Get Updates
Get notified of breaking news, exclusive insights, and must-see stories!

ತಿಹಾರ್ ಜೈಲಿನಲ್ಲಿದ್ದ ಪಿ ಚಿದಂಬರಂ ಬಂಧಿಸಿದ ಜಾರಿ ನಿರ್ದೇಶನಾಲಯ

ನವದೆಹಲಿ, ಅಕ್ಟೋಬರ್ 16: ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ತಿಹಾರ್ ಜೈಲಿನಲ್ಲಿರುವ ಕೇಂದ್ರದ ಮಾಜಿ ಸಚಿವ ಪಿ ಚಿದಂಬರಂ ಅವರನ್ನು ವಿಚಾರಣೆ ಬಳಿಕ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಸಿಬಿಐ ಕಸ್ಟಡಿಯಲ್ಲಿರುವ ಕೇಂದ್ರದ ಮಾಜಿ ವಿತ್ತ ಸಚಿವ 74 ವರ್ಷ ವಯಸ್ಸಿನ ಪಿ ಚಿದಂಬರಂ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಲು ಜಾರಿ ನಿರ್ದೇಶನಾಲಯಕ್ಕೆ ದೆಹಲಿ ಕೋರ್ಟ್ ಮಂಗಳವಾರ(ಅಕ್ಟೋಬರ್ 15) ದಂದು ಅನುಮತಿ ನೀಡಿತ್ತು.

ಹೀಗಾಗಿ, ಪಿ ಚಿದಂಬರಂ ಅವರನ್ನು ಬುಧವಾರ(ಅಕ್ಟೋಬರ್ 16) ರಂದು ಬೆಳಗ್ಗೆ ಬಂಧಿಸಿ, ಕೋರ್ಟ್ ಮುಂದೆ ಹಾಜರುಪಡಿಸಿ ,ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲು ಜಾರಿನಿರ್ದೇಶನಾಲಯವು ಮುಂದಾಗುವ ಪ್ರಕ್ರಿಯೆ ನಿರೀಕ್ಷಿತವಾಗಿದೆ. ಇಂದು ಬೆಳಗ್ಗೆ ಪಿ ಚಿದಂಬರಂರನ್ನು ಜೈಲಿನಲ್ಲಿ ಭೇಟಿ ಹೊರ ಬಂದ ಅವರ ಪುತ್ರ ಕಾರ್ತಿ ಸುದ್ದಿಗಾರರೊಂದಿಗೆ ಮಾತನಾಡಿ, ಇದೆಲ್ಲ ಬೋಗಸ್ ತನಿಖೆ, ಬಂಧನ, ವಿಚಾರಣೆ ಎಲ್ಲವೂ ಅನವಶ್ಯಕ ಎಂದಿದ್ದಾರೆ.

INX Media case: Enforcement Directorate arrest P Chidambaram Tihar jail

ಇದಕ್ಕೂ ಮುನ್ನ ಈ ಹಿಂದಿನ ವಾದ ಪ್ರತಿವಾದ ವೇಳೆ, ತಿಹಾರ್ ಜೈಲು, ಚಿದಂಬರಂ ಇರುವ ಸೆಲ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಚಿದಂಬರಂ ಪರ ವಕೀಲ ಅಭಿಶೇಕ್ ಮನು ಸಿಂಘ್ವಿ ಅವರು ವಾದ ಮಂಡಿಸಿದರು. ಚಿದಂಬರಂ ಅವರಿರುವ ಸೆಲ್ ನಲ್ಲಿ ಕೂರಲು ಚೇರಿಲ್ಲ. ತಲೆಗೆ ದಿಂಬಿಲ್ಲ ನನ್ನ ಕಕ್ಷಿದಾರರಿಗೆ 74 ವರ್ಷ ವಯಸ್ಸಾಗಿದೆ ಎಂದು ವಾದಿಸಿದ್ದರು.

ಆಗಸ್ಟ್ 21ರಂದು ದೆಹಲಿ ನಿವಾಸದಲ್ಲಿದ್ದ ಚಿದಂಬರಂರನ್ನು ಸಿಬಿಐ ಅಧಿಕಾರಿಗಳು ತಮ್ಮ ವಶಕ್ಕೆ ತೆಗೆದುಕೊಂಡಿದ್ದು, 11 ದಿನಗಳ ಕಾಲ ಕಸ್ಟಡಿಯಲ್ಲಿಟ್ಟುಕೊಂಡು ವಿಚಾರಣೆ ನಡೆಸಿದ್ದಾರೆ. ಅವರಿಗೆ ಭದ್ರತೆ ಬೇಕಿದೆ, ತಿಹಾರ್ ಜೈಲಿಗೆ ಕಳಿಸದಿದ್ದರೆ ಗೃಹಬಂಧನ ವಿಧಿಸಿ' ಎಂದು ಕಪಿಲ್ ಸಿಬಾಲ್ ಈ ಮುಂಚೆ ವಾದಿಸಿದ್ದರು. "ಆದರೆ ಗೃಹ ಬಂಧನವನ್ನು ರಾಜಕೀಯ ಕೈದಿಗಳಿಗೆ ಬಳಸುವ ವಿಧಾನವಾಗಿದೆ, ಇದು ಭ್ರಷ್ಟಾಚಾರ ಪ್ರಕರಣವಾಗಿದ್ದು, ಚಿದಂಬರಂ ಜಾಮೀನಿಗಾಗಿ ಅರ್ಜಿ ಸಲ್ಲಿಸಬಹುದು' ಎಂದು ಸುಪ್ರೀಂಕೋರ್ಟ್ ಸೂಚಿಸಿತ್ತು. ಅದರಂತೆ, ಚಿದಂಬರಂ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆದು, ಅರ್ಜಿ ತಿರಸ್ಕಾರಗೊಂಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+