ಚಿತ್ರಗಳು : ಗಣರಾಜ್ಯೋತ್ಸವಕ್ಕೆ ವಾಯುಪಡೆ ತಾಲೀಮು

ಬೆಂಗಳೂರು, ಜನವರಿ 21 : ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಗಣರಾಜ್ಯೋತ್ಸವದ ಸಿದ್ಧತೆಗಳು ನಡೆಯುತ್ತಿವೆ. ಸೇನಾಪಡೆಗಳು, ಫ್ರಾನ್ಸ್ ಸೈನಿಕರು, ಶ್ವಾನದಳಗಳು ರಾಜಪಥ್‌ನಲ್ಲಿ ತಾಲೀಮು ನಡೆಸುತ್ತಿವೆ. ಉಗ್ರರು ದಾಳಿ ನಡೆಸುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ ದೆಹಲಿಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಫ್ರಾನ್ಸ್‌ ಅಧ್ಯಕ್ಷ ಫ್ರಾಂಕೋಯಿಸ್ ಹೋಲ್ಯಾಂಡ್ ಅವರು ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುತ್ತಿದ್ದಾರೆ. ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ವಿದೇಶದ ಸೇನಾ ತುಕಡಿಯೊಂದು ಗಣರಾಜ್ಯೋತ್ಸವದಲ್ಲಿ ಭಾರತೀಯ ಸೇನಾ ಪಡೆಗಳ ಜೊತೆಗೆ ಪರೇಡ್‌ನಲ್ಲಿ ಪಾಲ್ಗೊಳ್ಳಲಿದೆ. [ಗಣರಾಜ್ಯೋತ್ಸವಕ್ಕೆ ಶ್ವಾನದಳದ ಪರೇಡ್]

26 ವರ್ಷಗಳ ಬಳಿಕ ಭಾರತೀಯ ಸೇನೆಯ ಶ್ವಾನದಳಕ್ಕೆ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ. 36 ಶ್ವಾನಗಳು ಪರೇಡ್‌ನಲ್ಲಿ ಠೀವಿಯಿಂದ ಹೆಜ್ಜೆ ಹಾಕಲಿವೆ. ಅರೆಸೇನಾಪಡೆಯ ಯೋಧರಿಗೆ ಈ ಬಾರಿಯ ಪರೇಡ್‌ನಲ್ಲಿ ಭಾಗವಹಿಸಲು ಅವಕಾಶ ನೀಡಿಲ್ಲ. [ಗಣರಾಜ್ಯೋತ್ಸವದಕ್ಕೆ ಫ್ರಾನ್ಸ್ ಸೈನಿಕರ ತಾಲೀಮು]

ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೋಲ್ಯಾಂಡ್ ಅವರು ಪಾಲ್ಗೊಳ್ಳುತ್ತಿರುವುದರಿಂದ ಐಎಸ್‌ಐಎಸ್ ಉಗ್ರರ ಕಣ್ಣು ಗಣರಾಜ್ಯೋತ್ಸವದ ಮೇಲೆ ಬಿದ್ದಿದೆ. ಜವನರಿ 26ರಂದು ದೇಶದ ವಿವಿಧ ಭಾಗಗಳಲ್ಲಿ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.....ಸೈನಿಕರ ತಾಲೀಮಿನ ಚಿತ್ರಗಳು ಇಲ್ಲಿವೆ [ಪಿಟಿಐ ಚಿತ್ರಗಳು]

ವಾಯುಪಡೆಯ ತಾಲೀಮು

ವಾಯುಪಡೆಯ ತಾಲೀಮು

ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪಾಲ್ಗೊಳ್ಳುವ ವಾಯುಪಡೆಯ ವಿಮಾನಗಳು ನವದೆಹಲಿಯಲ್ಲಿ ಗುರುವಾರ ತಾಲೀಮು ನಡೆಸಿದವು.

ಯದ್ಧ ವಿಮಾನದ ತಾಲೀಮು

ಯದ್ಧ ವಿಮಾನದ ತಾಲೀಮು

ಜನವರಿ 26ರಂದು ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕೌಶಲ್ಯ ಪ್ರದರ್ಶಿಸಲಿರುವ ವಾಯುಪಡೆಯ ಯುದ್ಧ ವಿಮಾನ ದೆಹಲಿಯಲ್ಲಿ ತಾಲೀಮು ನಡೆಸುವ ಮೂಲಕ ಜನರ ಗಮನ ಸೆಳೆಯಿತು.

ಸ್ತಬ್ಧ ಚಿತ್ರಗಳ ತಾಲೀಮು

ಸ್ತಬ್ಧ ಚಿತ್ರಗಳ ತಾಲೀಮು

ಜನವರಿ 26ರಂದು ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುವ ಸ್ತಬ್ಧ ಚಿತ್ರಗಳು ರಾಜಪಥ್‌ನಲ್ಲಿ ಗುರುವಾರ ತಾಲೀಮು ನಡೆಸುವಾಗ ಕ್ಯಾಮರಾ ಕಣ್ಣಿಗೆ ಕಂಡಿದ್ದು ಹೀಗೆ.

ವಾಯುಪಡೆಯ ವಿಮಾನದ ತಾಲೀಮು

ವಾಯುಪಡೆಯ ವಿಮಾನದ ತಾಲೀಮು

ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪಾಲ್ಗೊಳ್ಳುವ ವಿಮಾನಗಳು ದೆಹಲಿಯಲ್ಲಿ ತಾಲೀಮು ನಡೆಸುವಾಗ ಕಂಡಿದ್ದು ಹೀಗೆ.

ತಾಲೀಮು ನಡೆಸಿದ ಯುದ್ಧ ವಿಮಾನ

ತಾಲೀಮು ನಡೆಸಿದ ಯುದ್ಧ ವಿಮಾನ

ಜನವರಿ 26ರಂದು ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕೌಶಲ್ಯ ಪ್ರದರ್ಶಿಸಲಿರುವ ವಾಯುಪಡೆಯ ಯುದ್ಧ ವಿಮಾನ ಇಂದು ತಾಲೀಮು ನಡೆಸಿತು.

ತಾಲೀಮು ನಡೆಸಿದ ಟ್ಯಾಂಕರ್

ತಾಲೀಮು ನಡೆಸಿದ ಟ್ಯಾಂಕರ್

ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಪಾಲ್ಗೊಳ್ಳುವ ಸೇನೆಯ ಟ್ಯಾಂಕರ್‌ಗಳು ರಾಜಪಥ್‌ನಲ್ಲಿ ತಾಲೀಮು ನಡೆಸುವಾಗ ಕಂಡಿದ್ದು ಹೀಗೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+