ಕಾಶ್ಮೀರದಲ್ಲಿ 5 ತಿಂಗಳ ಬಳಿಕ ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಬೈಲ್ ಸೇವೆ ವಾಪಸ್

ನವದೆಹಲಿ, ಜನವರಿ 1: ಕಾಶ್ಮೀರದಲ್ಲಿನ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಐದು ತಿಂಗಳ ಬಳಿಕ ಡಿ. 31ರಿಂದ ಅಂತರ್ಜಾಲ ಸೇವೆ ಮತ್ತು ಎಲ್ಲ ಮೊಬೈಲ್ ಫೋನ್‌ಗಳಿಗೆ ಎಸ್ಎಂಎಸ್ ಸಂಪರ್ಕ ಸೇವೆಗಳು ಮರಳಿವೆ.

'ಡಿ. 31ರ ಮಧ್ಯರಾತ್ರಿಯಿಂದ ಜಾರಿಯಾಗುವಂತೆ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಅಂತರ್ಜಾಲ ಸೇವೆಯನ್ನು ಪುನರಾರಂಭಿಸಲಾಗಿದೆ. ಹಾಗೆಯೇ ಮೊಬೈಲ್ ಫೋನ್‌ಗಳಿಗೆ ಎಸ್ಎಂಎಸ್ ಸೇವೆಯನ್ನು ಕೂಡ ಮರಳಿ ಶುರುಮಾಡಲಾಗಿದೆ' ಎಂದು ಜಮ್ಮು ಮತ್ತು ಕಾಶ್ಮೀರದ ವಕ್ತಾರ ರೋಹಿತ್ ಕನ್ಸಾಲ್ ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸಲು ಗೃಹ ಸಚಿವ ಅಮಿತ್ ಶಾ, ವಿಧಿ 370ರ ರದ್ದತಿಯನ್ನು ಪ್ರಕಟಿಸುವ ಮುನ್ನ ಆಗಸ್ಟ್ 5ರಂದು ಅಂತರ್ಜಾಲ ಸೌಲಭ್ಯವನ್ನು ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಗಿತಗೊಳಿಸಲಾಗಿತ್ತು.

Internet Service In Govt Hospitals SMS Mobile Phones In Kashmir Restored

370ನೇ ವಿಧಿ ರದ್ದತಿಯ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದ್ದ ಇಂಟರ್‌ನೆಟ್ ಸೇವೆಯನ್ನು ಕಾರ್ಗಿಲ್ ಜಿಲ್ಲೆಯ ಲಡಾಕ್‌ನಲ್ಲಿ 145 ದಿನಗಳ ಬಳಿಕ ಕಳೆದ ವಾರ ಪುನರಾರಂಭಿಸಲಾಗಿತ್ತು. ಆರಂಭದಲ್ಲಿ ಸ್ಥಿರ ದೂರವಾಣಿ ಸಂಪರ್ಕ ಆರಂಭಿಸಲಾಗಿತ್ತು. ಬಳಿಕ ಪೋಸ್ಟ್ ಪೇಯ್ಡ್ ಮೊಬೈಲ್ ಸೇವೆಗಳ ಮೇಲಿನ ನಿರ್ಬಂಧವನ್ನು ಸಡಿಲಿಸಲಾಗಿತ್ತು. ಆದರೆ ಇಡೀ ಕಣಿವೆಯಲ್ಲಿ ಪ್ರೀಪೇಯ್ಡ್ ಮೊಬೈಲ್ ಮತ್ತು ಇಂಟರ್‌ನೆಟ್ ಸೇವೆಗಳು ಇನ್ನೂ ಆರಂಭವಾಗಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+