• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜಾಮಿಯಾ ವಿವಿ ಪ್ರತಿಭಟನೆ ಲೈಕ್ ಮಾಡಿದ್ದು ಬೈ ಮಿಸ್ಟೇಕ್: ಅಕ್ಷಯ್ ಕುಮಾರ್

|

ನವದೆಹಲಿ, ಡಿಸೆಂಬರ್ 16: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಜಾಮಿಯಾ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಯನ್ನು ಬೈ ಮಿಸ್ಟೇಕ್ ಆಗಿ ಲೈಕ್ ಮಾಡಿದ್ದೇನೆ ಎಂದು ಬಾಲಿವುಡ್ ನಟ ಅಕ್ಷಯ್ ಕುಮಾರ್ ಹೇಳಿದ್ದಾರೆ.

ನನಗರಿವಿಲ್ಲದೇ ಮಾಡಿದ ಲೈಕ್ ನ್ನು ಕೆಲವೇ ಕ್ಷಣಗಳಲ್ಲಿ ಅನ್ ಲೈಕ್ ಮಾಡಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ. ಆದರೂ ಅವರು ಲೈಕ್ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

'ಅಕ್ಷಯ್ ಕುಮಾರ್ ಓಕೆ, ಕತ್ರಿನಾ ಕೈಫ್ ನಾಟ್ ಓಕೆ ಯಾಕೆ?'

ಟ್ವಿಟ್ಟರ್ ನಲ್ಲಿ ಸುಮ್ಮನೇ ಕಣ್ಣಾಡಿಸುವಾಗ ಈ ಪ್ರತಿಭಟನೆ ಟ್ವಿಟ್ ಕಂಡಿತು. ತಪ್ಪಾಗಿ ಲೈಕ್ ಒತ್ತಿಬಿಟ್ಟೆ, ನಂತರ ತಪ್ಪಿನ ಅರಿವಾಗಿ ಅನ್ ಲೈಕ್ ಮಾಡಿಬಿಟ್ಟೆ, ಇಂತಹ ದೇಶ ವಿರೋಧಿ ಕೃತ್ಯಗಳನ್ನು ನಾನು ಬೆಂಬಲಿಸುವುದಿಲ್ಲ ಎಂದು ಟ್ವಿಟ್ಟರ್ ನಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ.

ಅಕ್ಷಯ್ ಕುಮಾರ್ ಲೈಕ್ ಮಾಡಿದ ಅರ್ಧ ಗಂಟೆಯಲ್ಲಿಯೇ 2 ಸಾವಿರ ರೀಟ್ವಿಟ್ ಮತ್ತು 40 ಸಾವಿರಕ್ಕೂ ಹಚ್ಚು ಲೈಕ್ ಪಡೆದಿತ್ತು. ಕಳೆದ ಬಾರಿ ನಾನು ಕೆನಡಾ ಪೌರತ್ವ ಹೊಂದಿದ್ದೇನೆ ಎಂದಾಗ ಇದೇ ರೀತಿ ನೆಟ್ಟಿಗರ ಆಕ್ರೋಶಕ್ಕೆ ತುತ್ತಾಗಿದ್ದರು. ನಂತರ ಭಾರತದ ಪೌರತ್ವಕ್ಕೆ ಅರ್ಜಿ ಸಲ್ಲಿಸಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ.

English summary
Bollywood actor Akshay Kumar has said that the Jamia University students protesting against the Citizenship Amendment Act is like a By Mistake me.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X