ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಸರ್ಕಾರ ಉರುಳಿಸಲು ಬಿಜೆಪಿಯಿಂದ ಹಣ ಬಳಕೆ: ರಾಹುಲ್ ಗಾಂಧಿ ಆರೋಪ

|
Google Oneindia Kannada News

ನವದೆಹಲಿ, ಜುಲೈ 12: ಕರ್ನಾಟಕದಲ್ಲಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಉರುಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ನಿರ್ಗಮಿತ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದರು.

ಮೈತ್ರಿ ಸರ್ಕಾರವನ್ನು ಪತನ ಮಾಡುವ ಉದ್ದೇಶಕ್ಕಾಗಿ ಬಿಜೆಪಿ ಹಣವನ್ನು ಉಪಯೋಗಿಸುತ್ತಿದೆ. ಆಡಳಿತದಲ್ಲಿರುವ ಸರ್ಕಾರವನ್ನು ಉರುಳಿಸುವುದು ಬಿಜೆಪಿಯ ಕೆಲಸ. ಹಣ ಅಧಿಕಾರ ಬಳಿಸಿ ಅದು ಆ ಕೆಲಸ ಮಾಡುತ್ತಿದೆ. ಇದನ್ನು ಎಲ್ಲ ಕಡೆಯೂ ಮಾಡುತ್ತಿದೆ. ನಾವು ಈಶಾನ್ಯದಲ್ಲಿಯೂ ಇದನ್ನು ನೋಡಿದ್ದೇವೆ ಎಂದು ಹೇಳಿದರು.

ಸಚಿವ ಶ್ರೀನಿವಾಸ್‌ಗೆ ಬಿಜೆಪಿ 60 ಕೋಟಿ ಆಫರ್ ನೀಡಿದ್ದು ನಿಜವೇ? ಸಚಿವ ಶ್ರೀನಿವಾಸ್‌ಗೆ ಬಿಜೆಪಿ 60 ಕೋಟಿ ಆಫರ್ ನೀಡಿದ್ದು ನಿಜವೇ?

ಬಿಜೆಪಿಯು ನೋಟು ಅಪನಗದೀಕರಣದ ಸಂದರ್ಭದಲ್ಲಿ ಸಾಕಷ್ಟು ಹಣವನ್ನು ಸಂಪಾದಿಸಿದೆ. ಅದನ್ನು ಶಾಸಕರನ್ನು ಖರೀದಿಸಲು ಬಳಸಿಕೊಳ್ಳುತ್ತಿದೆ. ಪರಿಸ್ಥಿತಿ ಹೇಗಿದೆಯೆಂದರೆ ಮಾರುಕಟ್ಟೆಯಿಂದ ಸರಕು ಖರೀದಿಸಿಕೊಂಡು ಬರುವಂತೆ ಶಾಸಕರನ್ನು ಖರೀದಿಸಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಆರೋಪಿಸಿದರು.

karnataka political crisis bjp uses money to bring down state governments rahul gandhi

ರಾಜ್ಯದಲ್ಲಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರ ರಾಜೀನಾಮೆಗೆ ಬಿಜೆಪಿಯೇ ಕಾರಣ ಎಂದು ನಾಯಕರು ಆರೋಪಿಸಿದ್ದಾರೆ. ಮುಂಬೈನಲ್ಲಿರುವ ಹೋಟೆಲ್‌ನಲ್ಲಿ ಅತೃಪ್ತ ಶಾಸಕರೊಂದಿಗೆ ಬಿಜೆಪಿ ಮಾತುಕತೆ ನಡೆಸಿದೆ. ಶಾಸಕರನ್ನು ಬೆದರಿಸಿ ತನ್ನ ಹಿಡಿತದಲ್ಲಿ ಇಟ್ಟುಕೊಂಡಿದೆ ಎಂದು ದೂರಿದ್ದಾರೆ.

English summary
karnataka political crisis: Congress leader Rahul Gandhi accused BJP uses money to bring down state governments.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X