ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರಾಡಳಿತ ಪ್ರದೇಶ ಪಾಂಡಿಚೆರಿ ಮಾದರಿಯಲ್ಲಿ ಜಮ್ಮು ಕಾಶ್ಮೀರದ ಆಡಳಿತ?

|
Google Oneindia Kannada News

ನವದೆಹಲಿ, ಆಗಸ್ಟ್ 05: ಜಮ್ಮು ಕಾಶ್ಮೀರ ಮತ್ತು ಲಡಾಕ್ ಅನ್ನು ಕೇಂದ್ರಾಡಳಿತ ಪ್ರದೇಶಗಳಾಗಿ ಕೇಂದ್ರ ಸರ್ಕಾರವು ಇಂದು ವಿಭಜನೆ ಮಾಡಿದೆ. ಈ ವಿಧೇಯಕಕ್ಕೆ ರಾಜ್ಯಸಭೆಯಲ್ಲಿ ಒಪ್ಪಿಗೆಯೂ ದೊರೆತಿದೆ.

ಸರ್ಕಾರವು ಮಂಡಿಸಿರುವ ವಿಧೇಯಕದ ಪ್ರಕಾರ, ಜಮ್ಮು ಕಾಶ್ಮೀರವು ಶಾಸಕಾಂಗ ಹೊಂದಿದ ಕೇಂದ್ರಾಡಳಿತ ಪ್ರದೇಶವಾಗಿ ಇರಲಿದೆ. ಆದರೆ ಲಡಾಕ್‌ ಶಾಸಕಾಂಗ ಇರದ ಕೇಂದ್ರಾಡಳಿತ ಪ್ರದೇಶ ಆಗಲಿದೆ.

LIVE: ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು, ರಾಜ್ಯಸಭೆಯಲ್ಲಿ ಅಂಗೀಕಾರLIVE: ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು, ರಾಜ್ಯಸಭೆಯಲ್ಲಿ ಅಂಗೀಕಾರ

ಕೇಂದ್ರಾಡಳಿತ ಪ್ರದೇಶವಾದ ಪಾಂಡಿಚೆರಿಯಲ್ಲಿ ಅನುಸರಿಸಲಾಗುತ್ತಿರುವ ಮಾದರಿಯನ್ನೇ ಜಮ್ಮು ಕಾಶ್ಮೀರಕ್ಕೆ ಅನ್ವಯಿಸಲಾಗುತ್ತದೆ ಎಂದು ಗೃಹ ಇಲಾಖೆಯ ಉನ್ನತ ಮೂಲಗಳಿಂದ ಹೇಳಿವೆ.

ಜಮ್ಮು ಕಾಶ್ಮೀರಕ್ಕೆ ದೇಶದ ಇತರ ರಾಜ್ಯಗಳಂತೆಯೇ ವಿಧಾನಸಭೆ ಇರುತ್ತದೆ, ಅದಕ್ಕಾಗಿ ಚುನಾವಣೆಯೂ ನಡೆಯುತ್ತದೆ, ಸರ್ಕಾರವೂ ರಚನೆ ಆಗುತ್ತದೆ. ಆದರೆ ಜಮ್ಮು ಕಾಶ್ಮೀರವು ಲೆಫ್ಟಿನೆಂಟ್ ಗೌರ್ನರ್ ಒಬ್ಬರ ಮೇಲ್ವಿಚಾರಣೆಯಲ್ಲಿರುತ್ತದೆ. ಆ ಗೌರ್ನರ್ ಅನ್ನು ಕೇಂದ್ರ ಸರ್ಕಾರ ನೇಮಿಸುತ್ತದೆ.

ದೆಹಲಿ ಪೊಲೀಸರು ಕೇಂದ್ರದ ಹಿಡಿತದಲ್ಲಿದ್ದಾರೆ

ದೆಹಲಿ ಪೊಲೀಸರು ಕೇಂದ್ರದ ಹಿಡಿತದಲ್ಲಿದ್ದಾರೆ

ಕೇಂದ್ರಾಡಳಿತ ಪ್ರದೇಶವಾದ ದೆಹಲಿಯಲ್ಲಿ ಈಗ ಇದೇ ಪರಿಸ್ಥಿತಿ ಇದೆ. ಸರ್ಕಾರ ಇದೆಯಾದರೂ ಅದು ಗೌರ್ನರ್ ಮೇಲ್ವಿಚಾರಣೆಯಲ್ಲಿ ಕಾರ್ಯ ನಿರ್ವಹಿಸಬೇಕಿದೆ. ಪೊಲೀಸ್ ಸಹ ಕೇಂದ್ರದ ಅಧೀನದಲ್ಲಿದೆ. ಆದರೆ ಪಾಂಡಿಚೆರಿಯಲ್ಲಿ ಸ್ಥಳೀಯ ಪೊಲೀಸರು ಸರ್ಕಾರದ ಅಧೀನದಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದಾರೆ. ಇದೇ ಮಾದರಿಯನ್ನು ಜಮ್ಮು ಕಾಶ್ಮೀರದಲ್ಲಿಯೂ ತರಲಾಗುತ್ತದೆ.

ಇತರ ರಾಜ್ಯಗಳಂತೆ ಎಲ್ಲವೂ ಇರಲಿದೆ

ಇತರ ರಾಜ್ಯಗಳಂತೆ ಎಲ್ಲವೂ ಇರಲಿದೆ

ಜಮ್ಮು ಕಾಶ್ಮೀರದಲ್ಲಿ ಇತರ ರಾಜ್ಯಗಳಂತೆಯೇ ಶಾಸಕರು, ಸಂಸದರು, ರಾಜ್ಯ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕ ಎಲ್ಲರೂ ಇರುತ್ತಾರೆ ಆದರೆ ಸರ್ಕಾರದ ಮೇಲೆ ಲೆಫ್ಟಿನೆಂಟ್ ಗೌರ್ನರ್ ಒಬ್ಬರು ಇರುತ್ತಾರೆ.

"ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವ ಮತ್ತು ಒಕ್ಕೂಟ ತತ್ವದ ಕೊಲೆ"

ಜಮ್ಮು ಕಾಶ್ಮೀರದಲ್ಲಿ ಹೈಕೋರ್ಟ್ ಕಾರ್ಯನಿರ್ವಹಿಸುತ್ತದೆಯೇ?

ಜಮ್ಮು ಕಾಶ್ಮೀರದಲ್ಲಿ ಹೈಕೋರ್ಟ್ ಕಾರ್ಯನಿರ್ವಹಿಸುತ್ತದೆಯೇ?

ಕೇಂದ್ರಾಡಳಿತ ಪ್ರದೇಶವಾದ ಪಾಂಡಿಚೆರಿಯಲ್ಲಿ ಹೈಕೋರ್ಟ್‌ ಇಲ್ಲ, ಅಲ್ಲಿನ ಎಲ್ಲ ಪ್ರಕರಣಗಳು ಮದ್ರಾಸ್ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಒಳಪಡುತ್ತವೆ. ಆದರೆ ಜಮ್ಮು ಕಾಶ್ಮೀರದಲ್ಲಿ ಹೈಕೋರ್ಟ್ ಇದೆ. ಇಂದಿನ ನಂತರ ಅಲ್ಲಿ ಹೈಕೋರ್ಟ್‌ ಕಾರ್ಯನಿರ್ವಹಿಸುತ್ತದೆಯೋ ಇಲ್ಲವೋ, ಅಥವಾ ಜಮ್ಮು ಕಾಶ್ಮೀರದ ಪ್ರಕರಣಗಳು ದೆಹಲಿ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಒಪಡುತ್ತವೆಯೋ ನೋಡಬೇಕಿದೆ.

ಮೂರು ಕೇಂದ್ರಾಡಳಿತ ಪ್ರದೇಶಕ್ಕೆ ವಿಧಾನಸಭೆ ಇದೆ

ಮೂರು ಕೇಂದ್ರಾಡಳಿತ ಪ್ರದೇಶಕ್ಕೆ ವಿಧಾನಸಭೆ ಇದೆ

ಜಮ್ಮು ಕಾಶ್ಮೀರವನ್ನೂ ಸೇರಿ ದೇಶದಲ್ಲಿ ಪ್ರಸ್ತುತ ಒಂಬತ್ತು ಕೇಂದ್ರಾಡಳಿತ ಪ್ರದೇಶಗಳಿವೆ. ಅದರಲ್ಲಿ ಜಮ್ಮು ಕಾಶ್ಮೀರ, ದೆಹಲಿ, ಪಾಂಡಿಚೆರಿ ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಾತ್ರವೇ ವಿಧಾನಸಭೆ ಇದೆ. ಉಳಿದ ಆರು ಕೇಂದ್ರಾಡಳಿತ ಪ್ರದೇಶಗಳು ನೇರವಾಗಿ ಕೇಂದ್ರಸರ್ಕಾರದಿಂದಲೇ ಆಳ್ವಿಕೆಗೆ ಒಳಪಟ್ಟಿವೆ.

ಕಲಂ 370 ರದ್ದು, ಕಣಿವೆ ರಾಜ್ಯದಲ್ಲಿ ಏನೇನು ಬದಲಾಗಲಿದೆ?ಕಲಂ 370 ರದ್ದು, ಕಣಿವೆ ರಾಜ್ಯದಲ್ಲಿ ಏನೇನು ಬದಲಾಗಲಿದೆ?

English summary
Top Home Ministry sources tell OneIndia that Jammu and Kashmir would follow the Puducherry model, while functioning as a Union Territory.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X