada

   ಅದೇ ದಿನ ಟ್ವಿಟ್ಟರ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ರಾಹುಲ್ ಗಾಂಧಿ, ಲಡಾಖ್ ಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡಿದೆ, ಅಲ್ಲಿನ ಜನರು ಅದನ್ನು ಸಾರಿ ಹೇಳುತ್ತಿದ್ದಾರೆ. ಆದರೆ, ಮೋದಿ ಮಾತ್ರ ನಮ್ಮ ಭೂಮಿಯನ್ನು ಯಾರೂ ವಶಪಡಿಸಿಕೊಂಡಿಲ್ಲ ಅಂತಿದ್ದಾರೆ.

   ಶತ್ರುಗಳಿಗೆ ಶೌರ್ಯದ ಪರಿಚಯ ಮಾಡಿಸಿದ್ದೀರಿ ಎಂದ ಮೋದಿಶತ್ರುಗಳಿಗೆ ಶೌರ್ಯದ ಪರಿಚಯ ಮಾಡಿಸಿದ್ದೀರಿ ಎಂದ ಮೋದಿ

   ಹಾಗಾದ್ರೆ, ಈ ವಿಚಾರದಲ್ಲಿ ಯಾರೋ ಒಬ್ಬರು ಸುಳ್ಳು ಹೇಳುತ್ತಿದ್ದಾರೆ ಎಂದು ಮೋದಿಯನ್ನು ಟೀಕಿಸಿದ್ದಾರೆ. ಅಷ್ಟಕ್ಕೂ, ಏನಿದು? ರಾಹುಲ್ ಗಾಂಧಿಯ ಹೊಸ ಟ್ವೀಟ್? ಮುಂದೆ ಓದಿ....

   ಚೀನಾ ನಮ್ಮ ಭೂಮಿಯನ್ನು ಆಕ್ರಮಿಸಿಕೊಂಡಿದೆ

   ಚೀನಾ ನಮ್ಮ ಭೂಮಿಯನ್ನು ಆಕ್ರಮಿಸಿಕೊಂಡಿದೆ

   ನಮ್ಮ ಭೂಮಿಯನ್ನು ಚೀನಾ ಆಕ್ರಮಿಸಿಕೊಂಡಿದೆ ಎಂದು ಲಡಾಖ್‌ನ ಮೂಲ ನಿವಾಸಿಗಳು ವಿಡಿಯೋ ಮಾಡಿದ್ದಾರೆ. 'ಲಡಾಖ್ ಸ್ಪೀಖ್ಸ್' ಎಂಬ ಶೀರ್ಷಿಕೆಯಡಿ ಹಲವು ಜನರು ಅಲ್ಲಿನ ಪರಿಸ್ಥಿತಿಯ ಬಗ್ಗೆ ವಿವರಿಸಿದ್ದಾರೆ. ಚೀನಾ ದಿನೇ ದಿನೇ ಲಡಾಖ್ ಪ್ರದೇಶವನ್ನು ಆವರಿಸಿಕೊಳ್ಳುತ್ತಿದ್ದೇ, ನಾವು ಭಾರತೀಯರು, ನಮ್ಮನ್ನು ಚೀನಾ ವಶಕ್ಕೆ ಬಿಡಬೇಡಿ ಎಂದು ವಿನಂತಿಸಿಕೊಂಡಿರುವ ವಿಡಿಯೋವನ್ನು ರಾಹುಲ್ ಗಾಂಧಿ ಶೇರ್ ಮಾಡಿದ್ದಾರೆ.

   ಪ್ರಧಾನಿ ಮೋದಿ ಮೌನವೇಕೆ?

   ಪ್ರಧಾನಿ ಮೋದಿ ಮೌನವೇಕೆ?

   ಲಡಾಖ್ ಮಾತನಾಡುತ್ತಿದೆ, ನಾವು ಭಾರತೀಯರು, ಚೀನಾ ನಮ್ಮ ಭೂಮಿಯನ್ನು ಆಕ್ರಮಿಸಿದೆ. 20 ಯೋಧರು ಹುತಾತ್ಮರಾದರು. ಆದರೂ ಪ್ರಧಾನಿ ಮೋದಿ ಏಕೆ ಮೌನವಾಗಿದ್ದಾರೆ ಎಂದು ಆ ವಿಡಿಯೋದಲ್ಲಿ ಲಡಾಖ್ ಜನರು ಪ್ರಶ್ನಿಸಿದ್ದಾರೆ.

   ಇದರಲ್ಲಿ ಯಾರು ಸುಳ್ಳು ಹೇಳುತ್ತಿದ್ದಾರೆ?

   ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ರಾಹುಲ್ ಗಾಂಧಿ ''ಲಡಾಖ್ ಹೇಳುತ್ತಿದೆ, ಚೀನಾ ನಮ್ಮ ಭೂಮಿಯನ್ನು ವಶಪಡಿಸಿಕೊಂಡಿದೆ. ಮೋದಿ ಹೇಳುತ್ತಿದ್ದಾರೆ, ನಮ್ಮ ಭೂಮಿಯನ್ನು ಯಾರು ಆಕ್ರಮಿಸಿಕೊಂಡಿಲ್ಲ. ನಿಸ್ಸಂಶಯವಾಗಿ ಯಾರೋ ಒಬ್ಬರು ಸುಳ್ಳು ಹೇಳುತ್ತಿದ್ದಾರೆ'' ಎಂದು ರಾಹುಲ್ ವಾಗ್ದಾಳಿ ನಡೆಸಿದ್ದಾರೆ.

   ಲಡಾಖ್‌ಗೆ ಭೇಟಿ ನೀಡಿದ ಮೋದಿ

   ಲಡಾಖ್‌ಗೆ ಭೇಟಿ ನೀಡಿದ ಮೋದಿ

   ಶುಕ್ರವಾರ ಲಡಾಖ್‌ನ ನಿಮು ಪ್ರದೇಶಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಯೋಧರನ್ನು ಉದ್ದೇಶಿಸಿ ಮಾತನಾಡಿದರು. ಚೀನಾ ಘರ್ಷಣೆಯಲ್ಲಿ ಹುತಾತ್ಮರಾದ 20 ಸೈನಿಕರಿಗೂ ಮೋದಿ ಸಂತಾಸ ಸೂಚಿಸಿ, ಭಾರತೀಯ ಸೇನೆ ಶೌರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಭಾರತದ ಶಕ್ತಿ ಎಂಥದ್ದು ಎಂದು ತಿಳಿದಿರದವರಿಗೆ ನಮ್ಮ ಪರಾಕ್ರಮ ತೋರಿಸಿದ್ದಾರೆ ಎಂದು ಶ್ಲಾಘಿಸಿದ್ದೀರಾ ಎಂದಿದ್ದಾರೆ.

   English summary
   Ladakhis claim China has occupied Indian land, congress leader Rahul Gandhi share that video and alleged against PM Modi.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X