ಕ್ಯಾಂಬ್ರಿಯನ್ ಪ್ಯಾಟ್ರೋಲ್ ಸಮರಾಭ್ಯಾಸದಲ್ಲಿ ಭಾರತೀಯ ಸೇನೆಗೆ ಚಿನ್ನ

Posted By: Prithviraj
Subscribe to Oneindia Kannada

ನವದೆಹಲಿ, ಅಕ್ಟೋಬರ್, 22: ಬ್ರಿಟೀಷ್ ಆರ್ಮಿ ಆಯೋಜಿಸುವ ವಿಶ್ವದ ಕಷ್ಟಕರ ಕ್ಯಾಂಬ್ರೈನ್ ಪ್ಯಾಟ್ರೋಲಿಂಗ್ ಸಮರಾಭ್ಯಾಸದಲ್ಲಿ ಭಾರತೀಯ ಸೇನೆಯ ಗೂರ್ಖಾ ರೈಫಲ್ಸ್ ಎರಡನೇ ಪಡೆ ಸೈನಿಕರು ಚಿನ್ನದ ಪದಕ ಗಳಿಸಿದ್ದಾರೆ.

ಈ ಕುರಿತು ಬ್ರಿಟೀಷ್ ಆರ್ಮಿಯು ಅಧಿಕೃತವಾಗಿ ಮಾಹಿತಿ ನೀಡಿದ್ದು, ಭಾರತೀಯ ಯೋಧರಿಗೆ ಚಿನ್ನದ ಪದಕ ಪ್ರದಾನ ಮಾಡುತ್ತಿರುವ ವಿಡಿಯೋವೊಂದನ್ನು ಟ್ವಿಟ್ಟರ್ ನಲ್ಲಿ ಅಪ್ ಲೋಡ್ ಮಾಡಿದೆ.

ಭಾರತ ಸೈನ್ಯದ ಎಂಟು ಮಂದಿ ಯೋಧರು ಚಿನ್ನದ ಪದಕ ಪಡೆದುಕೊಂಡಿದ್ದಾರೆ ಎಂದು ಬ್ರಿಟಿಷ್ ಆರ್ಮಿ ತಿಳಿಸಿದೆ.

Indian Army wins gold medal in gruelling Cambrian Patrol exercise

ಅಷ್ಟೇ ಅಲ್ಲದೇ ಭಾರತೀಯ ಯೋಧರ ಸಾಧನೆಯನ್ನು ಶ್ಲಾಘಿಸಿ. ಬ್ರಿಟಿಷ್ ಸೇನೆಯು ತನ್ನ ಟ್ವಿಟ್ಟರ್ ಅಕೌಂಟ್ ನಲ್ಲಿ ಅಭಿನಂದನೆ ಸಲ್ಲಿಸಿದೆ.

ಕ್ಯಾಂಬ್ರಿಯನ್ ಪ್ಯಾಟ್ರೋಲ್ ಸಮಾರಾಭ್ಯಾಸವನ್ನು ಪ್ರತಿ ವರ್ಷ ಕ್ಯಾಂಬ್ರಿಯನ್ ವೇಲ್ಸ್ ಪರ್ವತ ಶ್ರೇಣಿಗಳಲ್ಲಿ ಆಯೋಜಿಸಲಾಗುತ್ತದೆ. ಈ ಸಮರಾಭ್ಯಾಸವು ವಿಶ್ವದ ಕಷ್ಟಕರ ಸಮರಾಭ್ಯಾಸಗಳಲ್ಲಿ ಒಂದಾಗಿದೆ.

ಸಮಾರಾಭ್ಯಾಸದಲ್ಲಿ ಯೋಧರು ವೇಲ್ಸ್ ಪರ್ವತ ಶ್ರೇಣಿಗಳಲ್ಲಿ ಒಟ್ಟು 55ಕೀ.ಮೀ.ದೂರ ಕ್ರಮಿಸಬೇಕಾಗುತ್ತದೆ. ಅಷ್ಟೇ ಅಲ್ಲದೇ ಹಲವು ವಿಧದ ಪರೀಕ್ಷೆಗಳನ್ನು ಇಡಲಾಗುತ್ತದೆ. ಭಾಗವಹಿಸುವ ತಂಡ ಕಡ್ಡಾಯವಾಗಿ ಈ ಪರೀಕ್ಷೆಗಳನ್ನು ಗೆಲ್ಲಬೇಕು ಮತ್ತು 48 ಗಂಟೆಯೊಳಗೆ ಪೂರ್ಣಗೊಳಿಸಬೇಕು ಎಂಬ ನಿಯಮವಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A team from the Indian Army's Gorkha Rifles has won a gold medal at one of the most gruelling exercises in the world. Team 2/8 Gorkha was awarded a gold medal in Exercise Cambrian Patrol organized by the British Army.
Please Wait while comments are loading...