ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದ ISIS ಸಹ ಸಂಸ್ಥೆಯಿಂದ ನ್ಯಾಯಾಧೀಶರ ಹತ್ಯೆಗೆ ಸಂಚು!

ಒಮರ್ ಅಲ್-ಹಿಂದಿ ಐಎಸ್ಐಎಸ್ ಪ್ರಕರಣವೆಂದೇ ಬಿಂಬಿತವಾಗಿರುವ ಈ ಪ್ರಕರಣದಲ್ಲಿ ಕೇರಳದ ಸುಮಾರು 8 ಮಂದಿ ಕಾರ್ಯಕರ್ತರು ಸಕ್ರಿಯವಾಗಿದ್ದಾರೆಂದು ಎನ್ ಐಎ ಹೇಳಿದೆ.

|
Google Oneindia Kannada News

ನವದೆಹಲಿ, ಏಪ್ರಿಲ್ 3: ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನ್ಯಾಯಾಧೀಶರು, ರಾಜಕೀಯ ವ್ಯಕ್ತಿಗಳು, ಪೊಲೀಸ್ ಅಧಿಕಾರಿಗಳು ಹಾಗೂ ಭಾರತಕ್ಕೆ ಆಗಮಿಸುವ ವಿದೇಶಿಗರನ್ನು ಗುರಿಯಾಗಿಸಿ ದಾಳಿ ನಡೆಸಲು ಕೇರಳದಲ್ಲಿ ಸಕ್ರಿಯವಾಗಿರುವ ಐಎಸ್ಐಎಸ್ ಪ್ರೇರಿತ ಗುಂಪು ಪ್ರಯತ್ನಿಸಿದೆ ಎಂದು ರಾಷ್ಟ್ರೀಯ ತನಿಖಾ ಆಯೋಗ (ಎನ್ಐಎ) ಹೇಳಿದೆ.

ಒಮರ್ ಅಲ್-ಹಿಂದಿ ಐಎಸ್ಐಎಸ್ ಪ್ರಕರಣವೆಂದೇ ಬಿಂಬಿತವಾಗಿರುವ ಈ ಪ್ರಕರಣದಲ್ಲಿ ಕೇರಳದ ಸುಮಾರು 8 ಮಂದಿ ಕಾರ್ಯಕರ್ತರು ಸಕ್ರಿಯವಾಗಿದ್ದು, ಗಣ್ಯ ವ್ಯಕ್ತಿಗಳನ್ನು ಕೊಲ್ಲುವ ಸಂಚು ರೂಪಿಸಿದ್ದರೆಂದು ಎನ್ ಐಎ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಎಂಟು ಮಂದಿಯ ಹೆಸರನ್ನು ದಾಖಲಿಸಲಾಗಿದೆ.

Islamic State module from Kerala plans to kill Judges, Foreigners

ಐಎಸ್ ಪ್ರಾತಿನಿಧ್ಯ ಹೊಂದಿರುವವನೆಂದು ಹೇಳಲಾದ ಅನ್ಸುರುಲ್ ಖಿಲಾಫಾ ಎಂಬಾತನಿಂದ 2016ರ ಆಗಸ್ಟ್ ನಲ್ಲಿ ಒಮರ್ ಅಲ್ - ಹಿಂದಿ ಸಂಘಟನೆಯು ಜನ್ಮ ತಾಳಿತ್ತು. ಈಗ ಭೂಗತನಾಗಿರುವ ಶಾಜೀರ್ ಮಂಗಲಾಸ್ಸೆರಿ ಎಂಬಾತನಿಗೆ ಈ ಸಂಘಟನೆಯ ನಾಯಕತ್ವ ಸ್ಥಾನ ನೀಡಲಾಗಿತ್ತು.

ಕೇರಳದ ಹೈಕೋರ್ಟ್ ನ್ಯಾಯಾಧೀಶರು, ರಾಜಕಾರಣಿಗಳು, ಪೊಲೀಸ್ ಅಧಿಕಾರಿಗಳು, ಗಣ್ಯ ವ್ಯಕ್ತಿಗಳು, ವಿದೇಶಿಗರನ್ನು ಕೊಲ್ಲುವುದೇ ಸಂಘಟನೆಯ ಪ್ರಮುಖ ಉದ್ದೇಶವಾಗಿತ್ತು ಎಂದು ಎನ್ಐಎ ಹೇಳಿದೆ.

English summary
The charge sheet filed by the National Investigation Agency in connection with an Islamic State module from Kerala states that the members had planned on targeting judges of the High Court, Foreigners, politicians and police officers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X