ಜೆಎನ್ ಯು ರೇಪ್ ಕೇಸ್: ವಿದ್ಯಾರ್ಥಿ ಮುಖಂಡ ಅಂದರ್

Posted By:
Subscribe to Oneindia Kannada

ನವದೆಹಲಿ, ಆಗಸ್ಟ್ 25: ಜವಹಾರಲಾಲ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿಯೊಬ್ಬಳ ಮೇಲೆ ಅತ್ಯಾಚಾರ ಎಸೆಗಿದ ಘಟನೆ ಬುಧವಾರ ವರದಿಯಾಗಿತ್ತು. ಆರೋಪ ಹೊತ್ತ ವಿದ್ಯಾರ್ಥಿ ಸಂಘಟನೆ ಮುಖಂಡ ಅನ್ಮೋಲ್ ರತನ್ ಅವರು ಬುಧವಾರ ತಡರಾತ್ರಿ ಪೊಲೀಸರ ಮುಂದೆ ಶರಣಾಗಿದ್ದಾನೆ.

ಜೆಎನ್ ಯುಯಲ್ಲಿ ವ್ಯಾಸಂಗ ಮಾಡುತ್ತಿರುವ 28 ವರ್ಷ ವಯಸ್ಸಿನ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪವನ್ನು ಅನ್ಮೋಲ್ ಹೊತ್ತುಕೊಂಡಿದ್ದಾರೆ. ಅತ್ಯಾಚಾರ ಎಸಗಿದ ಮೇಲೆ ಆಕೆಗೆ 13 ಬಾರಿ ಕರೆ ಮಾಡಿ, ವಿಷಯ ಮುಚ್ಚಿ ಹಾಕುವಂತೆ ಕೇಳಿಕೊಂಡಿದ್ದಾನೆ. ಆದರೆ, ವಿಷಯ ಪೊಲೀಸರ ಕಿವಿಗೆ ಬಿದ್ದಿದೆ.

JNU rape case: Accused Anmol Ratan surrenders

ಪೊಲೀಸರ ಮುಂದಿನ ಕ್ರಮ ಜರುಗಿಸುವುದಕ್ಕೂ ಮುನ್ನ ಅನ್ಮೋಲ್ ಬುಧವಾರ ರಾತ್ರಿ 10.15 ರ ವೇಳೆಗೆ ದಕ್ಷಿಣ ದೆಹಲಿಯಲ್ಲಿರುವ ವಸಂತ್ ಕುಂಜ್ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.

ಸಂತ್ರಸ್ತ ವಿದ್ಯಾರ್ಥಿನಿಯ ಜತೆ ಗೆಳೆತನ ಹೊಂದಿದ್ದ ಅನ್ಮೋಲ್, ಆಕೆಯ ಹಾಸ್ಟೆಲ್ ರೂಮಿಗೆ ತೆರಳಿ ಆಕೆಗೆ ಬೇಕಾಗಿದ್ದ ಸಿನಿಮಾವೊಂದನ್ನು ನೀಡಿದ್ದಾನೆ. ನಂತರ ಮತ್ತು ಬರಿಸುವ ಪಾನೀಯ ನೀಡಿ ಆಕೆ ಮೇಲೆ ರೇಪ್ ಮಾಡಿದ್ದಾನೆ.

ಅತ್ಯಾಚಾರ ಆರೋಪ ಹೊತ್ತ ಮೇಲೆ ಅನ್ಮೋಲ್ ನನ್ನು ಆಲ್ ಇಂಡಿಯಾ ಸ್ಟುಡೆಂಟ್ಸ್ ಅಸೋಸಿಯೇಷನ್ (ಎಐಎಸ್ ಎ) ನಿಂದ ಹೊರ ಹಾಕಲಾಗಿದೆ. ಅನ್ಮೋಲ್ ವಿರುದ್ಧ ಐಪಿಎಸ್ ಸೆಕ್ಷನ್ 376 ಹಾಗೂ 506 ಅನ್ವಯ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. (ಐಎಎನ್ಎಸ್)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Jawaharlal Nehru University student Anmol Ratan, who allegedly raped a 28-year-old PhD student, surrendered before police on Wednesday, police said.
Please Wait while comments are loading...