• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

370ನೇ ವಿಧಿ ರದ್ದು: ಇತಿಹಾಸದ ತಪ್ಪನ್ನು ಸರಿಪಡಿಸಲಾಗಿದೆ ಎಂದ ಕಾಂಗ್ರೆಸ್ ಮುಖಂಡ

|

ನವದೆಹಲಿ, ಆಗಸ್ಟ್ 05: ಸಂವಿಧಾನದ 370 ನೇ ವಿಧಿಯನ್ನು ರದ್ದು ಮಾಡಿದ ಕೇಂದ್ರ ಸರ್ಕಾರದ ಕ್ರಮವನ್ನು ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ದ್ವಿವೇದಿ ಸ್ವಾಗತಿದ್ದಾರೆ.

ಹಳೆಯ ಕನಸೊಂದನ್ನು ನನಸು ಮಾಡಿದಿರಿ : ಎಲ್‌.ಕೆ.ಅಡ್ವಾಣಿ ಸಂತಸಹಳೆಯ ಕನಸೊಂದನ್ನು ನನಸು ಮಾಡಿದಿರಿ : ಎಲ್‌.ಕೆ.ಅಡ್ವಾಣಿ ಸಂತಸ

"ಇತಿಹಾಸದಲ್ಲಿ ಮಾಡಿದ ತಪ್ಪನ್ನು ಇದೀಗ ಸರಿಪಡಿಸಲಾಗಿದೆ" ಎಂಬ ಅಚ್ಚರಿಯ ಹೇಳಿಕೆಯನ್ನು ದ್ವಿವೇದಿ ನೀಡಿದ್ದಾರೆ.

ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು : ಯಾರು, ಏನು ಹೇಳಿದರು?ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು : ಯಾರು, ಏನು ಹೇಳಿದರು?

"ನಾನು ರಾಜಕೀಯದ ಪಾಠಗಳನ್ನು ಕಲಿತಿದ್ದು ರಾಮ್ ಮನೋಹರ್ ಲೋಹಿಯಾ ಅವರ ಬಳಿ. ಅವರು ನನ್ನ ರಾಜಕೀಯ ಗುರು. ಅವರು ಎಂದಿಗೂ ಸಂವಿಧಾನದ 370 ನೇ ವಿಧಿಯನ್ನು ಖಂಡಿಸುತ್ತಲೇ ಬಂದಿದ್ದರು. ಇತಿಹಾಸದಲ್ಲಿ ಮಾಡಲಾಗಿದ್ದ ತಪ್ಪನ್ನು ಇದೀಗ ಸರಿಪಡಿಸಲಾಗಿದೆ. ತಡವಾಗಿಯಾದರೂ ತಪ್ಪನ್ನು ತಿದ್ದಲಾಗಿದೆ" ಎಂದು ದ್ವಿವೇದಿ ಹೇಳಿದರು.

"ಇದು ನಮ್ಮ್ ಪಕ್ಷದ ಅಭಿಪ್ರಾಯವಲ್ಲ. ಕಾಂಗ್ರೆಸ್ ನ ಅಭಿಪ್ರಾಯ ಈ ಬಗ್ಗೆ ಬೇರೆಯೇ ಇರಬಹುದು. ಆದರೆ ನಾನು ನನ್ನ ವೈಯಕ್ತಿಕ ಅಭಿಪ್ರಾಯ ಹೇಳುತ್ತಿದ್ದೇನೆ. ಇನ್ನಾದರೂ ಜಮ್ಮು ಮತ್ತು ಕಾಶ್ಮೀರ ಅಭಿವೃದ್ಧಿಯನ್ನು ಕಾಣಲಿ ಎಂಬುದು ನನ್ನ ಹಾರೈಕೆ" ಎಂದು ಅವರು ಹೇಳಿದರು.

English summary
Ram Manohar Lohia under whom I had political training was always against Article 370, says Janardan Dwivedi while welcoming abrogation
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X