2018-19ರ ಅವಧಿಯಲ್ಲಿ ನಿರುದ್ಯೋಗ ದರ 5.8% ಇಳಿಕೆ: ಲಾಕ್‌ಡೌನ್ ಬಳಿಕ ಏರಿಕೆ

ನವದೆಹಲಿ, ಜೂನ್ 5: ಜೂನ್ 2018 ರಿಂದ ಜೂನ್ 2019ರ ಅವಧಿಯಲ್ಲಿ ಭಾರತದ ನಿರುದ್ಯೋಗ ದರವು 6.1 ಪರ್ಸೆಂಟ್‌ ರಿಂದ 5.8 ಪರ್ಸೆಂಟ್‌ಗೆ ಇಳಿದಿದೆ ಎಂದು ಸರ್ಕಾರ ಅಂಕಿ-ಅಂಶಗಳು ತಿಳಿಸಿವೆ.

ನಿರುದ್ಯೋಗಿಗಳ ವಯಸ್ಸು 15 ರಿಂದ 29 ಆಗಿದ್ದು, ಇದು ಭಾರತದ 136 ಕೋಟಿ ಜನಸಂಖ್ಯೆಯ ಮೂರನೇ ಒಂದರಷ್ಟು ಆಗಿದೆ. 2017ರಲ್ಲಿ ನಿರುದ್ಯೋಗ ದರ 17.8 ಪರ್ಸೆಂಟ್ ಆಗಿದ್ದು 2018-19ರ ಅವಧಿಯಲ್ಲಿ 17.3 ಪರ್ಸೆಂಟ್‌ಗೆ ಇಳಿದಿದೆ ಎಂದು ಸರ್ಕಾರ ಬಿಡುಗಡೆ ಮಾಡಿದ ವರದಿಯಲ್ಲಿದೆ.

ರಾಷ್ಟ್ರೀಯ ಸಾಂಖ್ಯಿಕ ಸಂಸ್ಥೆಯು (ಎನ್‌ಎಸ್ಒ) ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿನ 1 ಲಕ್ಷಕ್ಕಿಂತಲೂ ಹೆಚ್ಚು ಕುಟುಂಬಗಳನ್ನು ಗಣನೆಗೆ ತೆಗೆದುಕೊಂಡು ಕಾರ್ಮಿಕರ ಸಮೀಕ್ಷೆ ನಡೆಸಿದ್ದು, ಇದರ ಮಾಹಿತಿ ಆಧರಿಸಿ ವಾರ್ಷಿಕ ವರದಿ ಸಿದ್ಧಪಡಿಸಲಾಗಿದೆ.

Indias Unemployment Rate Improved To 5.8 Percent In 2018-19: Govt Data

ಆದರೆ, ಲಾಕ್‌ಡೌನ್‌ದಿಂದಾಗಿ ಮಾರ್ಚ್‌ ಕೊನೆಯ ವಾರದಲ್ಲಿ ನಿರುದ್ಯೋಗ ದರ ಏರಿಕೆಯಾಗಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಭಾರತದ ನಿರುದ್ಯೋಗ ದರ ಮೇ ತಿಂಗಳಲ್ಲಿ 23.48% ರಷ್ಟಿದ್ದು, ಏಪ್ರಿಲ್ ತಿಂಗಳಲ್ಲಿ 23.52% ಆಗಿತ್ತು ಎಂದು ಭಾರತೀಯ ಆರ್ಥಿಕ ನಿಗಾ ಸಂಸ್ಥೆ (ಸಿಎಂಐಇ) ವರದಿಯಲ್ಲಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+