ಭಾರತದ ಆರ್ಥಿಕತೆ ಚೇತರಿಕೆಗೆ ಮತ್ತೊಂದು ಪ್ಯಾಕೇಜ್ ಘೋಷಣೆ ಸಾಧ್ಯತೆ

ನವದೆಹಲಿ, ಆಗಸ್ಟ್‌ 12: ದೇಶದಲ್ಲಿ ಸಾಂಕ್ರಾಮಿಕ ರೋಗದ ಹರಡುವಿಕೆ ಮತ್ತು ಲಾಕ್‌ಡೌನ್‌ದಿಂದಾಗಿ ಆಗಿರುವ ಆರ್ಥಿಕತೆ ಮಂದಗತಿಗೆ ಚೇತರಿಕೆ ನೀಡಲು ಕೇಂದ್ರ ಸರಕಾರ ಶೀಘ್ರದಲ್ಲೇ ಬೃಹತ್ ಯೋಜನೆಯೊಂದನ್ನು ಘೋಷಿಸುವ ಸಾಧ್ಯತೆ ಇದೆ.

ಭಾರತದ ಆರ್ಥಿಕತೆಯ ಮರುನಿರ್ಮಾಣದ ಭಾಗವಾಗಿ ಸ್ಥಳೀಯ ಉದ್ಯಮಗಳನ್ನು ಹೆಚ್ಚು ಸ್ಪರ್ಧಾತ್ಮಕವಾಗಿಸಲು ಕೇಂದ್ರ ಸರಕಾರ ಯೋಜಿಸಿದೆ. ಬೃಹತ್‌ ಮೂಲಸೌಕರ್ಯ ಯೋಜನೆಗಳು ಮತ್ತು ಆರ್ಥಿಕ ನೀತಿಯಲ್ಲಿ ಬದಲಾವಣೆಗಳು ಸೇರಿದಂತೆ ಹೊಸ ಕ್ರಮಗಳನ್ನು ಸರ್ಕಾರ ಶೀಘ್ರದಲ್ಲೇ ಪ್ರಕಟಿಸಲಿದ್ದು ಇದರಲ್ಲಿ ಕೆಲವು ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿಯೇ ಘೋಷಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರದ ಪ್ಯಾಕೇಜ್‌ನಲ್ಲಿ ತೆರಿಗೆ ಆಡಳಿತವನ್ನು ಮರುಹೊಂದಿಸುವ ಉಪಕ್ರಮವನ್ನೂ ಸಹ ಒಳಗೊಂಡಿರಬಹುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಆಗಸ್ಟ್ 13 ರ ಹಿಂದೆಯೇ ಕ್ರಮಗಳನ್ನು ಘೋಷಿಸಬಹುದು ಎಂದು ಅವರು ಹೇಳಿದರು.

Indias Economy: Another Booster Shot Coming Soon

ಆತ್ಮನಿರ್ಭರ್ ಭಾರತ್ ಅಭಿಯಾನ್ ಅಥವಾ ಸ್ವಾವಲಂಬನೆ ಅಭಿಯಾನದ ಭಾಗವಾಗಿ ದೇಶೀಯ ಉದ್ಯಮಗಳನ್ನು ಹೆಚ್ಚು ಸ್ಪರ್ಧಾತ್ಮಕವಾಗಿಸುವ ಕ್ರಮ ಕೈಗೊಳ್ಳಲಾಗುವುದು. ಆರ್ಥಿಕ ಚೇತರಿಕೆಗಾಗಿ ಕೇಂದ್ರ ಸರಕಾರ ಇತ್ತೀಚೆಗೆ ಘೋಷಿಸಿದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಮತ್ತು ಆತ್ಮನಿರ್ಭಾರ ಭಾರತ್ ಪುನರುಜ್ಜೀವನ ಕಾರ್ಯಕ್ರಮಗಳ ಮುಂದುವರಿದ ಭಾಗ ಆಗಿರಲಿದೆ.

ಉತ್ಪಾದನಾ ಭಾಗದಲ್ಲಿ ಪ್ರಸ್ತಾಪಗಳ ಒತ್ತಡವು ದೇಶೀಯ ಉದ್ಯಮದ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವುದು ಮತ್ತು ವಿದೇಶಿ ತಯಾರಕರು ದೇಶದಲ್ಲಿ ಕಾರ್ಯಾಚರಣೆಗಳನ್ನು ಸ್ಥಾಪಿಸಲು ಸುಲಭ ಮತ್ತು ಹೆಚ್ಚು ಆಕರ್ಷಕವಾಗಿ ಮಾಡುವುದು ಯೋಜನೆಯ ಗುರಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+