ಸಿಎಎ ವಿರೋಧಿ ಹೋರಾಟ: ಜಾಮಿಯಾ ವಿವಿ ಹಿಂಸಾಚಾರಕ್ಕೆ ಈತನೇ ಕಾರಣ?

ನವದೆಹಲಿ, ಫೆಬ್ರವರಿ.18: ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿನ ಹಿಂಸಾಚಾರಕ್ಕೆ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಶಾರ್ಜಿಲ್ ಇಮಾಮ್ ಪ್ರಚೋದನಕಾರಿ ಭಾಷಣವೇ ಮುಖ್ಯ ಕಾರಣ ಎಂದು ದೆಹಲಿ ಪೊಲೀಸರು ಆರೋಪಿಸಿದ್ದಾರೆ.

ಕಳೆದ ಡಿಸೆಂಬರ್.15ರಂದು ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧ ಜಾಮಿಯಿ ವಿವಿ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆಯು ಹಿಂಸಾತ್ಮಕ ರೂಪಕ್ಕೆ ತಿರುಗಿತ್ತು. ಇದಕ್ಕೆ ಸಂಬಂಧಿಸಿದಂತೆ ಕಳೆದ ಫೆಬ್ರವರಿ.13ರಂದು ದೆಹಲಿ ಪೊಲೀಸರು ಚಾರ್ಜ್ ಶೀಟ್ ದಾಖಲಿಸಿದ್ದರು.

ಮಂಗಳವಾರ ದೆಹಲಿ ಪೊಲೀಸರು ದಾಖಲಿಸಿಕೊಂಡಿರುವ ಚಾರ್ಜ್ ಶೀಟ್ ನಲ್ಲಿ ಜೆಎನ್ ಯು ವಿದ್ಯಾರ್ಥಿ ಶಾರ್ಜಿಲ್ ಇಮಾಮ್ ಹೆಸರನ್ನು ಸೇರಿಸಲಾಗಿದೆ. ಅಲ್ಲದೇ, ಈ ವಿದ್ಯಾರ್ಥಿಯ ಪ್ರಚೋದನೆಯೇ ಹಿಂಸಾಚಾರಕ್ಕೆ ಪ್ರಮುಖ ಕಾರಣ ಎಂದು ಪೊಲೀಸರು ಆರೋಪಪಟ್ಟಿಯಲ್ಲಿ ದೂರಿದ್ದಾರೆ.

ಆರೋಪಿಗಳ ವಿರುದ್ಧ 8 ಕಾಯ್ದೆಗಳ ಅಡಿ ಚಾರ್ಜ್ ಶೀಟ್

ಆರೋಪಿಗಳ ವಿರುದ್ಧ 8 ಕಾಯ್ದೆಗಳ ಅಡಿ ಚಾರ್ಜ್ ಶೀಟ್

ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಚಾರ್ಜ್ ಶೀಟ್ ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ 8 ಕಾಯ್ದೆಗಳ ಅಡಿಯಲ್ಲಿ ಆರೋಪ ಪಟ್ಟಿ ಸಿದ್ಧಪಡಿಸಲಾಗಿದೆ. ಆರೋಪಿಗಳ ವಿರುದ್ಧ ದಾಖಲಿಸಿಕೊಂಡಿರುವ ಆರೋಪಪಟ್ಟಿ ಇಲ್ಲಿದೆ.

ಐಪಿಸಿ ಸೆಕ್ಷನ್ ಕಾಯ್ದೆ ಹೇಳುವುದೇನು?
307 ಕೊಲೆ ಯತ್ನ ಆರೋಪ
147 ಹಿಂಸಾಚಾರಕ್ಕೆ ಶಿಕ್ಷೆ
148 ಮಾರಕಾಸ್ತ್ರ ಮತ್ತು ಆಯುಧಗಳನ್ನು ಹಿಡಿದು ಹಿಂಸಾಚಾರ
149 ಕಾನೂನು ಬಾಹಿರ ಚಟುವಟಿಕೆ
186 ಸಾರ್ವಜನಿಕ ಸೇವೆಗೆ ಅಡ್ಡಿ
353 ಸರ್ಕಾರಿ ನೌಕರರ ಮೇಲೆ ಹಲ್ಲೆ
332 ಸರ್ಕಾರಿ ನೌಕರರಿಗೆ ನೋವುಂಟು ಮಾಡುವುದು
427 ಸಾರ್ವಜನಿಕ ಆಸ್ತಿಗೆ ಹಾನಿ ಉಂಟು ಮಾಡುವುದು
ದೆಹಲಿ ಪೊಲೀಸರಿಂದ ಸಾಕ್ಷ್ಯ ಸಂಗ್ರಹ ಕಾರ್ಯಾಚರಣೆ

ದೆಹಲಿ ಪೊಲೀಸರಿಂದ ಸಾಕ್ಷ್ಯ ಸಂಗ್ರಹ ಕಾರ್ಯಾಚರಣೆ

ಕಳೆದ ಡಿಸೆಂಬರ್.15ರಂದು ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಜಾಮಿಯಾ ಸಮನ್ವಯ ಸಮಿತಿಯು ವಿಡಿಯೋ ತುಣುಕನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ ಪೊಲೀಸರೇ ವಿವಿಯ ಲೈಬ್ರರಿಗೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿದೆ. ಈ ಕುರಿತು ತನಿಖೆ ನಡೆಸುತ್ತಿರುವ ಪೊಲೀಸರು ಸೂಕ್ತ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುತ್ತಿದ್ದಾರೆ.

ವಿವಿ ಲೈಬ್ರರಿಯಲ್ಲಿ ಕುಳಿತವರು ವಿದ್ಯಾರ್ಥಿಗಳಲ್ಲ ಎಂದ ಬಿಜೆಪಿ

ವಿವಿ ಲೈಬ್ರರಿಯಲ್ಲಿ ಕುಳಿತವರು ವಿದ್ಯಾರ್ಥಿಗಳಲ್ಲ ಎಂದ ಬಿಜೆಪಿ

ಇನ್ನು, ದೆಹಲಿ ಪೊಲೀಸರನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆ ಪ್ರತಿಕ್ರಿಯೆ ನೀಡಿದ್ದ ಬಿಜೆಪಿ ಜಾಮಿಯಾ ವಿವಿಯ ಗ್ರಂಥಾಲಯದಲ್ಲಿ ಕುಳಿತಿದ್ದವರು ವಿದ್ಯಾರ್ಥಿಗಳೇ ಅಲ್ಲ. ಹಿಂಸಾಚಾರದಲ್ಲಿ ಕಲ್ಲು ತೂರಾಟ ನಡೆಸಿದವರು, ಪೊಲೀಸ್ ಲಾಠಿ ಬೀಸುತ್ತಿದ್ದಂತೆ ಲೈಬ್ರರಿಗೆ ತೆರಳಿ ಬಾಗಿಲು ಹಾಕಿಕೊಂಡು ಕುಳಿತಿದ್ದರು ಎಂದು ಬಿಜೆಪಿ ಆರೋಪಿಸಿತ್ತು.

17 ಆರೋಪಿಗಳನ್ನು ಬಂಧಿಸಿರುವ ದೆಹಲಿ ಪೊಲೀಸರು

17 ಆರೋಪಿಗಳನ್ನು ಬಂಧಿಸಿರುವ ದೆಹಲಿ ಪೊಲೀಸರು

ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇದುವರೆಗೂ 17 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಎಲ್ಲ ಆರೋಪಿಗಳನ್ನು ದೆಹಲಿ ಪೊಲೀಸರು ವಿಚಾರಣೆಗೆ ಒಳಪಿಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+