ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತ್ತೆ ಇಂದಿರಾರನ್ನು ನೆನೆದು ಭಾವುಕರಾದ ಸೋನಿಯಾ ಗಾಂಧಿ

|
Google Oneindia Kannada News

Recommended Video

ಇಂದಿರಾ ಗಾಂಧಿಯವರನ್ನ ನೆನಪಿಸಿಕೊಂಡ ಸೋನಿಯಾ ಗಾಂಧಿ | Oneindia Kannada

ನವದೆಹಲಿ, ಡಿಸೆಂಬರ್ 16: 1984ರಲ್ಲಿ ನಡೆದ ಇಂದಿರಾ ಗಾಂಧಿಯವರ ಹತ್ಯೆ ನನ್ನ ಬದುಕನ್ನು ಸಂಪೂರ್ಣ ಬದಲಿಸಿಬಿಟ್ಟಿತು. ಆಗ ನಾನು ನನ್ನ ತಾಯಿಯನ್ನು ಕಳೆದುಕೊಂಡಷ್ಟೇ ಅನಾಥಭಾವದಿಂದ ಕೊರಗಿದ್ದೆ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಭಾವುಕರಾಗಿ ನುಡಿದರು.

ರಾಹುಲ್ ಗಾಂಧಿಯವರಿಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಅಧಿಕಾರವನ್ನು ಅಧಿಕೃತವಾಗಿ ಹಸ್ತಾಂತರಿಸಿದ ನಂತರ ಅವರು ಮಾತನಾಡಿದರು. ನವದೆಹಲಿಯ ಎಐಸಿಸಿ ಪ್ರಧಾನ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಸೋನಿಯಾ ಗಾಂಧಿ ತಮ್ಮ 19 ವರ್ಷಗಳ ಸುದೀರ್ಘ ರಾಜಕೀಯ ಏಳುಬೀಳುಗಳನ್ನು ಹಂಚಿಕೊಂಡರು.

ಕಾಂಗ್ರೆಸ್ ನಲ್ಲಿ ರಾಹುಲ್ ಶಕೆ ಆರಂಭಕಾಂಗ್ರೆಸ್ ನಲ್ಲಿ ರಾಹುಲ್ ಶಕೆ ಆರಂಭ

ರಾಹುಲ್ ಪಟ್ಟಾಭಿಷೇಕದ ನಂತರ ಪುತ್ರನನ್ನು ಅಭಿನಂದಿಸಿದ ಸೋನಿಯಾ ಗಾಂಧಿ, ಅತ್ತೆ ಇಂದಿರಾ ಗಾಂಧಿ ಮತ್ತು ಪತಿ ರಾಜೀವ್ ಗಾಂಧಿಯವರನ್ನು ಕಳೆದುಕೊಂಡು ತಾವು ಪರಿತಪಿಸಿದ ದಿನಗಳನ್ನು ನೆನೆದು ಮರುಗಿದರು.

ಅತ್ತೆ ಇಂದಿರಾ ಗಾಂಧಿ, ಪತಿ ರಾಜೀವ್ ಗಾಂಧಿಯವರ ಹತ್ಯೆಯ ನಂತರ ಒಂಟಿಯಾದ ಸೋನಿಯಾ ಗಾಂಧಿ, 19 ವರ್ಷಗಳ ಕಾಲ ಕಾಂಗ್ರೆಸ್ ಅನ್ನು ಮುನ್ನಡೆಸಿದ್ದು ತಮಾಷೆಯ ಸಂಗತಿಯಲ್ಲ. ಪ್ರಧಾನಿಯಾಗುವ ಅವಕಾಶವಿದ್ದರೂ ಪಕ್ಕಕ್ಕೆ ತಳ್ಳಿ, ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಯನ್ನಾಗಿ ನೇಮಿಸಿ, ಆದರ್ಶ ಮೆರೆದರು.

ರಾಹುಲ್ ಯುಗಾರಂಭ: ಶುಭಹಾರೈಕೆ ಜೊತೆಯಲ್ಲೇ ಕಾಲೆಳೆತವೂ ಜೋರು!ರಾಹುಲ್ ಯುಗಾರಂಭ: ಶುಭಹಾರೈಕೆ ಜೊತೆಯಲ್ಲೇ ಕಾಲೆಳೆತವೂ ಜೋರು!

ರಾಜಕೀಯದಿಂದಲೇ ಸೋನಿಯಾ ಗಾಂಧಿ ನಿವೃತ್ತಿ ಪಡೆಯುತ್ತಾರೆ ಎಂಬ ಕೂಗು ಎದ್ದಿರುವ ಈ ಹೊತ್ತಲ್ಲಿ, ಅವರು ಇಂದು ಆಡಿದ ಮಾತುಗಳು ಅವರ ಸುದೀರ್ಘ ರಾಜಕೀಯ ಪಯಣದ ಅನುಭವಗಳನ್ನು ಆತ್ಮೀಯವಾಗಿ ಹಂಚಿಕೊಂಡರು. ಭಾವುಕರಾಗಿ ಅವರಿಂದು ಆಡಿದ ಮಾತಿನ ಸಾರ ಇಲ್ಲಿದೆ.

ಇಂದಿರಾ ಜೀ ನನ್ನನ್ನು ಮಗಳಂತೇ ನೋಡಿಕೊಂಡರು!

"ಇಂದಿರಾ ಗಾಂಧಿಯವರು ನನ್ನನ್ನು ತಮ್ಮ ಸ್ವಂತ ಮಗಳಂತೆಯೇ ನೋಡಿಕೊಂಡರು. ನಾನು ಅವರಿಂದ ಸಾಕಷ್ಟನ್ನು ಕಲಿತೆ. ಆದರೆ 1984 ರಲ್ಲಿ ಅವರ ಹತ್ಯೆಯಾದಾಗ ನನಗೆ ನನ್ನ ತಾಯಿಯನ್ನು ಕಳೆದುಕೊಂಡಂಥ ಅನಾಥ ಭಾವ ಹುಟ್ಟಿಕೊಂಡಿತ್ತು. ಅವರ ಸಾವು ನನ್ನ ಸಂಪೂರ್ಣ ಬದುಕನ್ನೇ ಬದಲಿಸಿಬಿಟ್ಟಿತು"

ರಾಜೀವ್ ರನ್ನೂ ಕಳೆದುಕೊಂಡು ಮತ್ತಷ್ಟು ಒಂಟಿಯಾದೆ!

"ಇಂದಿರಾ ಜೀ ತೀರಿಕೊಂಡ ಕೆಲ ವರ್ಷಗಳಲ್ಲಿ ನಾನು ರಾಜೀವ್ ಗಾಂಧಿಯವರನ್ನೂ ಕಳೆದುಕೊಂಡೆ. ಈ ಸನ್ನಿವೇಶವನ್ನು ಸರಗಿಸಿಕೊಳ್ಳುವುದಕ್ಕೆ ನನಗೆ ಬಹಳ ದಿನವೇ ಬೇಕಾಯ್ತು. ನಾನಾಗ ಮತ್ತಶಜ್ಟು ಒಂಟಿಯಾಗಿದ್ದೆ."

ಎಲ್ಲಿ ಶುರು ಮಾಡಿದರೋ ಅಂಥದೇ ಸನ್ನಿವೇಶದಲ್ಲಿ ಸೋನಿಯಾ ಗಾಂಧಿ ನಿವೃತ್ತಿಎಲ್ಲಿ ಶುರು ಮಾಡಿದರೋ ಅಂಥದೇ ಸನ್ನಿವೇಶದಲ್ಲಿ ಸೋನಿಯಾ ಗಾಂಧಿ ನಿವೃತ್ತಿ

ನಾವು ಸೋಲೊಪ್ಪಿಕೊಳ್ಳುವುದಿಲ್ಲ!

"2014 ರಿಂದ ನಾವು ವಿರೋಧಪಕ್ಷದವರಾಗಿ ಅತ್ಯಂತ ಮಹತ್ವದ ಪಾತ್ರವನ್ನು ವಹಿಸಿದ್ದೇವೆ. ನಮ್ಮ ದೇಶದ ಮೂಲ ಸಂಪ್ರದಾಯಗಳ ಮೇಲೇ ದಾಳಿ ನಡೆಯುತ್ತಿದೆ. ಇಲ್ಲೀಗ ಭಯದ ವಾತಾವರಣ ಸೃಷ್ಟಿಯಾಗಿದೆ. ನಮ್ಮ ಸಾಂವಿಧಾನಿಕ ಮೌಲ್ಯಗಳ ಮೇಲೆ ದಾಳಿ ನಡೆಯುತ್ತಿದೆ. ನಮ್ಮ್ ಪಕ್ಷವೂ ಹಲವು ಚುನಾವಣೆಗಳಲ್ಲಿ ಸೋತಿದೆ. ಆದರೂ ನಾವು ಎಂದಿಗೂ ಸೋಲೊಪ್ಪಿಕೊಳ್ಳುವುದಿಲ್ಲ. ನಾವು ಈ ಸವಾಲನ್ನು ಸ್ವೀಕರಿಸುತ್ತೇವೆ"

ರಾಹುಲ್ ನನ್ನು ಹೊಗಳುವುದು ಉಚಿತವಲ್ಲ!

"ರಾಹುಲ್ ನನ್ನ ಪುತ್ರ. ಆದ್ದರಿಂದ ನಾನು ಅವನನ್ನು ಹೊಗಳುವುದು ಈ ಸಂದರ್ಭದಲ್ಲಿ ಉಚಿತ ಎಂದು ನನಗನ್ನಿಸುವುದಿಲ್ಲ. ಆದರೆ ಒಂದನ್ನಂತೂ ಹೇಳಬಲ್ಲೆ, ಅವನು ಚಿಕ್ಕ ವಯಸ್ಸಿನಿಂದ ಹಿಂಸೆಯನ್ನು ನೋಡಿದವನು. ಅದನ್ನು ನೋಡಿ ಅವನು ಗಟ್ಟಿಯಾಗಿದ್ದಾನೆ. ಹಾಗೆಯೇ ಅವನ ಮೇಲೆ ಸಾಕಷ್ಟು ವೈಯಕ್ತಿಕ ದಾಳಿಗಳಿ ನಡೆದಿವೆ. ಟೀಕೆಗಳಾಗಿವೆ. ಈ ಎಲ್ಲವೂ ಅವನನ್ನು ಗಟ್ಟಿ ಮನುಷ್ಯನನ್ನಾಗಿ ಮಾಡಿವೆ."

English summary
In 1984, Indira ji was assassinated and I felt I had lost my mother and that incident changed my life forever, Sonia Gandhi emotionally told in New Delhi. She speaks after Rahul Gandhi takes charge as congress president from her.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X