ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ರೇಪ್ ಕೇಸ್ ಬಾಲಾಪರಾಧಿ ರಹಸ್ಯವಾಗಿ ಬಿಡುಗಡೆ

By Mahesh
|
Google Oneindia Kannada News

ನವದೆಹಲಿ, ಡಿ.20: 2012 ಡಿಸೆಂಬರ್ 16ರ ದೆಹಲಿ ಪ್ಯಾರಾ ಮೆಡಿಕಲ್ ವಿದ್ಯಾರ್ಥಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಾಲಾಪರಾಧಿಯನ್ನು ದೆಹಲಿ ಪೊಲೀಸರು ಭಾನುವಾರ ಸಂಜೆ ರಹಸ್ಯವಾಗಿ ಬಿಡುಗಡೆ ಮಾಡಿದ್ದಾರೆ.

ಬಾಲ ಅಪರಾಧಿಗಳಿಗೆ ನೀಡುವ ಗರಿಷ್ಠ 3 ವರ್ಷ ಜೈಲು ಶಿಕ್ಷೆಯನ್ನು ಆತ ಪೂರೈಸಿರುವ ಹಿನ್ನೆಲೆಯಲ್ಲಿ ಪೊಲೀಸರ ವಶದಿಂದ ಮುಕ್ತನಾಗಿದ್ದಾನೆ. ಈಗ ಬಾಲ ಅಪರಾಧಿಯ ಮೇಲೆ ನಿಗಾ ವಹಿಸಲು ಎನ್ ಜಿಒ ಮುಂದಾಗಿದೆ.

ಜ್ಯೋತಿ ಸಿಂಗ್ ಪೋಷಕರ ಪ್ರತಿಭಟನೆ: 3 ವರ್ಷ ಶಿಕ್ಷೆ ಪೂರ್ಣಗೊಳಿಸಿದ ಬಾಲ ಅಪರಾಧಿಯ ಬಿಡುಗಡೆಯನ್ನು ವಿರೋಧಿಸಿ ನಿರ್ಭಯಾ(ಜ್ಯೋತಿ ಸಿಂಗ್) ಪೋಷಕರು ಭಾನುವಾರ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಆದರೆ, ಅನುಮತಿ ದೊರೆಯದ ಕಾರಣ ಇಂಡಿಯಾ ಗೇಟ್ ಬಳಿ ಪ್ರತಿಭಟನೆ ಮುಂದುವರೆಸಿದ್ದಾರೆ.[ ಬಾಲಾಪರಾಧಿ ಬಿಡುಗಡೆ: ತ್ವರಿತ ವಿಚಾರಣೆಗೆ ಸುಪ್ರೀಂ ನಕಾರ]

Juvenile convict in 2012 Delhi rape case released amidst protests

ಕಳೆದ ಮೂರು ವರ್ಷಗಳಿಂದಲೂ ನಾವು ಬೀದಿ ಬೀದಿಗಳಲ್ಲಿ ಪ್ರತಿಭಟನೆ ನಡೆಸುತ್ತಾ ಸೋತು ಹೋಗಿದ್ದೇವೆ.ಆದರೆ ನಮ್ಮ ಪ್ರತಿಭಟನೆಗೆ ನ್ಯಾಯ ಸಿಗಲಿಲ್ಲ. ಮೋದಿ ಅವರು ನಮಗಾದ ಅನ್ಯಾಯದ ಬಗ್ಗೆ ಪ್ರತಿಕ್ರಿಯಿಸದೆ ವಿದೇಶ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಅಲ್ಲಿ ಹೋಗಿ ಯೋಗ ಕಲಿಸುತ್ತಾರೆ. ಇಲ್ಲಿ ಆಗಿರುವ ಅನ್ಯಾಯಕ್ಕೆ ಉತ್ತರಿಸುತ್ತಿಲ್ಲ. ನಮಗಾಗಿರುವ ಅನ್ಯಾಯಕ್ಕೆ ಹೊಣೆ ಯಾರು ಎಂದು ಜ್ಯೋತಿ ಸಿಂಗ್ ತಂದೆ ಬದ್ರಿನಾಥ್ ಪ್ರಶ್ನಿಸಿದ್ದಾರೆ.

ಜನಪ್ರತಿನಿಧಿಗಳ ಮಗಳ ಮೇಲೆ ಅತ್ಯಾಚಾರವಾಗಿದ್ದರೆ ತೀರ್ಪು ಬೇರೆಯದ್ದೇ ಆಗುತ್ತಿತ್ತು. ಬಾಲ ಅಪರಾಧಿಗೆ ಮರಣ ದಂಡನೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ.

ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಾಲಾಪರಾಧಿ ಬಿಡುಗಡೆಗೆ ತಡೆ ಕೋರಿ ದೆಹಲಿಯ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಳ್ ಅವರು ಶನಿವಾರ ತಡರಾತ್ರಿ ಸಲ್ಲಿಸಿದ್ದ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪರಿಶೀಲಿಸಿದ ಸುಪ್ರೀಂಕೋರ್ಟಿನ ರಜಾಕಾಲದ ಪೀಠ, ಅರ್ಜಿಯ ತುರ್ತು ವಿಚಾರಣೆ ನಡೆಸಲು ಸಾಧ್ಯವಿಲ್ಲ. ಸೋಮವಾರ(ಡಿ.21) ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳಬಹುದು ಎಂದಿದೆ.

ಡಿಸೆಂಬರ್ 16ರಂದು ದೆಹಲಿಯಲ್ಲಿ ಚಲಿಸುತ್ತಿದ್ದ ಬಸ್ಸಿನಲ್ಲಿ ಆರು ಜನ ದುರುಳರು 23 ವರ್ಷದ ಅರೆ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಅಮಾನುಷವಾಗಿ ಅತ್ಯಾಚಾರವೆಸಗಿ, ಆಕೆಯ ಹೊಟ್ಟೆ ಮತ್ತು ಮರ್ಮಾಂಗವನ್ನು ಬಗೆದುಹಾಕಿದ್ದರು. ನಂತರ ಆಕೆ ಮತ್ತು ಆಕೆಯ ಜೊತೆಗಿದ್ದ ಸ್ನೇಹಿತನನ್ನು ಚಲಿಸುತ್ತಿದ್ದ ಬಸ್ಸಿನಿಂದಲೇ ಬೆತ್ತಲು ಸ್ಥಿತಿಯಲ್ಲಿ ಬಿಸಾಕಿದ್ದರು. ಈ ಘಟನೆ ರಾಷ್ಟ್ರದಾದ್ಯಂತ ಭಾರೀ ಆಕ್ರೋಶಕ್ಕೆ ಗುರಿಯಾಗಿತ್ತು. ಹದಿನೈದು ದಿನಗಳ ಹೋರಾಟ ನಡೆಸಿ ಕೊನೆಗೆ ಡಿಸೆಂಬರ್ 30ರಂದು ಸಿಂಗಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಳು.(ಒನ್ ಇಂಡಿಯಾ ಸುದ್ದಿ)

English summary
The juvenile convict in the December 16, 2012 Delhi gang-rape was released amidst protests by the victims's parents at India Gate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X