ಗಗನಸಖಿ ಜೇಬಲ್ಲಿ ಕೋಟಿ ಮೌಲ್ಯದ ಡಾಲರ್ಸ್! ಬೆಚ್ಚಿಬಿದ್ದ ಜೆಟ್ ಏರ್ವೇಸ್!

Posted By:
Subscribe to Oneindia Kannada

ನವದೆಹಲಿ, ಜನವರಿ 09: ಸುಮಾರು 3.21 ಕೋಟಿ ರೂ. ಮೌಲ್ಯದ ಅಮೆರಿಕನ್ ಡಾಲರ್ ಗಳನ್ನು ಸಂಗ್ರಹಿಸಿಕೊಂಡಿದ್ದ ಜೆಟ್ ಏರ್ವೇಸ್ ನ ಗಗನಸಖಿಯೊಬ್ಬರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ(DRI) ವಶಕ್ಕೆ ಪಡೆದಿದೆ.

ಹಾಂಗ್ ಕಾಂಗ್ ಜೆಟ್ ಏರ್ವೇಸ್ ಗಗನಸಖಿ ದೆಹಲಿಗೆ ಬಂದಿದ್ದರು. ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಅವರ ಬ್ಯಾಗೇಜ್ ತಪಾಸಣೆ ಮಾಡಿದಾಗ ಅವರ ಬಳಿ ಬೆಳ್ಳಿ ಬಣ್ಣದ ಪೇಪರ್ ಗಳಿಂದ ಸುತ್ತಿದ 3.21 ಕೋಟಿ ರೂ. ಮೌಲ್ಯದ ಸಾಕಷ್ಟು ಯುಎಸ್ ಡಾಲರ್ ಗಳು ಇದ್ದಿದ್ದು ಪತ್ತೆಯಾಗಿತ್ತು.

ಟಾಯ್ಲೆಟ್ ನಲ್ಲಿ 37.17 ಲಕ್ಷ ಮೌಲ್ಯದ ಚಿನ್ನದ ಬಿಸ್ಕೆಟ್!

ಈ ಕುರಿತು ಪ್ರತಿಕ್ರಿಯೆ ನೀಡಿದ ಜೆಟ್ ಏರ್ವೇಸ್ ಆಡಳಿತ ಮಂಡಳಿ, "ಜೆಟ್ ಏರ್ವೇಸ್ ಎಂದಿಗೂ ಇಂಥ ನಡೆಗಳನ್ನು ಪ್ರೋತ್ಸಾಹಿಸುವುದಿಲ್ಲ. ನಮ್ಮ ಸಿಬ್ಬಂದಿಗಳಿಗಾಗಿ ಕೆಲವು ನೀತಿ ಸಂಹಿತೆಗಳಿವೆ. ಅದನ್ನು ಅನುಸರಿಸದವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುತ್ತೇವೆ" ಎಂದಿದೆ.

Jet Airways employee arrested with Rs 3.21 crore in US dollars

ಯಾವುದೇ ವ್ಯಕ್ತಿಯೂ ಸೂಕ್ತ ದಾಖಲೆಗಳಿಲ್ಲದೆ ಇಷ್ಟೊಂದು ಮೌಲ್ಯದ ವಿದೇಶಿ ಕರೆನ್ಸಿಯನ್ನು ಹೊಂದುವುದು ಅಪರಾಧ. ಆದ್ದರಿಂದ ಕಂದಾಯ ಸಚಿವಾಲಯ ನೀಡುವ ಸೂಚನೆಯ ಮೇರೆಗೆ ಗಗನಸಖಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಜೆಟ್ ಏರ್ವೇಸ್ ಹೇಳಿದೆ.ಗಗನಸಖಿಯನ್ನು ಇಂದು ಮಧ್ಯಾಹ್ನ ಪಟಿಯಾಲ ಹೌಸ್ ಕೋರ್ಟ್ ನಲ್ಲಿ ವಿಚಾರಣೆ ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Directorate of Revenue Intelligence (DRI) has arrested a Jet Airways employee at the Indira Gandhi International Airport for allegedly carrying US dollars worth Rs 3.21 crore.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ