ದೆಹಲಿ ಜನರ ಮೇಲೆ ಮತ್ತೆ ಸಮ-ಬೆಸ ಪ್ರಯೋಗ

Subscribe to Oneindia Kannada

ನವದೆಹಲಿ, ಫೆಬ್ರವರಿ, 11: ದೆಹಲಿ ಜನತೆ ಮೇಲೆ ಮತ್ತೆ ಅರವಿಂದ್ ಕೇಜ್ರಿವಾಲ್ ಸರ್ಕಾರ ಸಮ-ಬೆಸ ವಾಹನ ಸಂಚಾರದ ನಿಯಮವನ್ನು ಜಾರಿ ಮಾಡಿದೆ. ಎರಡನೇ ಹಂತದ ಸಮ-ಬೆಸ ವ್ಯವಸ್ಥೆ ಏಪ್ರಿಲ್ 15ರಿಂದ 30ರವರೆಗೆ ಜಾರಿಗೆ ಬರಲಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.

ಗುರುವಾರ ನಡೆದ ಸಂಪುಟ ಸಭೆಯ ನಂತರ ಮಾತನಾಡಿದ ಕೇಜ್ರಿವಾಲ್, ಸರ್ಕಾರಿ ಸಾರಿಗೆ ವಾಹನಗಳ ಸಂಖ್ಯೆ ಹೆಚ್ಚು ಮಾಡಲಾಗುವುದು. ವಿಐಪಿಗಳಿಗೆ, ಒಂಟಿ ಮಹಿಳಾ ಚಾಲಕರಿಗೆ ಹಾಗೂ ದ್ವಿಚಕ್ರ ವಾಹನಗಳಿಗೆ ಸಮ-ಬೆಸ ನಿಯಮದಿಂದ ರಿಯಾಯಿತಿ ಇದೆ ಎಂದು ತಿಳಿಸಿದರು. [ಕೇಜ್ರಿವಾಲ್ ಗೆ ಶೂ ಖರೀದಿ ಮಾಡಲು ಡಿಡಿ ಕಳಿಸಿದ ಇಂಜಿನಿಯರ್]

new delhi

ಜನವರಿ ಆರಂಭದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದಿದ್ದ ವ್ಯವಸ್ಥೆಗೆ ಪರ ವಿರೋಧದ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೆ ಸಮ-ಬೆಸ ಪದ್ಧತಿ ಉತ್ತಮವಾಗಿದ್ದು ಮತ್ತೆ ಜಾರಿಯಾಗಬೇಕು ಎಂದು ದೆಹಲಿಯ ಶೇ.78ರಷ್ಟು ಜನ ಕೇಳಿಕೊಂಡಿದ್ದರು.[ಸಮ-ಬೆಸ ಯಾರಿಗೆ ಲಾಭ: ದೆಹಲಿ ಹೈಕೋರ್ಟ್ ಪ್ರಶ್ನೆ]

ಯಾಕಾಗಿ ಸಮ-ಬೆಸ?
ಮಾಲಿನ್ಯ ನಿಯಂತ್ರಣ ಮತ್ತು ಟ್ರಾಫಿಕ್ ಸಮಸ್ಯೆ ಮುಕ್ತಿಯನ್ನು ಗಮನದಲ್ಲಿ ಇಟ್ಟುಕೊಂಡು ಸಮ-ಬೆಸ ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು. ದೆಹಲಿ ನ್ಯಾಯಾಲಯ ಸಹ ಹೊಸ ವ್ಯವಸ್ಥೆಯ ಪರಿಣಾಮಗಳ ವರದಿ ನೀಡಲು ದೆಹಲಿ ಸರ್ಕಾರಕ್ಕೆ ತಿಳಿಸಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The odd-even traffic scheme aimed at curbing pollution will be back in Delhi from April 15 to 30, Chief Minister Arvind Kejriwal announced on Thursday. He told a news conference that this was decided following feedback from the people of Delhi in the wake of the January 1-15 experiment which he and his ministers said had proved to be a hit.
Please Wait while comments are loading...