• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

3 ಕೋಟಿ ಬಿಸ್ಕೆಟ್ ಪ್ಯಾಕ್ ಉಚಿತವಾಗಿ ನೀಡುವುದಾಗಿ ತಿಳಿಸಿದ ಪಾರ್ಲೆ-ಜಿ

|

ನವ ದೆಹಲಿ, ಮಾರ್ಚ್ 26: ಕೊರೊನಾ ವೈರಸ್ ತಡೆಗಟ್ಟಲು ಇಡೀ ಭಾರತ ಲಾಕ್ ಡೌನ್ ಆಗಿದೆ. ಈ ವೇಳೆ ಪಾರ್ಲೆ-ಜಿ ಬಿಸ್ಕೆಟ್ ಕಂಪನಿ ಉಚಿತವಾಗಿ ಬಿಸ್ಕೆಟ್ ಗಳನ್ನು ನೀಡಲಾಗುವುದು ಎಂದು ಘೋಷಣೆ ಮಾಡಿದೆ.

ಅನೇಕ ದಶಕಗಳ ಇತಿಹಾಸ ಹೊಂದಿರುವ, ಭಾರತದ ಜನಪ್ರಿಯ ಬಿಸ್ಕೆಟ್ ಕಂಪನಿ ಪಾರ್ಲೆ-ಜಿ ಇಂತಹ ಕಷ್ಟದ ಸಮಯದಲ್ಲಿ ಜನರ ಸಹಾಯಕ್ಕೆ ಮುಂದೆ ಬಂದಿದೆ. 3 ಕೋಟಿ ಬಿಸ್ಕೆಟ್ ಪ್ಯಾಕ್ ಉಚಿತವಾಗಿ ನೀಡುವುದಾಗಿ ತಿಳಿಸಿದೆ.

21 ದಿನ ಲಾಕ್ ಡೌನ್ ಯಾಕೆ.? ಹಿಂದಿದೆ ವೈಜ್ಞಾನಿಕ ಕಾರಣ.!

21 ದಿನ ಭಾರತ ಲಾಕ್ ಡೌನ್ ಆಗಿದೆ. ಎಲ್ಲರೂ ಮನೆಯಲ್ಲಿಯೇ ಇರಬೇಕಿದೆ. ದಿನನಿತ್ಯ ಕೆಲಸ ಮಾಡಿ, ಅದೇ ದುಡ್ಡಿನಿಂದ ಹೊಟ್ಟೆ ತುಂಬಿಸಿಕೊಳ್ಳುವವರಿಗೆ ಇದು ಕಷ್ಟದ ಸಮಯವಾಗಿದೆ. ಇಂತಹ ಸಮಯವನ್ನು ಗಮನಿಸಿದ ಪಾರ್ಲೆ-ಜಿ ಉಚಿತವಾಗಿ ಬಿಸ್ಕೆಟ್ ನೀಡಲು ತೀರ್ಮಾನ ಮಾಡಿದೆ. ಪಾರ್ಲೆ-ಜಿ ಸಂಸ್ಥೆಯ ಈ ಕೆಲಸವನ್ನು ಅನೇಕರು ಮೆಚ್ಚಿಕೊಂಡಿದ್ದಾರೆ.

ಈ ಬಗ್ಗೆ ಪಾರ್ಲೆ-ಜಿ ತನ್ನ ಆಫಿಶೀಯಲ್ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. ''ಇಂತಹ ಸಮಯದಲ್ಲಿ ನಾವು ನಮ್ಮ ಜನರಿಗಾಗಿ ಹೋರಾಟ ಮಾಡಬೇಕಿದೆ.'' ಎಂದು ಬಿಸ್ಕೆಟ್ ನೀಡುವ ವಿಷಯ ಹಂಚಿಕೊಂಡಿದೆ.

ಈವರೆಗೆ ಭಾರತದಲ್ಲಿ ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು 600ರ ಗಡಿ ದಾಟಿದೆ. 13 ಜನರು ಈ ಮಹಾಮಾರಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ.

English summary
India lockdown: Parle G to Donate 3 Crore Biscuits Packs for next 3 weeks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X