'ಯುವಾ' ವಿದ್ಯಾರ್ಥಿಗಳ ರಾಯಭಾರಿಯಾದ ಕ್ರಿಕೆಟರ್ ಪೃಥ್ವಿ
ನವದೆಹಲಿ, ಡಿಸೆಂಬರ್ 06: ಭಾರತದ ಯುವ ಜನತೆಯನ್ನು ಗಮನದಲ್ಲಿಟ್ಟುಕೊಂಡು, ಅದರಂತೆಯೇ ನವನೀತ್, ಯುವಾ ಸ್ಟೇಷನರಿ ಬ್ರ್ಯಾಂಡ್‍ಅನ್ನು ಪರಿಚಯಿಸಿದೆ. ಪ್ರಸ್ತುತ ಕಾಲಕ್ಕೆ ತಕ್ಕಂತೆ ಗ್ರಾಹಕ ಅಗತ್ಯಗಳಿಗೆ ಬೇಕಾದ ರೀತಿಯಲ್ಲಿ ಉತ್ಪನ್ನಗಳನ್ನು ಆರಂಭಿಸಲು ಯುವಾ ನಂಬಿಕೆ ಇರಿಸಿದೆ.
ಭಾರತದ ಯುವ ಜನತೆಯನ್ನು ಗಮನದಲ್ಲಿಟ್ಟುಕೊಂಡು ನವನೀತ್ ಸಂಸ್ಥೆ, ಯುವಾ ಸ್ಟೇಷನರಿ ಬ್ರ್ಯಾಂಡ್‍ಅನ್ನು ಪರಿಚಯಿಸಿದೆ. ಕಾಲಕ್ಕೆ ತಕ್ಕಂತೆ ಗ್ರಾಹಕ ಅಗತ್ಯಗಳಿಗೆ ಬೇಕಾದ ರೀತಿಯಲ್ಲಿ ಉತ್ಪನ್ನಗಳನ್ನು ಆರಂಭಿಸಲು ಯುವಾ ನಂಬಿಕೆ ಇರಿಸಿದೆ.
ನವನೀತ್ ಎಜುಕೇಷನ್ ಲಿಮಿಟೆಡ್‍ನ ಯುವಾ ಬ್ರ್ಯಾಂಡ್, ಭಾರತದ ಯುವ ಕ್ರಿಕೆಟಿಗ ಪೃಥ್ವಿ ಶಾ ಜತೆ ಎರಡು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದೆ.
ಯುವಾ ಬ್ರ್ಯಾಂಡ್‍ನ ಮೂಲಕ ಯುವ ಸಮೂಹವನ್ನು ರೂಪಿಸುವ ಭಾಗವಾಗಿರುವುದಕ್ಕೆ ನನಗೆ ಹೆಮ್ಮೆಎನಿಸಿದೆ. ಅದರೊಂದಿಗೆ ಮುಂದಿನ ಯುವ ಸಮೂಹದ ಭವ್ಯ ಭವಿಷ್ಯಕ್ಕೆ ಇವರು ಮಾಡಿರುವ ಆಲೋಚನೆಗಳನ್ನು ತಲುಪಿಸುವಲ್ಲಿ ನಾನು ಸಹಾಯ ಮಾಡುತ್ತೇನೆ ಎಂದಿದ್ದಾರೆ.

ಸ್ಟೇಷನರಿಯ ಅನನ್ಯ ಸೀಮಿತ ಆವೃತ್ತಿಯ ಉತ್ಪನ್ನಗಳ ರಾಯಭಾರಿಯಾಗಿ ಪೃಥ್ವಿ ಷಾ ಇರಲಿದ್ದಾರೆ. ಉದಯೋನ್ಮುಖ ಕ್ರಿಕೆಟಿಗ ನೀಡಿದ ಸಲಹೆಗಳ ಸ್ಫೂರ್ತಿಯಲ್ಲಿ ಇದನ್ನು ಉತ್ಪಾದಿಸಲಾಗಿದೆ. ಅದರೊಂದಿಗೆ ಪೃಥ್ವಿ ಷಾ, ಯುವಾ ವಿದ್ಯಾರ್ಥಿ ಸಮಿತಿಯ ಭಾಗವಾಗಿಯೂ ಇರಲಿದ್ದಾರೆ.
ಈ ಸಹ-ನಿರ್ಮಾಣದ ವ್ಯವಸ್ಥೆ, ವಿದ್ಯಾರ್ಥಿಗಳಿಗೂ ಅಭೂತಪೂರ್ವ ಅನುಭವವಾಗಿರಲಿದ್ದು, ಯುವ ಐಕಾನ್ ಆಗಿಯೂ ಗುರುತಿಸಿಕೊಂಡಿರುವ ಪೃಥ್ವಿ ಷಾರ ಜತೆ ವೃತ್ತಿಪರ ಹಾಗೂ ಪರಸ್ಪರ ವ್ಯಕ್ತಿತ್ವ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಅದರೊಂದಿಗೆ ಯುವಾ ಯೋಜಿಸಿರುವ ಟಿವಿ ಜಾಹೀರಾತುಗಳು ಹಾಗೂ ಡಿಜಿಟಲ್ ಅಭಿಯಾನಗಳಲ್ಲೂ ಪೃಥ್ವಿ ಷಾ ಕಾಣಿಸಿಕೊಳ್ಳಲಿದ್ದಾರೆ.
ಪೃಥ್ವಿ ಷಾ ಜತೆಗಿನ ಒಪ್ಪಂದದ ಕುರಿತು ವಿವರಿಸಿದ, ನವನೀತ್ ಎಜುಕೇಷನ್ ಲಿಮಿಟೆಡ್‍ನ ಸ್ಟೇಷನರಿ ವಿಭಾಗದ ನಿರ್ದೇಶಕ ಶೈಲೇಂದ್ರ ಗಾಲಾ, ಯುವ ಸಮೂಹ ಗುರಿ ಸಾಧಿಸುವ ನಿಟ್ಟಿನಲ್ಲಿ ನವನೀರತ್ ಆರಂಭದಿಂದಲೂ ಕೆಲಸ ಮಾಡಿದೆ. ನಮ್ಮ ಯುವಾ ಬ್ರ್ಯಾಂಡ್ ಇವರ ಕ್ರೀಯಾಶೀಲತೆಯನ್ನು ವ್ಯಕ್ತಪಡಿಸುವುದಕ್ಕೆ ಬೆಂಬಲವಾಗಿ ನಿಂತಿದೆ.
ಪೃಥ್ವಿ, ಇಂದು ನಮ್ಮ ನಡುವೆ ಇರುವ ಯುವ ಜನತೆಯ ಪ್ರತಿಬಿಂಬ. ಯುವ ಆಟಗಾರ ಕ್ರೀಡಾ ಕ್ಷೇತ್ರದಲ್ಲಿ ಇಂದು ತಮ್ಮದೇ ಆದ ಸ್ಥಾನವೊಂದನ್ನು ಸಂಪಾದನೆ ಮಾಡಿದ್ದಾರೆ. ಪೃಥ್ವಿ ಹಾಗೂ ಯುವಾ ನಡುವೆ ಒಂದು ಉತ್ತಮ ಭಾಂದವ್ಯ ಹಾಗೂ ಶಕ್ತಿಯನ್ನು ನಾವು ಕಂಡಿದ್ದೇವೆ. ಪೃಥ್ವಿ ಜತೆಯಲ್ಲಿ ನಾವು ಹಲವು ರೀತಿಯ ಉತ್ಪನ್ನಗಳನ್ನು ಆರಂಭಿಸಬೇಕು ಎನ್ನುವ ಯೋಚನೆಯಲ್ಲಿದ್ದೇವೆ. ಆ ಮೂಲಕ ಬ್ರ್ಯಾಂಡ್ ಇನ್ನಷ್ಟು ಪ್ರಗತಿ ಸಾಧಿಸಲು ನೆರವಾಗಲಿದೆ ಎಂದರು.
ನವನೀತ್‍ನಿಂದ 2016ರಲ್ಲಿ ಆರಂಭವಾದ ಹೊಸ ಸ್ಟೇಷನರಿ ಬ್ರ್ಯಾಂಡ್ ಯುವಾ. ಕಾಗದ ಹಾಗೂ ಕಾಗದ ರಹಿತ ಉತ್ಪನ್ನಗಳನ್ನು ಇದು ಆರಂಭಿಸಿದೆ. ಯುವ ಸಮೂಹವನ್ನು ಗಮನದಲ್ಲಿಟ್ಟುಕೊಂಡು, ಯುವಾ ದ ಆರ್ಟ್‍ಆಫ್ ಬೀಯಿಂಗ್ ಸ್ಮಾರ್ಟ್ ಎನ್ನುವುದನ್ನು ವಿನ್ಯಾಸ ಮಾಡಿದ್ದೇವೆ. ಇಂದಿನ ಯುವ ಜನತೆಯೇ ನಾಳಿನ ಸಾಧಕರು.. ಅವರ ಆಯ್ಕೆಗಳು ಹಾಗೂ ಆಲೋಚನೆಗಳ ಭಾಗವಾಗಿ ನಾವು ಯುವಾ ಆರಂಭಿಸಿದ್ದೆವು. ಇಂದು ಯುವಾದ ಪ್ರತಿಉತ್ಪನ್ನಗಳೂ, ನಮ್ಮ ದೇಶದ ಯುವ ಸಮೂಹದ ವಿಚಾರ, ಫ್ಯಾಷನ್ ಹಾಗೂ ಉತ್ಸಾಹವನ್ನು ಪ್ರತಿಬಿಂಬಿಸುತ್ತದೆ.
-
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಶುಭ್ಮನ್ ಗಿಲ್ ಭೇಟಿಯಾದ ಅನನ್ಯಾ ಬಿರ್ಲಾ; ಆರ್ಸಿಬಿ ಹೊಸ ಮಾಲೀಕನ ಸಹೋದರಿಗೆ ಗುಜರಾತ್ ಜೆರ್ಸಿನಾ ಎಂದ ನೆಟ್ಟಿಗರು -
CTET ಫೆಬ್ರವರಿ 2026ರ ಪರೀಕ್ಷೆಯ ಫಲಿತಾಂಶ ಶೀಘ್ರದಲ್ಲೇ ಪ್ರಕಟ: ಸ್ಕೋರ್ಕಾರ್ಡ್ ಪರಿಶೀಲಿಸುವುದು ಹೇಗೆ? ಇಲ್ಲಿದೆ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
Petrol Diesel Shortage: ಪೆಟ್ರೋಲ್, ಡೀಸೆಲ್ ಖಾಲಿಯಾಗುತ್ತೆ ಅನ್ನೋ ಸುಳ್ಳು ವದಂತಿಗಳಿಗೆ ಕಿವಿಕೊಡಬೇಡಿ; ಇಂಡಿಯನ್ ಆಯಿಲ್ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ












Click it and Unblock the Notifications