ಚಿತ್ರಗಳಲ್ಲಿ: ದೇಶದ ಪ್ರಥಮ ಹೆಲಿಕಾಪ್ಟರ್ ನಿಲ್ದಾಣ
ದೇಶದ ಪ್ರಥಮ ಹೆಲಿಕಾಪ್ಟರ್ ನಿಲ್ದಾಣ (ಹೆಲಿಪೋರ್ಟ್) ಫೆಬ್ರವರಿ 28ರಂದು ಕಾರ್ಯಾರಂಭ ಮಾಡಿದೆ. ಸರ್ಕಾರಿ ಸ್ವಾಮ್ಯದ ಪವನ್ ಹಂಸ್ ಹೆಲಿಕಾಪ್ಟರ್ ಸಂಸ್ಥೆ ನಿರ್ವಹಣೆಯ ನಿಲ್ದಾಣವನ್ನು 100 ಕೋಟಿ ರು ವೆಚ್ಚದಲ್ಲಿ ನಿರ್ಮಿಸಲಾಗಿದೆ.
ನವದೆಹಲಿ, ಮಾರ್ಚ್ 01: ದೇಶದ ಪ್ರಥಮ ಹೆಲಿಕಾಪ್ಟರ್ ನಿಲ್ದಾಣ (ಹೆಲಿಪೋರ್ಟ್) ಫೆಬ್ರವರಿ 28ರಂದು ಕಾರ್ಯಾರಂಭ ಮಾಡಿದೆ. ಸರ್ಕಾರಿ ಸ್ವಾಮ್ಯದ ಪವನ್ ಹಂಸ್ ಹೆಲಿಕಾಪ್ಟರ್ ಸಂಸ್ಥೆ ನಿರ್ವಹಣೆಯ ನಿಲ್ದಾಣವನ್ನು 100 ಕೋಟಿ ರು ವೆಚ್ಚದಲ್ಲಿ ನಿರ್ಮಿಸಲಾಗಿದೆ.
ದೆಹಲಿಯ ಉತ್ತರ ಭಾಗದಲ್ಲಿರುವ ರೋಹಿಣಿ ಪ್ರದೇಶದಲ್ಲಿರುವ ಹೆಲಿಪೋರ್ಟ್ ಗೆ ನಾಗರಿಕ ವಿಮಾನಯಾನ ಸಚಿವ ಅಶೋಕ್ ಗಣಪತಿ ರಾಜು ಚಾಲನೆ ನೀಡಿದರು. ಇದು ದಕ್ಷಿಣ ಏಷ್ಯಾ ಹಾಗೂ ಭಾರತದ ಪ್ರಪ್ರಥಮ ಹೆಲಿಪೋರ್ಟ್ ಆಗಿದೆ.
ಈ ನಿಲ್ದಾಣದಲ್ಲಿ ಏಕಕಾಲದಲ್ಲಿ 16 ಹೆಲಿಕಾಪ್ಟರ್ ಗಳು ಇಳಿಯುವ ಮತ್ತು ಮೇಲಕ್ಕೇರುವ ಸ್ಥಳವಾಕಾಶವಿದೆ. ಒಟ್ಟು ಒಂಭತ್ತು ಪಾರ್ಕಿಂಗ್ ಬೇ (ನಿಲ್ದಾಣ ಮಾರ್ಗ) ಸೌಲಭ್ಯ ನೀಡಲಾಗಿದೆ. ಹೆಲಿಪೋರ್ಟಿನ ಟರ್ಮಿನಲ್ ಕಟ್ಟಡವು 150ಕ್ಕೂ ಹೆಚ್ಚು ಪ್ರಯಾಣಿಕರಿಗೆ ಸೌಕರ್ಯ ಒದಗಿಸಲು ಸಜ್ಜಾಗಿದೆ
ಕಳೆದ ವರ್ಷ ಫೆಬ್ರವರಿಯಿಂದ ಪ್ರಾಯೋಗಿಕ ಹಾರಾಟಗಳನ್ನು ನಡೆಸಲಾಗಿತ್ತು. 2017ರ ಮೇ ತಿಂಗಳಿನಿಂದ ಹೆಲಿಪೋರ್ಟ್ ಪೂರ್ಣಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲಿದೆ ಎಂದು ಪವನ್ ಹಂಸ್ ಸಂಸ್ಥೆಯ ಅಧ್ಯಕ್ಷ ಬಿ.ಪಿ.ಶರ್ಮ ತಿಳಿಸಿದ್ದಾರೆ. ಹೆಲಿಪೋರ್ಟಿನಿಂದ ಮೊದಲ ಹಂತದಲ್ಲಿ ಎಲ್ಲೆಲ್ಲಿಗೆ ಹೆಲಿಕಾಪ್ಟರ್ ಸಂಚರಿಸಲಿದೆ? ಇನ್ನಷ್ಟು ಚಿತ್ರಗಳು ಹಾಗೂ ಮಾಹಿತಿ ಮುಂದೆ ಓದಿ...

ಹೆಲಿಪೋರ್ಟ್ ನ ಲಾಭ ಯಾರಿಗೆ
ಹೆಲಿಕಾಪ್ಟರ್ ಗಳ ಮೂಲಕ ಉತ್ತರ ಪ್ರಾಂತ್ಯದಲ್ಲಿ ವಾಯುಮಾರ್ಗ ಸಂಪರ್ಕಕ್ಕೆ ಈ ನಿಲ್ದಾಣ ಉತ್ತೇಜನ ನೀಡಲಿದೆ. ದೆಹಲಿಯಿಂದ ಶಿಮ್ಲಾ, ಹರಿದ್ವಾರ, ಡೆಹ್ರಡೂನ್, ಆಗ್ರಾ, ಮೀರತ್, ಮನೇಸಾರ್ ಮುಂತಾದ ಭಾಗಗಳಿಗೆ ಹೆಲಿಕಾಪ್ಟರ್ ಸೇವೆ ಸದ್ಯಕ್ಕೆ ಒದಗಿಸಲಾಗುತ್ತಿದೆ.

ಟಿಕೆಟ್ ಹಿಡಿದು ನಿಂತ ಪ್ರಯಾಣಿಕರು
ದೆಹಲಿಯ ರೋಹಿಣಿ ಪ್ರದೇಶದಲ್ಲಿ ಆರಂಭವಾದ ಮೊದಲ ಹೆಲಿಪೋರ್ಟ್ ನಲ್ಲಿ ಮೊದಲ ಬಾರಿಗೆ ಪ್ರಯಾಣಿಸಿದವರು ತಮ್ಮ ಟಿಕೆಟ್ ಜೊತೆಗೆ ನಿಂತಿದ್ದಾರೆ.

ಹೆಲಿಪೋರ್ಟ್ ಏರ್ ಆಂಬ್ಯುಲೆನ್ಸ್
ಸದ್ಯಕ್ಕೆ ದೆಹಲಿ ವಿಮಾನ ನಿಲ್ದಾಣವು 40 ಹೆಲಿಕಾಪ್ಟರ್ ಗಳ ಆಗಮನ ಹಾಗೂ ನಿರ್ಗಮನವನ್ನು ದಿನನಿತ್ಯ ನಿಭಾಯಿಸುತ್ತಿದೆ. ಈಗ ಎಲ್ಲವೂ ಹಂತ ಹಂತವಾಗಿ ರೋಹಿಣಿ ಬಳಿ ಇರುವ ಈ ಹೊಸ ಹೆಲಿಪೋರ್ಟ್ ಗೆ ಬರಲಿವೆ. ಹೆಲಿಪೋರ್ಟ್ ನಲ್ಲಿ ಏರ್ ಆಂಬುಲೆನ್ಸ್ ಸೇವೆ ಕೂಡಾ ಲಭ್ಯವಾಗಲಿದೆ.

ಮೊದಲ ಹೆಲಿಪೋರ್ಟ್
ದೆಹಲಿಯಲ್ಲಿ ಮೊದಲ ಹೆಲಿಪೋರ್ಟ್ ಉದ್ಘಾಟಿಸಿದ ನಾಗರಿಕ ವಿಮಾನಯಾನ ಸಚಿವ ಅಶೋಕ್ ಗಣಪತಿ ರಾಜು, ರಾಜ್ಯ ಸಚಿವ ಜಯಂತ್ ಸಿನ್ಹಾ, ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರ ಉಪಸ್ಥಿತಿ. ಪಿಟಿಐ ಚಿತ್ರ

25 ಎಕರೆ ಭೂಮಿಯಲ್ಲಿ ಹೆಲಿಪೋರ್ಟ್
* ಪವನ್ ಹಂಸ್ ಲಿಮಿಟೆಡ್, ಕೇಂದ್ರ ಸರ್ಕಾರ ಹಾಗು ಒಎನ್ ಜಿಸಿ ನಡುವಿನ ಸಹಭಾಗಿತ್ವದ ಯೋಜನೆ ಇದಾಗಿದೆ.
* ಪವನ್ ಹಂಸ್ ಶೇ 51ರಷ್ಟು ಪಾಲು ಹಾಗೂ ಸರ್ಕಾರ 49ರಷ್ಟು ಪಾಲು ಹೊಂದಿದೆ.
* 100 ಕೋಟಿ ರು ವೆಚ್ಚದ ಈ ಹೆಲಿಪೋರ್ಟ್ 25 ಎಕರೆ ವಿಸ್ತೀರ್ಣವುಳ್ಳ ಪ್ರದೇಶದಲ್ಲಿದೆ. 150 ಮಂದಿ ಪ್ರಯಾಣಿಕರನ್ನು ನಿರ್ವಹಿಸಬಲ್ಲ ಟರ್ಮಿನಲ್, 16 ಹೆಲಿಕಾಪ್ಟರ್ ನಿಲ್ಲಿಸಲು ಸ್ಥಳ ಹಾಗೂ 9 ಪಾರ್ಕಿಂಗ್ ಬೇ ಇದೆ.












Click it and Unblock the Notifications