ಶೀಘ್ರ ಪ್ರಗತಿ ಕಾಣುತ್ತಿರುವ ಭಾರತೀಯ ಆರ್ಥಿಕತೆ: ಜೇಟ್ಲಿ ಮೆಚ್ಚುನುಡಿ
ನವದೆಹಲಿ, ಮೇ 26: ಭಾರತೀಯ ಜನತಾ ಪಕ್ಷದ ಆಡಳಿತಾವಧಿಯಲ್ಲಿ ಭಾರತವು ಅತ್ಯಂತ ಶೀಘ್ರವಾಗಿ ಬೆಳವಣಿಗೆ ಹೊಂದುತ್ತಿರುವ ದೇಶವಾಗಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿ ಸರ್ಕಾರ ತನ್ನ ನಾಲ್ಕನೇ ವರ್ಷದ ಆಡಳಿತವನ್ನು ಪೂರೈಸಿದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಅವರು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.
ದುರ್ಬಲವಾಗಿದ್ದ ಭಾರತ ಇದೀಗ ಸಬಲಗೊಂಡಿದೆ. ನಿರ್ಧಾರಗಳನ್ನು ಕ್ರಿಯೆಗೆ ಇಳಿಸುವ ಕೆಲಸವಾಗಿದೆ. ಇಷ್ಟು ಕಾಲ ಜಗತ್ತು ಆರ್ಥಿಕತೆಯ ವಿಷಯದಲ್ಲಿ ಭಾರತವನ್ನು ಒಂದು ಪುಟ್ಟ ದೇಶ ಎಂಬಂತೆ ನೋಡುತ್ತಿತ್ತು. ಆದರೆ ಇಂದು ನಾವು ಅತ್ಯಂತ ಶೀಘ್ರವಾಗಿ ಬೆಳವಣಿಗೆ ಹೊಂದುತ್ತಿರುವ ಅರ್ಥವ್ಯವಸ್ಥೆಯಾಗಿ ಬದಲಾಗಿದ್ದೇವೆ ಎಂದು ಜೇಟ್ಲಿ ಹೆಮ್ಮೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಮೋದಿ ಸರ್ಕಾರದ ಹತ್ತು ಹಲವು ಯೋಜನೆಗಳನ್ನು ನೆನಪಿಸಿಕೊಂಡರು.

ಇತ್ತೀಚೆಗಷ್ಟೇ ಮೂತ್ರಪಿಂಡ ಕಸಿ ಚಿಕಿತ್ಸೆಗೊಳಗಾಗಿದ್ದ ಅವರು ವಿಶ್ರಾಂತಿಯಲ್ಲಿರುವ ಕಾರಣ ಹಣಕಾಸು ಸಚಿವಾಲಯದ ಹಂಗಾಮಿ ಉಸ್ತುವಾರಿಯನ್ನು ಪ್ರಸ್ತುರ ರೈಲ್ವೇ ಸಚಿವ ಪಿಯೂಶ್ ಗೋಯೆಲ್ ಅವರ ಹೆಗಲಿಗೆ ವಹಿಸಲಾಗಿತ್ತು.












Click it and Unblock the Notifications