ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಗರಣ ಬಯಲಿಗೆಳೆಯುತ್ತೇನೆ ಎಂದ ಸಚಿವನನ್ನು ಹೊರ ದಬ್ಬಿದ ಕೇಜ್ರಿ

ದೆಹಲಿಯಲ್ಲಿನ ನೀರಾವರಿ ಹಗರಣ ಬಯಲಿಗೆಳೆಯುತ್ತೇನೆ ಎಂದಿದ್ದ ನೀರಾವರಿ ಮತ್ತು ಪ್ರವಾಸೋದ್ಯಮ ಸಚಿವ ಕಪಿಲ್‌ ಮಿಶ್ರಾ ಅವರನ್ನು ಸಂಪುಟದಿಂದ ಕೈಬಿಡಲಾಗಿದೆ.ಕೈಲಾಶ್‌ ಗೆಹ್ಲೋಟ್‌ ಅವರನ್ನು ನೇಮಿಸಲು ಕೇಜ್ರಿವಾಲ್ ನಿರ್ಧರಿಸಿದ್ದಾರೆ.

By Mahesh
|
Google Oneindia Kannada News

ನವದೆಹಲಿ, ಮೇ 07: ದೆಹಲಿಯಲ್ಲಿನ ನೀರಾವರಿ ಹಗರಣ ಬಯಲಿಗೆಳೆಯುತ್ತೇನೆ ಎಂದಿದ್ದ ನೀರಾವರಿ ಮತ್ತು ಪ್ರವಾಸೋದ್ಯಮ ಸಚಿವ ಕಪಿಲ್‌ ಮಿಶ್ರಾ ಅವರನ್ನು ಸಂಪುಟದಿಂದ ಕೈಬಿಡಲಾಗಿದೆ.ಕೈಲಾಶ್‌ ಗೆಹ್ಲೋಟ್‌ ಅವರನ್ನು ನೇಮಿಸಲು ಕೇಜ್ರಿವಾಲ್ ನಿರ್ಧರಿಸಿದ್ದಾರೆ.

ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸಮರ್ಪಕವಾಗಿ ಕೆಲಸ ಮಾಡಲಿಲ್ಲ ಎಂಬ ಕಾರಣಕ್ಕೆ ಮಿಶ್ರಾ ಅವರನ್ನು ಸಂಪುಟದಿಂದ ಕೈಬಿಡಲಾಗಿದೆ ಎಂಬ ಮಾತುಗಳು ಕೇಳಿಬಂದಿವೆ.

'ಭ್ರಷ್ಟಾಚಾರ ಆರೋಪವಿಲ್ಲದ, ಸಿಬಿಐ ವಿಚಾರಣೆ ಎದುರಿಸದ ಏಕೈಕ ಸಚಿವ ನಾನು. ನನಗೆ ಮಾಹಿತಿಯನ್ನೂ ನೀಡದೆ ನನ್ನನ್ನು ಸಂಪುಟದಿಂದ ಹೊರಹಾಕಲಾಗಿದೆ. ಇದು ಕೇಜ್ರಿವಾಲ್ ಅವರ ಏಕಪಕ್ಷೀಯ ನಿರ್ಧಾರ' ಎಂದು ಮಿಶ್ರಾ ಟ್ವೀಟ್ ಮಾಡಿದ್ದಾರೆ.

Kapil Mishra sacked as Delhi water minister

ಯಾರಿಗೆ ಸ್ಥಾನ?: ಕೈಲಾಶ್‌ ಗೆಹ್ಲೋಟ್ ಅವರ ಜತೆಗೆ ಸೀಮಾಪುರಿ ಕ್ಷೇತ್ರದ ಶಾಸಕ ರಾಜೇಂದ್ರ ಗೌತಮ್ ಅವರನ್ನೂ ಸಂಪುಟಕ್ಕೆ ಸೇರಿಸಿಕೊಳ್ಳಲು ನಿರ್ಧರಿಸಲಾಗಿದೆ.

ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಭಾಗಿಯಾಗಿದ್ದಾರೆ ಎನ್ನಲಾದ ಟ್ಯಾಂಕರ್ ಹಗರಣದ ಬಗ್ಗೆ ಭಾನುವಾರ ಸ್ಫೋಟಕ ಮಾಹಿತಿಗಳನ್ನು ನೀಡುವುದಾಗಿ ಮಿಶ್ರಾ ಅವರು ಟ್ವೀಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಲಾಗಿದೆ.

English summary
The Arvind Kejriwal government on Saturday sacked Kapil Mishra as the water minister, days after he sided with senior party leader Kumar Vishwas who has been at loggerheads with the party leadership.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X