• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾದಿಂದ ಸಾವನ್ನಪ್ಪಿದವರಲ್ಲಿ ಶೇ. 50ರಷ್ಟು ಮಂದಿ 60 ವರ್ಷಕ್ಕಿಂತ ಮೇಲ್ಪಟ್ಟವರು

|
Google Oneindia Kannada News

ನವದೆಹಲಿ, ಆಗಸ್ಟ್‌ 04: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಸಾವನ್ನಪ್ಪಿದ ರೋಗಿಗಳ ಒಟ್ಟು ಸಂಖ್ಯೆಯಲ್ಲಿ ಶೇ. 50ರಷ್ಟು ಸಾವುಗಳು 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಲ್ಲಿ ನಡೆದಿವೆ.

   DK Shivakumar : ಫೀಲ್ಡಿಗಿಳಿದು ಗೆದ್ದರಷ್ಟೇ ಪದಾಧಿಕಾರಿ ಹುದ್ದೆ | Oneindia Kannada

   ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ''ಮೊದಲ ಲಾಕ್‌ಡೌನ್‌ನ ನಂತರ ಇದೇ ಮೊದಲ ಬಾರಿಗೆ ಸಾವಿನ ಪ್ರಮಾಣ ಶೇ. 2.10 ರಷ್ಟಿದೆ. ಸಾವಿನ ಪ್ರಮಾಣವು ಪ್ರಗತಿಶೀಲ ಕುಸಿತವನ್ನು ಕಂಡಿದೆ ಮತ್ತು ಅದು ಮುಂದುವರಿಯುತ್ತಿದೆ, ಇದು ಉತ್ತಮ ಸಂಕೇತವಾಗಿದೆ'' ಎಂದಿದ್ದಾರೆ.

   ಯಡಿಯೂರಪ್ಪಗೆ ಕೋವಿಡ್ ಸೋಂಕು; 75 ಜನರಿಗೆ ಕ್ವಾರಂಟೈನ್ಯಡಿಯೂರಪ್ಪಗೆ ಕೋವಿಡ್ ಸೋಂಕು; 75 ಜನರಿಗೆ ಕ್ವಾರಂಟೈನ್

   ಇದರ ಜೊತೆಗೆ ಸಾವನ್ನಪ್ಪಿದ್ದವರ ಒಟ್ಟು ಜನರಲ್ಲಿ 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಲ್ಲಿ ಅರ್ಧದಷ್ಟು ಜನರಿದ್ದು, 45 ರಿಂದ 60 ವರ್ಷದೊಳಗಿನವರಲ್ಲಿ ಶೇ. 37ರಷ್ಟು ಸಾವುಗಳು ಸಂಭವಿಸಿವೆ ಎಂದಿದ್ದಾರೆ.

   ಪ್ರಸ್ತುತ, 5,86,298 ಸಕ್ರಿಯ ಕೋವಿಡ್-19 ಪ್ರಕರಣಗಳು ಭಾರತದಲ್ಲಿವೆ ಮತ್ತು 12 ಲಕ್ಷಕ್ಕೂ ಹೆಚ್ಚು ಜನರು ಚೇತರಿಸಿಕೊಂಡಿದ್ದಾರೆ. ಅನೇಕ ರಾಜ್ಯಗಳು ತಮ್ಮ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಿವೆ, ಎರಡೂ ಆರ್ಟಿ - ಪಿಸಿಆರ್ ಮತ್ತು ರಾಪಿಡ್ ಆಂಟಿಜೆನ್ ಪರೀಕ್ಷೆಗಳು. 28 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪ್ರತಿ ಮಿಲಿಯನ್ ಜನಸಂಖ್ಯೆಗೆ ದಿನಕ್ಕೆ 140 ಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸುತ್ತಿವೆ. ಗೋವಾ, ದೆಹಲಿ, ತ್ರಿಪುರ, ಮತ್ತು ತಮಿಳುನಾಡು ತಮ್ಮ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಿವೆ ಎನ್ನಲಾಗಿದೆ.

   ಇದರ ನಡುವೆ ವೆಂಟಿಲೇಟರ್‌ಗಳ ಉತ್ಪಾದನೆಯಲ್ಲಿ ಭಾರೀ ಸುಧಾರಣೆ ಕಂಡಿದ್ದು, ನಾವು ಪಡೆಯುವ 60,000 ವೆಂಟಿಲೇಟರ್‌ಗಳಲ್ಲಿ 'ಮೇಕ್ ಇನ್ ಇಂಡಿಯಾ' ವೆಂಟಿಲೇಟರ್‌ಗಳ ಪಾಲು ಶೇಕಡಾ 96 ರಷ್ಟು ಮತ್ತು ಮೌಲ್ಯದಿಂದ 90ಕ್ಕಿಂತ ಹೆಚ್ಚು. ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಮತ್ತು ಆಂಧ್ರ ಮೆಡ್-ಟೆಕ್ ವಲಯ (ಎಎಂಟಿ ಝಡ್) ವೆಂಟಿಲೇಟರ್‌ಗಳ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಬಿಇಎಲ್ 30,000 ಮತ್ತು ಎಎಂಟಿಝಡ್ 13,500 ವೆಂಟಿಲೇಟರ್‌ಗಳನ್ನು ನೀಡುತ್ತದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ತಿಳಿಸಿದ್ದಾರೆ.

   English summary
   50% deaths due to COVID-19 have taken place among the age group of 60 yrs or above & 37% deaths took place in the age group between 45 to 60 yrs says central health Secretary Rajesh Bhushan said.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X