ಜೆಎನ್ ಯು ಹಿಂಸಾಚಾರ: ಸಿಸಿ ಕ್ಯಾಮರಾದಲ್ಲಿ ಸೆರೆಯಾದ ಅಸಲಿ ಸತ್ಯ

ನವದೆಹಲಿ, ಜನವರಿ.10: ದೆಹಲಿಯ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರದ ಹಿಂದಿನ ಕಥೆ ಹೇಳುವಂತಾ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ದೆಹಲಿ ಪೊಲೀಸರು ಶುಕ್ರವಾರ ಬಿಡುಗಡೆ ಮಾಡಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅಪರಾಧ ವಿಭಾಗದ ಡಿಸಿಪಿ ಜಾಯ್ ತಿರ್ಕಿ ಮಾಹಿತಿ ನೀಡಿದ್ದಾರೆ. ಜನವರಿ.05ರ ಭಾನುವಾರ ಜೆಎನ್ ಯುನಲ್ಲಿ ನಡೆದ ಹಿಂಸಾಚಾರವನ್ನು ಅಪರಾಧ ಪ್ರಕರಣ ಎಂದು ಪರಿಗಣಿಸಲಾಗಿದೆ. ಇದು ವಿದ್ಯಾರ್ಥಿಗಳಿಗೆ ಸಂಬಂಧಿಸಿದ ವಿಚಾರವಾಗಿದ್ದು, ಸರಿಯಾದ ದೃಷ್ಟಿಕೋನದಲ್ಲಿ ತನಿಖೆ ನಡೆಸಲಾಗುತ್ತದೆ ಎಂದು ಹೇಳಿದರು.

ಜೆಎನ್ ಯುನಲ್ಲಿ ನಡೆದ ಹಿಂಸಾಚಾರ ಕುರಿತು ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಜೆಎನ್ ಯು ವಿದ್ಯಾರ್ಥಿ ಸಂಘಟನೆಯ ಮುಖ್ಯಸ್ಥೆ ಐಶಾ ಘೋಷ್ ಸೇರಿದಂತೆ ಒಂಬತ್ತು ಮಂದಿ ಹಿಂಸಾಚಾರದಲ್ಲಿ ಭಾಗಿಯಾಗಿರುವುದಾಗಿ ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೆಎನ್ ಯುನಲ್ಲಿ ಆನ್ ಲೈನ್ ರಿಜಿಸ್ಟ್ರೇಷನ್ ಗೆ ವಿರೋಧ

ಜೆಎನ್ ಯುನಲ್ಲಿ ಆನ್ ಲೈನ್ ರಿಜಿಸ್ಟ್ರೇಷನ್ ಗೆ ವಿರೋಧ

ಜೆಎನ್ ಯು ಆಡಳಿತ ಮಂಡಳಿಯು ಆನ್ ಲೈನ್ ರಿಜಿಸ್ಟ್ರೇಷನ್ ಗೆ ಜನವರಿ.01 ರಿಂದ 5ವರೆಗೂ ದಿನಾಂಕ ನಿಗದಿಗೊಳಿಸಲಾಗಿತ್ತು. ಆದರೆ, ನಾಲ್ಕು ವಿದ್ಯಾರ್ಥಿ ಸಂಘಟನೆಗಳು ಆಡಳಿತ ಮಂಡಳಿ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಮೊದಲಿಗೆ ಆನ್ ಲೈನ್ ವ್ಯವಸ್ಥೆಯಲ್ಲಿರುವ ಸಮಸ್ಯೆಗಳನ್ನು ಬಗೆಹರಿಸುವಂತೆ ಆಡಳಿತ ಮಂಡಳಿಗೆ ತಾಕೀತು ಮಾಡಿದ್ದವು. ಅಲ್ಲದೇ ಆನ್ ಲೈನ್ ರಿಜಿಸ್ಟ್ರೇಷನ್ ಗೆ ತೆರಳಿದ ವಿದ್ಯಾರ್ಥಿಗಳನ್ನು ಈ ಸಂಘಟನೆಯವರು ಬೆದರಿಸುತ್ತಿದ್ದರು ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ.

ಪೊಲೀಸರು ಆರೋಪಿಸುತ್ತಿರುವ ನಾಲ್ಕು ಸಂಘಟನೆಗಳು

ಪೊಲೀಸರು ಆರೋಪಿಸುತ್ತಿರುವ ನಾಲ್ಕು ಸಂಘಟನೆಗಳು

ಸ್ಟೂಡೆಂಟ್ಸ್ ಫ್ರೆಂಟ್ ಆಫ್ ಇಂಡಿಯಾ, ಅಖಿಲ ಭಾರತ ವಿದ್ಯಾರ್ಥಿ ಒಕ್ಕೂಟ, ಅಖಿಲ ಭಾರತ ವಿದ್ಯಾರ್ಥಿಗಳ ಸಂಘ ಹಾಗೂ ಪ್ರಜಾಪ್ರಭುತ್ವ ವಿದ್ಯಾರ್ಥಿಗಳ ಒಕ್ಕೂಟಗಳು ಜೆಎನ್ ಯುನಲ್ಲಿ ಆನ್ ಲೈನ್ ರಿಜಿಸ್ಟ್ರೇಷನ್ ಗೆ ವಿರೋಧ ವ್ಯಕ್ತಪಡಿಸಿದ ವಿದ್ಯಾರ್ಥಿ ಸಂಘಟನೆಗಳು ಎಂದು ತನಿಖೆ ವೇಳೆ ತಿಳಿದು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಒಂಬತ್ತು ಆರೋಪಿಗಳನ್ನು ಪತ್ತೆ ಮಾಡಿರುವ ಪೊಲೀಸರು

ಒಂಬತ್ತು ಆರೋಪಿಗಳನ್ನು ಪತ್ತೆ ಮಾಡಿರುವ ಪೊಲೀಸರು

ಇನ್ನು, ಪೊಲೀಸರು ನಡೆಸಿದ ವಿಚಾರಣೆ ವೇಳೆ ಜವಾಹರ್ ಲಾಲ್ ನೆಹರೂ ವಿದ್ಯಾರ್ಥಿ ಸಂಘಟನೆ ಮುಖ್ಯಸ್ಖೆ ಐಶಾ ಘೋಷ್ ಸೇರಿದಂತೆ ಒಂಬತ್ತು ಆರೋಪಿಗಳು ಹಿಂಸಾಚಾರದಲ್ಲಿ ಭಾಗಿಯಾಗಿರುವ ಬಗ್ಗೆ ಪೊಲೀಸರು ಸಾಕ್ಷ್ಯವ ಪತ್ತೆ ಮಾಡಿದ್ದಾರೆ. ಈ ಪೈಕಿ ಒಬ್ಬ ಹಳೆಯ ವಿದ್ಯಾರ್ಥಿ ಹಾಗೂ ಇಬ್ಬರು ಎಬಿವಿಸಿ ಸಂಘಟನೆಯ ಕಾರ್ಯಕರ್ತರು ಇರುವುದು ಬೆಳಕಿಗೆ ಬಂದಿದೆ. ಇನ್ನು, ಪೊಲೀಸರು ಗುರುತು ಪತ್ತೆ ಹಚ್ಚಿರುವ ಆರೋಪಿಗಳ ಪಟ್ಟಿ ಹೀಗಿದೆ.

1. ಚುಂಚುನ್ ಕುಮಾರ್ ( ಹಳೆಯ ವಿದ್ಯಾರ್ಥಿ )

2. ಐಶ್ ಘೋಶ್ ( ಜೆಎನ್ ಯುಎಸ್ ಯು ಮುಖ್ಯಸ್ಥೆ )

3. ಪಂಕಜ್ ಮಿಶ್ರಾ

4. ಭಾಸ್ಕರ್ ವಿಜಯ್

5. ಸುಚೇತಾ ತಾಲುಕ್ದರ್

6. ಪ್ರಿಯಾ ರಂಜನ್

7. ದೋಲನ್ ಸಮಂತಾ

8. ವಿಕಾಸ್ ಪಟೇಲ್

9. ಯೋಗೇಂದ್ರ ಭರದ್ವಾಜ್

"ಪೊಲೀಸರು ಮಾಡುತ್ತಿರುವ ಆರೋಪ ನಿರಾಧಾರ"

ಇನ್ನು, ದೆಹಲಿ ಪೊಲೀಸರು ತಮ್ಮ ವಿರುದ್ಧ ಮಾಡಿರುವ ಆರೋಪವು ನಿರಾಧಾರ ಎಂದು ಜೆಎನ್ ಯು ವಿದ್ಯಾರ್ಥಿ ಸಂಘಟನೆ ಮುಖ್ಯಸ್ಥೆ ಐಶಾ ಘೋಷ್ ಕಿಡಿ ಕಾರಿದ್ದಾರೆ. ಹಿಂಸಾಚಾರದಲ್ಲಿ ತಮ್ಮ ಕೈವಾಡವಿರುವ ಬಗ್ಗೆ ಪೊಲೀಸರಲ್ಲಿ ಯಾವ ಸಾಕ್ಷಿಯಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ, ತಾವು ನಿರಪರಾಧಿ ಎಂಬುದನ್ನು ಸಾಬೀತುಪಡಿಸುವಂತಾ ಸಾಕ್ಷ್ಯಾಧಾರಗಳು ತಮ್ಮ ಬಳಿಯಿವೆ ಎಂದು ಐಶಾ ಘೋಷ್ ಹೇಳಿದ್ದಾರೆ.

ವಿಸಿ ಜಗದೀಶ್ ಕುಮಾರ್ ವಜಾಗೊಳಿಸುವಂತೆ ಪಟ್ಟು

ವಿಸಿ ಜಗದೀಶ್ ಕುಮಾರ್ ವಜಾಗೊಳಿಸುವಂತೆ ಪಟ್ಟು

ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ನಿಯೋಗವು ರಾಷ್ಟ್ರೀಯ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಂಎಚ್ಆರ್ ಡಿ) ಕಾರ್ಯದರ್ಶಿ ಅಮಿತ್ ಖಾರೆ ಅವರನ್ನು ಭೇಟಿ ಮಾಡಿತು. ಜೆಎನ್ ಯುಎಸ್ ಯು ವಿದ್ಯಾರ್ಥಿಗಳ ಜೊತೆಗೆ ಕೆಲವು ಶಿಕ್ಷಕರು ಕೂಡಾ ವಿಶ್ವವಿದ್ಯಾಲಯದ ಕುಲಪತಿ ಎಂ.ಜಗದೀಶ್ ಕುಮಾರ್ ಅವರನ್ನು ವಜಾಗೊಳಿವಂತೆ ಮನವಿ ಮಾಡಿಕೊಂಡರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+