ಸಾವು ಗೆದ್ದ ಕುಲಭೂಷಣ್ ಜಾಧವ್ ಗೆ ಟ್ವಿಟ್ಟಿಗರ ಅಭಿನಂದನೆ

Posted By:
Subscribe to Oneindia Kannada

ನವದೆಹಲಿ, ಮೇ 18: ಕುಲಭೂಷಣ್ ಜಾಧವ್... ಇಂದು ಬೆಳಗ್ಗೆಯಿಂದ ಆ ಹೆಸರನ್ನಿಟ್ಟುಕೊಂಡು ದೇವರನ್ನು ಪ್ರಾರ್ಥಿಸಿದವರೆಷ್ಟು ಜನರೋ! ನಮ್ಮ ದೇಶದ ನೌಕಾಪಡೆಯ ಮಾಜಿ ಅಧಿಕಾರಿಯೊಬ್ಬರನ್ನು ಶತ್ರುರಾಷ್ಟ್ರ ವಿನಾಕಾರಣ ಗಲ್ಲಿಗೇರಿಸುವ ನಿರ್ಧಾರ ಮಾಡುತ್ತದೆಂದರೆ ಅದು ಅಕ್ಷಮ್ಯವಲ್ಲವೇ?

ದೂರದ ನೆದರ್ ಲ್ಯಾಂಡ್ ನ ಹೇಗ್ ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಕುಲಭೂಷಣ್ ಜಾಧವ್ ಕುರಿತ ತೀರ್ಪನ್ನು ಇಂದು ನ್ಯಾ.ರೋನಿ ಅಬ್ರಾಹಂ ಓದುವುದಕ್ಕೆ ಆರಂಭಿಸುತ್ತಿದ್ದಂತೆಯೇ ಭಾರತದಲ್ಲಿರುವ ಪ್ರತಿಯೊಬ್ಬ ದೇಶಭಕ್ತನ ಎದೆಯಲ್ಲೂ ಢವ ಢವ! ಭಾರತೀಯ ರಾಜತಾಂತ್ರಿಕ ವಿಭಾಗಕ್ಕೆ ಇದೊಂದು ಪ್ರತಿಷ್ಠೆಯ ಪ್ರಶ್ನೆಯೂ ಆಗಿತ್ತು ಎಂದರೆ ತಪ್ಪಾಗಲಾರದು.[ಜಾಧವ್ ಗೆ ಜಯ ತಂದಿತ್ತ ವಕೀಲ ಹರೀಶ್ ಸಾಳ್ವೆ ಪರಿಚಯ]

ಕೊನೆಗೂ ಕುಲಭೂಷಣ್ ಜಾಧವ್ ಅವರಿಗೆ ಪಾಕಿಸ್ತಾನದ ಸೇನಾ ನ್ಯಾಯಾಲಯ ವಿಧಿಸಿದ್ದ ಗಲ್ಲು ಶಿಕ್ಷೆಗೆ ಅಂತಾರಾಷ್ಟ್ರೀಯ ನ್ಯಾಯಾಲಯ ತಡೆಯೊಡ್ಡಿ ಮಧ್ಯಂತರ ತೀರ್ಪು ನೀಡುತ್ತಿದ್ದಂತೆಯೇ ಇಡೀ ಭಾರತವೂ ಹರ್ಷದ ಹೊನಲಲ್ಲಿ ತೇಲಿತ್ತು. ಇದು ಅಂತಿಮ ವಿಜಯವಲ್ಲ, ಆದರೂ, ಅಂತಿಮ ವಿಜಯಕ್ಕೆ ಇದೊಂದು ಮೆಟ್ಟಿಲು ಎಂದೇ ಭಾರತ ತಿಳಿದಿದೆ.

ಅದಕ್ಕೆಂದೇ ಇಂದು ಭಾರತದಾದ್ಯಂತ ವಿಜಯೋತ್ಸವ ಆಚರಣೆಗೊಳ್ಳುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತವನ್ನು ಪ್ರತಿನಿಧಿಸಿ, ಕುಲಭೂಷಣ್ ಜಾಧವ್ ಅವರ ಪರ ವಾದ ಮಂಡಿಸಿದ ಹರೀಶ್ ಸಾಳ್ವೆ ಅವರಿಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸೇರಿದಂತೆ ಹಲವು ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ. ಟ್ವಿಟ್ಟರ್ ನಲ್ಲಿ ಕುಲಭೂಷಣ್ ಜಾಧವ್ ಗಲ್ಲು ಶಿಕ್ಷೆ ತಡೆಗೆ ಸಂಬಂಧಸಿದಂತೆ ಹರಿದ ಟ್ವೀಟ್ ಗಳತ್ತ ಒಂದು ನೋಟ ಇಲ್ಲಿದೆ...

ಮೋದಿ ಆಡಳಿತದಲ್ಲಿ ನ್ಯಾಯ ಸಿಕ್ಕೇ ಸಿಗುತ್ತೆ!

ನಾನು ಧೈರ್ಯದಿಂದ ಹೇಳಬಲ್ಲೆ, ಪ್ರಧಾನಿ ಮೋದಿಯವರ ನಾಯಕತ್ವದ ಭಾರತ ಕುಲಭೂಷಣ್ ಜಾಧವ್ ರಂಥವರಿಗಾಗಿ ಹೋರಾಡಲು ಎಂದಿಗೂ ಹಿಂದೇಟು ಹಾಕುವುದಿಲ್ಲ ಎಂಬರ್ಥದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.

ಹರೀಶ್ ಸಾಳ್ವೆ ಅವರಿಗೆ ಧನ್ಯವಾದ

ಭಾರತದ ಪರ ಬಹಳ ಪರಿಣಾಮಕಾರಿಯಾಗಿ ವಾದ ಮಂಡಿಸಿದ ಹರೀಶ್ ಸಾಳ್ವೆ ಅವರಿಗೆ ನಾವೆಲ್ಲರೂ ಚಿರಋಣಿಯಾಗಿದ್ದೇವೆ ಎಂದು ಸಹ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿ, ಸಾಳ್ವೆ ಅವರಿಗೆ ಹೃತ್ಪೂರ್ವಕ ಧನ್ಯವಾದ ಅರ್ಪಿಸಿದ್ದಾರೆ.[ಜಾಧವ್ ನೇಣು ತಡೆ : ಕೋರ್ಟಿನ 10 ಪ್ರಮುಖ ಹೇಳಿಕೆ]

ಭಾರತೀಯರಿಗೆ ತೃಪ್ತಿ ನೀಡಿದ ತೀರ್ಪು

ಕುಲಭೂಷಣ್ ಜಾಧವ್ ಅವರಿಗೆ ಪಾಕಿಸ್ತಾನ ವಿಧಿಸಿದ್ದ ಗಲ್ಲುಶಿಕ್ಷೆಗೆ ತಡೆ ನೀಡಿದ ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪು ಸಮಸ್ತ ಭಾರತೀಯರಿಗೂ ಆಳವಾದ ತೃಪ್ತಿ ಮತ್ತು ನಿರಾಳತೆಯನ್ನು ನೀಡಿದೆ ಎಂದು ಗೃಹ ಸಚಿಯ ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.[ಜಾಧವ್ ಗಲ್ಲು ಶಿಕ್ಷೆಗೆ ತಡೆ; ಅಂತಾರಾಷ್ಟ್ರೀಯ ಕೋರ್ಟ್ ಐತಿಹಾಸಿಕ ತೀರ್ಪು]

ಬಿಡುಗಡೆಯಾಗುವವರೆಗೂ ನಿಲ್ಲುವುದು ಬೇಡ

ಭಾರತ ಮಾತೆಗೆ ಜಯವಾಗಲಿ, ಗಲ್ಲು ಶಿಕ್ಷೆಗೆ ತಡೆ ನೀಡಿದ ನ್ಯಾಯಾಧೀಶರಿಗೆ, ವಾದ ಮಂಡಿಸಿದ ಹರೀಶ್ ಸಾಳ್ವೆ ಅವರಿಗೆ ಮತ್ತು ಪ್ರಧಾನಿ ಮೋದಿಯವರಿಗೆ ನಮ್ಮೆಲ್ಲ ಧನ್ಯವಾದಗಳು. ಆದರೆ ಇದು ಇಲ್ಲಿಗೇ ಮುಗಿಯಲಿಲ್ಲ. ಜಾದವ್ ಅವರು ಬಿಡುಗಡೆಯಾಗುವವರೆಗೂ ನಾವು ಈ ಹೋರಾಟವನ್ನು ನಿಲ್ಲಿಸಬಾರದು ಎಂದು ಅಂಶುಲ್ ಸಕ್ಸೇನಾ ಎನ್ನುವವರು ಟ್ವೀಟ್ ಮಾಡಿದ್ದಾರೆ.[ಕುಲಭೂಷಣ್ ಜಾಧವ್ ಪ್ರಕರಣ: ಗುರುವಾರ ಮಧ್ಯಾಹ್ನ 3.30ಕ್ಕೆ ತೀರ್ಪು]

ನ್ಯಾಯ ಗೆದ್ದಿದೆ

ಭಾರತಕ್ಕೆ ಅಭಿನಂದನೆ! ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಧನ್ಯವಾದ. ನ್ಯಾಯ ಗೆದ್ದಿದೆ ಎಂದು ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಟ್ವೀಟ್ ಮಾಡಿದ್ದಾರೆ.[ಅಂತಾರಾಷ್ಟ್ರೀಯ ಕೋರ್ಟ್ ಗೆ ಸಡ್ಡು ಹೊಡೆಯಲು ಪಾಕ್ ಸಜ್ಜು]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
After The International court of Justice (ICJ) order to stay death sentence to Kulbhushan Jadhav of India which was imposed by Pakistan, So many indians sharing their happiness in social media. And ministers like Sushma Swaraj and Rajanath Singh also congratulates Kulbhushan Jadhav. Here are few twitter statements.
Please Wait while comments are loading...