ಭಾರತಕ್ಕೆ ಬಂದ ಇರಾಕ್ ವಿದೇಶಾಂಗ ಸಚಿವ

ನವದೆಹಲಿ, ಜುಲೈ 24: ಐದು ದಿನಗಳ ಭಾರತದ ಭೇಟಿಯಲ್ಲಿರುವ ಇರಾಕ್ ವಿದೇಶಾಂಗ ಸಚಿವ ಡಾ.ಇಬ್ರಾಹಿಂ ಅಲ್ ಜಾಫರಿ ಇಂದು(ಜುಲೈ 24) ಬೆಳಿಗ್ಗೆ ನವದೆಹಲಿಗೆ ಬಂದಿಳಿದಿದ್ದಾರೆ.

ದೆಹಲಿಯ ಜವಾಹರಲಾಲ್ ಭವನದಲ್ಲಿ ಭಾರಗತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಇಬ್ರಾಹಿಂ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದು, ಉಭಯ ನಾಯಕರೂ ಮಹತ್ವದ ಸಂಗತಿಗಳನ್ನು ಚರ್ಚಿಸುವ ಸಂಭವವಿದೆ.

ಇದರೊಂದಿಗೆ ಇರಾಕ್ ನಲ್ಲಿ ಕಾಣೆಯಾದ 39 ಭಾರತೀಯರ ಬಗ್ಗೆಯೂ ಮಾತುಕತೆ ನಡೆಯಲಿದೆ. 2014 ರಲ್ಲಿ ಐಸಿಸ್ ಉಗ್ರರು ಇರಾಕ್ ನ ಮೊಸುಲ್ ಪ್ರಾಂತ್ಯವನ್ನು ವಶಕ್ಕೆ ಪಡೆದಿದ್ದ ಸಂದರ್ಭದಲ್ಲಿ ನಾಪತ್ತೆಯಾಗಿದ್ದ 39 ಭಾರತೀಯರು ಇಂದಿಗೂ ಪತ್ತೆಯಾಗಿಲ್ಲ.

ಮೊಸುಲ್ ಈಗ ಐಸಿಸ್ ಉಗ್ರರ ಕಪಿಮುಷ್ಠಿಯಲ್ಲಿಲ್ಲ ಎಂದು ಇರಾಕ್ ಹೇಳಿದ್ದರೂ, ನಾಪತ್ತೆಯಾದ ಭಾರತೀಯರ ಕುರಿತು ಮಾಹಿತಿ ನೀಡುವಂತೆ ಭಾರತೀಯ ಸರ್ಕಾರ ಅಡಿಗಡಿಗೆ ಮನವಿ ಮಾಡೂತ್ತಿದ್ದರೂ, ಅವರ ಸುಳಿವು ಮಾತ್ರ್ ಸಿಕ್ಕಿಲ್ಲ. ಆದ್ದರಿಂದ ಈ ಕುರಿತು ಸುಷ್ಮಾ ಸ್ವರಾಜ್, ಇಬ್ರಾಹಿಂ ಅವರೊಮದಿಗೆ ಗಂಭೀರ ಚರ್ಚೆ ನಡೆಸಲಿದ್ದಾರೆ.

Iraq Foriegn affairs minister has come to India

ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧದ ಕುರಿತು ಮಾತುಕತೆ ನಡೆಯುವ ನಿರೀಕ್ಷೆಯಿದ್ದು, ಅಂತಾರಾಷ್ಟ್ರೀಯ ಸಂಗತಿಗಳ ಬಗ್ಗೆ ಚರ್ಚೆ ನಡೆಯಲಿದೆ. ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್, ಉಪರಾಷ್ಟ್ರಪತಿ ಹಮಿದ್ ಅನ್ಸಾರಿ ಅವರನ್ನು ಸಹ ಇಬ್ರಾಹಿಂ ಇಂದು ಭೇಟಿಯಅಗಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+