ಇ-ಟೆಂಡರ್ ವೆಬ್ ಪೋರ್ಟಲ್ ಆರಂಭಿಸಿದ ಭಾರತೀಯ ರೈಲ್ವೆ

Posted By:
Subscribe to Oneindia Kannada

ನವದೆಹಲಿ,ಫೆಬ್ರವರಿ,02: ಭಾರತೀಯ ರೈಲ್ವೆ ಇಲಾಖೆ ಇ-ಟೆಂಡರ್ ವ್ಯವಸ್ಥೆ ಪ್ರಕ್ರಿಯೆಗಾಗಿ ಹೊಸ ವೆಬ್ ಪೋರ್ಟಲ್ ನ್ನು ಸೋಮವಾರ ಆರಂಭಿಸಿದ್ದು, ಇದರ ಮೂಲಕ ಆನ್ ಲೈನ್ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹಾಗೂ ದಕ್ಷತೆ ಕಾಪಾಡಿಕೊಳ್ಳಲು ಮುಂದಡಿ ಇಟ್ಟಿದೆ.

ಹೊಸ ವೆಬ್ ಪೋರ್ಟಲ್ ಉದ್ಘಾಟಿಸಿದ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು, 'ಇ-ಸಂಗ್ರಹಣಾ ವ್ಯವಸ್ಥೆ (IREPS) ಹಾಗೂ ಇ-ಟೆಂಡರ್ ವ್ಯವಸ್ಥೆ ಭಾರತೀಯ ರೈಲ್ವೆ ಇಲಾಖೆಯ ಘಟಕವಾಗಿ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.[ಆನ್ ಲೈನ್ ನಲ್ಲಿ 6 ರೈಲ್ವೆ ಟಿಕೆಟ್ ಮಾತ್ರ ಬುಕ್ ಮಾಡ್ಬಹುದು!]

Indian Railways launches web portal for e-tendering

ಭಾರತೀಯ ರೈಲ್ವೆ ಇಲಾಖೆಯ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯನ್ನು ವೃದ್ಧಿ ಪಡಿಸುವುದೇ ಇ-ಸಂಗ್ರಹಣಾ ವ್ಯವಸ್ಥೆ ಹಾಗೂ ಇ-ಟೆಂಡರ್ ವ್ಯವಸ್ಥೆ ಮುಖ್ಯವಾದ ಹಂತ. ಇದನ್ನು ಕೇವಲ ಸಮಯ ಉಳಿತಾಯದ ಭಾಗವಾಗಿ ಜಾರಿಗೆ ತಂದಿಲ್ಲ. ಪ್ರಾಪಂಚಿಕ ಮಟ್ಟದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಉದ್ದೇಶದಿಂದ ಜಾರಿಗೆ ತರಲಾಗಿದೆ ಎಂದು ತಿಳಿಸಿದರು.[ಬೆಂಗಳೂರಿಗೆ ಮೆಟ್ರೋ ಜತೆಗೆ ಸಬ್ ಅರ್ಬನ್ ರೈಲು?]

ಈ ಹೊಸ ವೆಬ್ ಪೋರ್ಟಲ್ ರೈಲ್ವೆ ಇಲಾಖೆಗೆ ಸಂಬಂಧಿಸಿದ ಮಾಹಿತಿಗಳ ಪ್ರಕಟಣೆ, ಸೃಷ್ಠಿ ಹಾಗೂ ಹಲವಾರು ಟೆಂಡರ್ ಗಳನ್ನು ಆನ್ ಲೈನ್ ಮೂಲಕ ಸಲ್ಲಿಕೆ ಮಾಡಲು ಸಹಕರಿಸುತ್ತದೆ. ಈಗಾಗಲೇ 25,000 ಮೊತ್ತದ ಟೆಂಡರ್ ಸಲ್ಲಿಕೆಯಾಗಿದೆ ಹಾಗೂ ಈ ಪೋರ್ಟಲ್ ನಿರ್ವಹಣೆ ಹಾಗೂ ಆರಂಭಕ್ಕಾಗಿ 35,000 ಕೋಟಿಗೂ ಹೆಚ್ಚು ಖರ್ಚು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indian railways launched a web portal for the e-tendering process intended to bring in transparency and efficiency on Monday, Febrauary 01st.
Please Wait while comments are loading...