Breaking: 24 ಗಂಟೆಗಳಲ್ಲಿ ದೇಶದಲ್ಲಿ 18,313 ಹೊಸ ಕೊರೊನಾ ಪ್ರಕರಣಗಳು
ನವದೆಹಲಿ, ಜುಲೈ 26: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 18,313 ಹೊಸ ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿದ್ದು, ಸೋಂಕಿನಿಂದ 57 ಸಾವುಗಳು ಸಂಭವಿಸಿವೆ.
ಕೇಂದ್ರ ಆರೋಗ್ಯ ಸಚಿವಾಲಯವು ಬುಧವಾರ (ಜುಲೈ 27) ಹಂಚಿಕೊಂಡ ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಒಟ್ಟು 20,742 ಮಂದಿ ಚೇತರಿಸಿಕೊಂಡಿದ್ದಾರೆ. ಒಟ್ಟು ಚೇತರಿಕೆಯ ದರವನ್ನು ಸುಮಾರು 98.47 ಪ್ರತಿಶತಕ್ಕೆ ಏರಿಕೆಯಾಗಿದೆ. ಒಟ್ಟು ಚೇತರಿಕೆಯ ಸಂಖ್ಯೆ 4,32,67,571ಕ್ಕೆ ತಲುಪಿದೆ.
ದೇಶದಲ್ಲಿ ಒಟ್ಟು ಕೊರೊನಾದ ಸಕ್ರಿಯ ಪ್ರಕರಣಗಳು 1,45,026ಕ್ಕೆ ಇಳಿದಿದೆ ಎಂದು ಆರೋಗ್ಯ ಸಚಿವಾಲಯದ ಅಂಕಿಅಂಶಗಳು ಇಂದು ತಿಳಿಸಿವೆ. ಮಂಗಳವಾರ 1,47,512 ಸಕ್ರಿಯ ಪ್ರಕರಣಗಳು ದಾಖಲಾಗಿವೆ.

ICMR ಪರೀಕ್ಷೆ:
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಪ್ರಕಾರ, ಜುಲೈ 25 ರವರೆಗೆ 87,31,85,917 ಕೊರೊನಾ ಪರೀಕ್ಷೆ ನಡೆಸಲಾಗಿದೆ. ಈ ಪೈಕಿ ಸೋಮವಾರ ಒಂದೇ ದಿನ 4,26,102 ಮಾದರಿಗಳನ್ನು ಪರೀಕ್ಷಿಸಲಾಗಿದೆ.
ಇನ್ನು ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 1,425 ಪ್ರಕರಣಗಳು ವರದಿಯಾಗಿದೆ. ಇದರಲ್ಲಿ ಬೆಂಗಳೂರು ಒಂದರಲ್ಲೇ 1,198 ಕೇಸಸ್ ವರದಿಯಾಗಿವೆ. ರಾಜ್ಯದಲ್ಲಿ 1,459 ಜನ ಚೇತರಿಸಿಕೊಂಡು ಡಿಸ್ಚಾಜ್ ಆಗಿದ್ದಾರೆ. ಬೆಂಗಳೂರಿನಲ್ಲಿ 1,241 ಮಂದಿ ಡಿಸ್ಚಾಜ್ ಆಗಿದ್ದಾರೆ. ಮಂಗಳವಾರ ಒಂದು ಸಾವು ದಾಖಲಾಗಿದೆ.












Click it and Unblock the Notifications