ಕೈಲಾಸ ಮಾನಸ ಸರೋವರ ಯಾತ್ರೆಗೆ ಹೊರಟಿದ್ದಾರಾ ರಾಹುಲ್ ಗಾಂಧಿ?
Recommended Video

ನವದೆಹಲಿ, ಜೂನ್ 29: 'ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳುತ್ತಾರಂತೆ' ಎಂಬ ವದಂತಿಯೊಂದು ಎಲ್ಲೆಡೆ ಹಬ್ಬಿದೆ.
ಕೆಲವು ಕಾಂಗ್ರೆಸ್ ಮೂಲಗಳು ಹೇಳಿರುವ ಪ್ರಕಾರ, ರಾಹುಲ್ ಗಾಂಧಿ ಈ ವರ್ಷ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಳ್ಳಲಿದ್ದಾರೆ ಎಂದು ಕೆಲವು ಮಾಹ್ಯಮಗಳು ವರದಿ ಮಾಡಿದ್ದವು.
ಆದರೆ ಈ ಕುರಿತು ಪ್ರತಿಕ್ರಿಯೆ ನೀಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯ, 'ನಮಗೆ ರಾಹುಲ್ ಗಾಂಧಿ ಅವರ ಕಡೆಯಿಂದ ಯಾವುದೇ ಅಧಿಕೃತ ಮನವಿ ಬಂದಿಲ್ಲ' ಎಂದು ಸ್ಪಷ್ಟಪಡಿಸಿದೆ.

ಮಾನಸರೋವರವು ಈಗ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಭಾಗವಾಗಿರುವುದರಿಂದ ಅಲ್ಲಿಗೆ ಪ್ರವಾಸಕ್ಕೆ ತೆರಳುವುದಾದರೆ ನಮಗೆ ಈಗಾಗಲೇ ಮನವಿ ಬರಬೇಕಿತ್ತು. ಆದರೆ ನಮಗೆ ಯಾವುದೇ ಮನವಿ ಬಂದಿಲ್ಲ ಎಂದು ಅದು ಹೇಳಿದೆ.
ವಿದೇಶಾಂಗ ವ್ಯವಹಾರಗಳ ವೆಬ್ ಸೈಟ್ ನಲ್ಲಿ ಯಾರು ಬೇಕಾದರೂ ಈ ಯಾತ್ರೆಗೆ ತಮ್ಮ ಹೆಸರನ್ನು ನೋಂದಾಯಿಸಬಹುದು. ನಂತರ ದಾಖಲೆಗಳನ್ನು ಪರಿಶೀಲಿಸಿ ಸಚಿವಾಲಯ ಕೆಲವರನ್ನು ಆರಿಸುತ್ತದೆ. ಅದಲ್ಲದೆ, ಖಾಸಗಿ ಟೂರ್ ಏಜೆನ್ಸಿಗಳ ಮೂಲಕವೂ ಇಲ್ಲಿಗೆ ತೆರಳಬಹುದು. ಸರ್ಕಾರಿ ವೆಬ್ ಸೈಟ್ ನಲ್ಲಂತೂ ರಾಹುಲ್ ಗಾಂಧಿ ಅವರ ಹೆಸರು ನೋಂದಾಯಿಸಲಾಗಿಲ್ಲ ಎಂದು ಅದು ಹೇಳಿದೆ.












Click it and Unblock the Notifications