ಖಾಲಿಸ್ತಾನ್ ಮುಖ್ಯಸ್ಥ ಹರ್ಮಿಂದರ್ ಸಿಂಗ್ ಮಿಂಟೂ ಬಂಧನ

Posted By:
Subscribe to Oneindia Kannada

ನವದೆಹಲಿ, ನವೆಂಬರ್ 28: ಪಂಜಾಬಿನ ನಾಭಾ ಜೈಲಿನಿಂದ ಪರಾರಿಯಾಗಿದ್ದ ಉಗ್ರ, ಖಾಲಿಸ್ತಾನ್ ವಿಮೋಚನಾ ದಳದ ಮುಖ್ಯಸ್ಥ ಹರ್ಮಿಂದರ್ ಸಿಂಗ್ ಮಿಂಟೂ ನನ್ನು ದೆಹಲಿಯಲ್ಲಿ ಬಂಧಿಸಲಾಗಿದೆ.

ಭಾನುವಾರದಂದು 10ಕ್ಕೂ ಅಧಿಕ ಸಶಸ್ತ್ರ ಉಗ್ರರು ಜೈಲಿಗೆ ನುಗ್ಗಿ ಖಾಲಿಸ್ತಾನ್ ವಿಮೋಚನಾ ದಳದ ಮುಖ್ಯಸ್ಥ ಹರ್ಮಿಂದರ್ ಸಿಂಗ್ ಮಿಂಟೂ ಸೇರಿದಂತೆ ನಾಲ್ವರು ಉಗ್ರರನ್ನು ತಮ್ಮೊಂದಿಗೆ ಕರೆದೊಯ್ದಿದ್ದರು. ಈ ಘಟನೆ ನಡೆದ 24ಗಂಟೆಯೊಳಗೆ ಉಗ್ರ ಮಿಂಟೂನನ್ನು ಸೆರೆ ಹಿಡಿಯಲಾಗಿದೆ.

KLF chief Mintoo who escaped from Punjab jail arrested

ಹರ್ಮಿಂದರ್ ಜತೆಗೆ ಗುರ್ಪ್ರೀತ್ ಸಿಂಗ್, ವಿಕಿ ಗೋಂಧ್ರಾ, ನಿತಿನ್ ಡಿಯೋಲ್ ಹಾಗೂ ವಿಕ್ರಮ್ ಜೀತ್ ಸಿಂಗ್ ವಿಕಿ ಅವರು ಪರಾರಿಯಾಗಿದ್ದರು.

ಖಾಲಿಸ್ತಾನ್ ವಿಮೋಚನಾ ದಳದ ಮುಖ್ಯಸ್ಥ ಹರ್ಮೀಂದರ್ ಸಿಂಗ್ ಮಿಂಟೂ ಸಾಕಷ್ಟು ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು, ಪಾಕಿಸ್ತಾನ ಸೇರಿದಂತೆ ವಿದೇಶಗಳಲ್ಲಿ ಉಗ್ರ ಚಟುವಟಿಕೆಗಳನ್ನು ನಡೆಸುವ ಸಲುವಾಗಿ ನಿಧಿ ಸಂಗ್ರಹಿಸುತ್ತಿದ್ದ, ಈತನನ್ನು 2014ರಲ್ಲಿ ಬಂಧಿಸಲಾಗಿತ್ತು ಎಂದು ಡಿಜಿಪಿ ಹೆಚ್.ಎಸ್. ದಿಲ್ಲೋನ್ ಹೇಳಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Dreaded terrorist and Khalistan Liberation Force Chief, Harminder Singh Mintoo who escaped from the Punjab jail has been arrested. Following a major search operation, Mintoo was arrested in Delhi.
Please Wait while comments are loading...