• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭಾರತದಲ್ಲಿ ವಿಮಾನ ಪ್ರಯಾಣಿಕರ ಸಂಖ್ಯೆ 168860ಕ್ಕೆ ಏರಿಕೆ

|

ನವದೆಹಲಿ, ಅಕ್ಟೋಬರ್.05: ಕೊರೊನಾವೈರಸ್ ಸೋಂಕು ಹರಡುವಿಕೆ ಆತಂಕದ ನಡುವೆ ವಿಮಾನ ಸಂಚಾರದಲ್ಲಿ ಪ್ರಯಾಣಿಕರ ಸಂಖ್ಯೆಯು ಗಣನೀಯವಾಗಿ ಏರಿಕೆಯಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವ ಹಾರ್ದಿಪ್ ಸಿಂಗ್ ಪುರಿ ತಿಳಿಸಿದ್ದಾರೆ.

ದೇಶದಲ್ಲಿ ಒಂದೇ ದಿನ 168860 ಪ್ರಯಾಣಿಕರು ವಿಮಾನಗಳಲ್ಲಿ ಪ್ರಯಾಣಿಸಿದ್ದಾರೆ ಎಂಬುದರ ಅಂಕಿ-ಅಂಶಗಳ ಬಗ್ಗೆ ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಕೊವಿಡ್-19 ಭೀತಿಗೂ ಮೊದಲು ಒಂದು ದಿನಕ್ಕೆ ಸಂಚರಿಸುತ್ತಿದ್ದ ಪ್ರಯಾಣಿಕರ ಸಂಖ್ಯೆಗೂ ಅಕ್ಟೋಬರ್.04ರಂದು ಪ್ರಯಾಣಿಸಿದ ಪ್ರಯಾಣಿಕರ ಸಂಖ್ಯೆಗೂ ತೀರಾ ಸನ್ನಿಹಿತವಾಗಿದೆ.

ವಾಣಿಜ್ಯ ವಿಮಾನ ಸಂಚಾರ ನಿರ್ಬಂಧ ಅ. 31ರವರೆಗೂ ವಿಸ್ತರಣೆ

ಭಾರತ ಲಾಕ್ ಡೌನ್ ಗೂ ಮೊದಲು 24 ಗಂಟೆಗಳಲ್ಲಿ ಎಷ್ಟು ಪ್ರಯಾಣಿಕರು ಪ್ರಯಾಣಿಸುತ್ತಿದ್ದರೋ ಈಗಲೂ ಅಷ್ಟೇ ಜನರು ವಿಮಾನಗಳಲ್ಲಿ ಸಂಚರಿಸುವುದಕ್ಕೆ ಆರಂಭಿಸಿದ್ದಾರೆ ಎಂದು ಸಚಿವ ಹಾರ್ದಿಪ್ ಸಿಂಗ್ ಪುರಿ ಟ್ವೀಟ್ ಮಾಡಿದ್ದಾರೆ.

ನಾಗರಿಕ ವಿಮಾನಯಾನ ಸಚಿವರ ಟ್ವೀಟ್:

ದೇಶಾದ್ಯಂತ ಕಳೆದ ಅಕ್ಟೋಬರ್.04ರಂದು 1458 ದೇಶೀಯ ವಿಮಾನಗಳಲ್ಲಿ ಒಟ್ಟು 168860 ಪ್ರಯಾಣಿಕರು ಸಂಚರಿಸಿದ್ದಾರೆ. ಭಾರತದಲ್ಲಿ ಭಾನುವಾರ ಒಟ್ಟು 2916 ವಿಮಾನಗಳು ಸಂಚರಿಸಿವೆ ಎಂದು ನಾಗರಿಕ ವಿಮಾನಯಾನ ಸಚಿವ ಹಾರ್ದಿಪ್ ಸಿಂಗ್ ಪುರಿ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.

ಭಾರತದಲ್ಲಿ ಕೊರೊನಾವೈರಸ್ ಸೋಂಕು ಹರಡುವಿಕೆ ಭೀತಿ ಹಿನ್ನೆಲೆ ಮಾರ್ಚ್.25ರಂದು ಮೊದಲ ಹಂತದ ಲಾಕ್ ಡೌನ್ ಘೋಷಿಸಲಾಗಿತ್ತು. ಅಲ್ಲಿಂದ ಮುಂದೆ ವಾಣಿಜ್ಯ ವಿಮಾನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಇತ್ತೀಚಿಗಷ್ಟೇ ಅನ್ ಲಾಕ್ 5.0 ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದ ಕೇಂದ್ರ ಗೃಹ ಸಚಿವಾಲಯವು ವಾಣಿಜ್ಯ ವಿಮಾನಗಳ ಹಾರಾಟದ ಮೇಲಿನ ನಿರ್ಬಂಧವನ್ನು ಅಕ್ಚೋಬರ್.31ರವರೆಗೂ ವಿಸ್ತರಿಸಿತ್ತು.

English summary
India: Number Of Passengers Flying In Single Day Rises To 168860.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X