24 ಗಂಟೆಯಲ್ಲಿ 52,509 ಮಂದಿಗೆ ಕೊರೊನಾ, 857 ಸಾವು

ದೆಹಲಿ, ಆಗಸ್ಟ್ 5: ಭಾರತದಲ್ಲಿ ಹೊಸದಾಗಿ 52 ಸಾವಿರ ಜನರಿಗೆ ಕೊರೊನಾ ವೈರಸ್ ತಗುಲಿದೆ. ಕಳೆದ 24 ಗಂಟೆಯಲ್ಲಿ ದೇಶಾದ್ಯಂತ 52,509 ಹೊಸ ಕೇಸ್ ಪತ್ತೆಯಾಗಿದೆ ಹಾಗೂ 857 ಜನರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಇಂದಿನ ವರದಿ ಬಳಿಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 19,08,254ಕ್ಕೆ ತಲುಪಿದೆ. ಅದರಲ್ಲಿ 12,82,215 ಜನರು ಸೋಂಕಿನಿಂದ ಚಿಕಿತ್ಸೆ ಪಡೆದುಕೊಂಡಿದ್ದರೆ, 5,86,244 ಮಂದಿ ಕ್ವಾರಂಟೈನ್ ಕೇಂದ್ರ ಹಾಗೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೊಸದಾಗಿ 857 ಜನರು ಕೊರೊನಾಗೆ ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 39,795ಕ್ಕೆ ಏರಿಕೆಯಾಗಿದೆ.

India added 52,509 new COVID19 cases in the last 24 hours

ಕಳೆದ ಎರಡು ದಿನವೂ ಅಮೆರಿಕ ಹಾಗೂ ಬ್ರೆಜಿಲ್‌ ದೇಶಗಳಿಂತ ಹೆಚ್ಚು ಕೊರೊನಾ ಕೇಸ್ ಹಾಗೂ ಸಾವು ಭಾರತದಲ್ಲಿ ವರದಿಯಾಗಿತ್ತು. ಆದರೆ, ಇಂದು ಮತ್ತೆ ಅಮೆರಿಕ ಹಾಗೂ ಬ್ರೆಜಿಲ್ ಮುಂದೆ ಹೋಗಿದೆ. ಅಮೆರಿಕದಲ್ಲಿ ಹೊಸದಾಗಿ 54,504 ದಾಖಲಾಗಿದ್ದರೆ, ಬ್ರೆಜಿಲ್‌ನಲ್ಲಿ 56,411 ಮಂದಿಗೆ ಸೋಂಕು ತಗುಲಿದೆ.

ಇನ್ನು ಮಹಾರಾಷ್ಟ್ರದಲ್ಲಿ ನಿನ್ನೆ (ಆಗಸ್ಟ್ 4) 7760 ಕೊರೊನಾ ಕೇಸ್ ಪತ್ತೆಯಾಗಿದೆ. ತಮಿಳುನಾಡಿನಲ್ಲಿ 5063 ಕೇಸ್ ದಾಖಲಾಗಿದೆ. ಆಂಧ್ರ ಪ್ರದೇಶದಲ್ಲಿ 9747 ಪ್ರಕರಣ ಹಾಗೂ ಕರ್ನಾಟಕದಲ್ಲಿ 6259 ಕೇಸ್ ವರದಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+