ಗುಡ್ ನ್ಯೂಸ್ :ದೇಶದಲ್ಲಿ 58% ಕ್ಕಿಂತ ಹೆಚ್ಚಾಗಿದೆ ಕೊರೊನಾ ಸೋಂಕಿತರ ಚೇತರಿಕೆ ಪ್ರಮಾಣ
ನವದೆಹಲಿ, ಜೂನ್ 27: ಭಾರತದ ಪಾಲಿಗೆ ಇಂದು ಇದಕ್ಕಿಂತ ಒಳ್ಳೆಯ ಸುದ್ದಿ ಸಿಗೋಕೆ ಸಾಧ್ಯವಿಲ್ಲ ಬಿಡಿ. ಏಕೆಂದರೆ ದೇಶದ ಜನತೆಯನ್ನು, ಆರ್ಥಿಕತೆಯನ್ನು ಹಿಂಡುತ್ತಿರುವ ಕೊರೊನಾ ಮಹಾಮಾರಿಯಿಂದ ಚೇತರಿಸಿಕೊಳ್ಳುತ್ತಿರುವವರ ಪ್ರಮಾಣ ದಿನೇ ದಿನೇ ಹೆಚ್ಚುತ್ತಿದೆ. ಸದ್ಯ ಚೇತರಿಕೆ ದರವು 58 ಪರ್ಸೆಂಟ್‌ಗಿಂತ ಹೆಚ್ಚಾಗಿದೆ ಎಂದು ಸ್ವತಃ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷ ವರ್ದನ್ ಹೇಳಿದ್ದಾರೆ.
Recommended Video
ಹೌದು, ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೇಗೆ ದಿನೇ ದಿನೇ ಹೆಚ್ಚುತ್ತಿದೆಯೋ ಹಾಗೆಯೇ ಚೇತರಿಕೆಯ ಪ್ರಮಾಣವು ಏರಿಕೆಯಾಗ್ತಿದೆ. ಭಾರತದಲ್ಲಿ ಪ್ರಸ್ತುತ ಚೇತರಿಕೆ ದರ 58 ಪರ್ಸೆಂಟ್ ದಾಟಿದ್ದು ಅಂದರೆ 3 ಲಕ್ಷ ಸೋಂಕಿತರು ಡಿಸ್ಚಾರ್ಜ್ ಆಗಿದ್ದಾರೆ.
ಕೊರೊನಾ ಸೋಂಕಿನಿಂದ ಗುಣಮುಖರಾಗುವುದಷ್ಟೇ ಅಲ್ಲದೆ ಇನ್ನೊಂದು ಒಳ್ಳೆಯ ಸುದ್ದಿ ಎಂದರೆ ಸಾವಿನ ಪ್ರಮಾಣವು ಹತ್ತಿರ ಮೂರು ಪರ್ಸೆಂಟ್ ನಷ್ಟಿದೆ. ಇದು ತೀರಾ ಆತಂಕಕಾರಿ ವಿಷಯವಲ್ಲ ಎಂದು ಡಾ. ಹರ್ಷ ವರ್ದನ್ ಹೇಳಿದ್ದಾರೆ.

ಇನ್ನು ದೇಶದಲ್ಲಿ ಸೋಂಕು ದ್ವಿಗುಣಗೊಳಿಸುವಿಕೆಯ ಲಾಕ್‌ಡೌನ್‌ಗೆ 3 ದಿನಗಳ ಮೊದಲು ಇರೋದಕ್ಕಿಂತ 19 ದಿನಗಳ ಹತ್ತಿರಕ್ಕೆ ಬಂದಿದೆ ಎನ್ನಲಾಗಿದೆ.












Click it and Unblock the Notifications