ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್, ಡೀಸೆಲ್ ಬೆಲೆ ಇಳಿದಿದ್ದು ಕೇವಲ 1 ಪೈಸೆ ಮಾತ್ರ!

|
Google Oneindia Kannada News

ನವದೆಹಲಿ, ಮೇ 30: ಸದ್ಯ, ಪೆಟ್ರೋಲ್, ಡೀಸೆಲ್ ಬೆಲೆ ಕೊಂಚ ಇಳೀತಾ ಇದ್ಯಲ್ಲ ಎಂದು ಬೆಳಿಗ್ಗೆ ನಿಟ್ಟುಸಿರುಬಿಟ್ಟವರಿಗೆ ಇಲ್ಲೊಂದು ಬೇಸರದ ಸುದ್ದಿ ಇದೆ!

ಇಂದು ಬೆಳಿಗ್ಗೆಯಷ್ಟೇ ಪೆಟ್ರೋಲ್ ದರ ಲೀಟರ್ ಗೆ 60 ಪೈಸೆಯಷ್ಟು ಮತ್ತು ಡೀಸೆಲ್ ದರ ಲೀಟರ್ ಗೆ 56 ಪೈಸೆಯಷ್ಟು ಕಡಿಮೆಯಾಗಿದೆ ಎಂದಿದ್ದ ಭಾರತೀಯ ತೈಲ ನಿಗಮ ಇದೀಗ ತನ್ನ ಹೇಳಿಕೆಯನ್ನು ತಿದ್ದುಪಡಿ ಮಾಡಿದೆ.

16 ದಿನದ ನಂತರ ಕೊಂಚ ಕಡಿಮೆಯಾದ ಪೆಟ್ರೋಲ್, ಡೀಸೆಲ್ ದರ16 ದಿನದ ನಂತರ ಕೊಂಚ ಕಡಿಮೆಯಾದ ಪೆಟ್ರೋಲ್, ಡೀಸೆಲ್ ದರ

ಪೆಟ್ರೋಲ್ ಬೆಲೆ ಕೇವಲ 1 ಪೈಸೆಯಷ್ಟು ಮಾತ್ರ ಇಳಿದಿದ್ದು, ಡೀಸೆಲ್ ಬೆಲೆ ಸಹ 56 ಪೈಸೆಯ ಬದಲಾಗಿ ಕೇವಲ 1 ಪೈಸೆಯಷ್ಟೇ ಇಳಿದಿದೆ ಎಂದು ಐಒಸಿ ಹೇಳಿದೆ. ಈ ಮೂಲಕ ಕೊಂಚ ಸಮಾಧಾನ ಪಟ್ಟಿದ್ದ ಗ್ರಾಹಕನ ಮುಖ ಮತ್ತೆ ಊದಿಕೊಳ್ಳುವಂತಾಗಿದೆ!

IOC correction: Petrol, Diesel rates went down only 1 paisa!

"ನಮ್ಮ ವೆಬ್ ಸೈಟ್ ನಲ್ಲಿ ಇಂಧನ ದರವನ್ನು ಪೋಸ್ಟ್ ಮಾಡುವ ಸಂದರ್ಭದಲ್ಲಾದ ತಾಂತ್ರಿಕ ದೋಷದಿಂದ ಈ ಪ್ರಮಾದವಾಗಿದೆ. ತೈಲ ಬೆಲೆಯಲ್ಲಿ ಕೇವಲ 1 ಪೈಸೆಯಷ್ಟೇ ಇಳಿಕೆಯಾಗಿದೆ" ಎಂದು ಐಒಸಿ ತಿಳಿಸಿದೆ.

ಕಳೆದ 16 ದಿನಗಳಿಂದ ಒಂದೇ ಸಮನೆ ಏರುತ್ತಲೇ ಇದ್ದ ಇಂಧನ ದರ ಜನಸಾಮಾನ್ಯನನ್ನು ಕಂಗಾಲು ಮಾಡಿತ್ತು. ಈಗ ಕೊಂಚ ಮಟ್ಟಿಗೆ ಬೆಲೆ ಇಳಿಕೆಯಾಗಿದೆ ಎಂದು ಸಮಾಧಾನ ಪಟ್ಟುಕೊಳ್ಳುವ ಹೊತ್ತಿಗೆ ಸುದ್ದಿ ಸುಳಲ್ಳು ಎಂದು ಐಒಸಿ ತಣ್ಣೀರೆರೆಚಿದೆ.

ಹೀಗಾಗಿ ಪ್ರತಿ ಲೀಟರ್ ಪೆಟ್ರೋಲ್ ದರ ಬೆಂಗಳೂರಿನಲ್ಲಿ 79.10 ರೂ. ರ ಬದಲಾಗಿ 79.70 ರೂ. ಇದೆ. ಪ್ರತಿ ಲೀಟರ್ ಡಿಸೆಲ್ ಬೆಲೆ 70.49 ರೂ. ಇದೆ.

English summary
Indian Oil Corporation corrects earlier figures, Petrol prices went down not by 60 paise in Delhi & 59 paise in Mumbai but by just 1 paise. Diesel prices also went down by just 1 paise instead of 56 paise in Delhi and 59 paise in Mumbai
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X