ದೆಹಲಿಯಲ್ಲಿ ಮುಂದಿನ 3 ದಿನಗಳಲ್ಲಿ ತೀವ್ರ ಕಳಪೆಯಾಗಲಿದೆ ಗಾಳಿ ಗುಣಮಟ್ಟ

ನವದೆಹಲಿ, ಅಕ್ಟೋಬರ್ 11: ದೆಹಲಿಯಲ್ಲಿ ಮುಂದಿನ ಮೂರು ದಿನ ಗಾಳಿಯ ಗುಣಮಟ್ಟ ತೀವ್ರ ಕಳಪೆಯಾಗಿರಲಿದೆ ಎಂದು ಹೇಳಲಾಗಿದೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಾರ, ದೆಹಲಿಯ ಗಾಳಿಯ ಗುಣಮಟ್ಟ ಭಾನುವಾರ AQI(Air Quality Index) 168 ದಾಖಲಾಗಿತ್ತು. ಕೃಷಿ ಭೂಮಿ ಬೆಂಕಿ ಹಾಗೂ ಕೆಲವು ಸ್ಥಳೀಯ ಕಾರಣಗಳಿಂದಾಗಿ ಗಾಳಿಯ ಗುಣಮಟ್ಟ ಮುಂದಿನ ದಿನಗಳಲ್ಲಿ ಮತ್ತಷ್ಟು ಹದಗೆಡುವ ಸಾಧ್ಯತೆ ಇದೆ.

ದೆಹಲಿಯಲ್ಲಿ ಪಿಎಂ 2.5 ವಾಯುಗುಣಮಟ್ಟ ದಾಖಲಾಗಿದೆ. ಅಂದರೆ ಸೂಕ್ಷ್ಮ ಕಣಗಳು 2.5 ಮೈಕ್ರೋಮೀಟರುಗಳಿಗಿಂತ ಕಡಿಮೆ ವ್ಯಾಸವುಳ್ಳ ಉಸಿರಿನೊಂದಿಗೆ ಸೇರಬಹುದಾದ, ಶ್ವಾಸಕೋಶ ಮತ್ತು ರಕ್ತದ ಹರಿವಿನಲ್ಲಿ ಪ್ರವೇಶಿಸಬಹುದಾದ, ಗಂಭೀರವಾದ ಆರೋಗ್ಯ ಸಮಸ್ಯೆಯನ್ನು ಉಂಟುಮಾಡುವಂತಹ ಮಾಲಿನ್ಯಕಾರಕ ಕಣಗಳಾಗಿರುತ್ತವೆ.

In Delhi Air Quality Likely To Deteriorate To Poor Category In Next 3 Days

ಶ್ವಾಸಕೋಶ ಮತ್ತು ಹೃದಯದ ಮೇಲೆ ಅತಿ ಗಂಭೀರ ಪರಿಣಾಮಗಳು ಉಂಟಾಗುತ್ತವೆ. ಒಡ್ಡಿಕೊಳ್ಳುವಿಕೆಯು ಕೆಮ್ಮು ಅಥವಾ ಉಸಿರಾಟದ ತೊಂದರೆ, ಉಲ್ಬಣಗೊಂಡ ಅಸ್ತಮಾ ಮತ್ತು ತೀವ್ರವಾದ ಉಸಿರಾಟದ ಕಾಯಿಲೆಗಳಿಗೆ ಕಾರಣವಾಗಬಹುದು ಇದು ಅನಾರೋಗ್ಯಕರ ಎಂದೇ ಹೇಳಬಹುದು.

SO2 ತೃಪ್ತಿಕರವಾಗಿರುತ್ತದೆ. ಸಲ್ಫರ್ ಡೈಆಕ್ಸೈಡ್‌ಗೆ ಒಡ್ಡಿಕೊಳ್ಳುವುದು ಗಂಟಲು ಮತ್ತು ಕಣ್ಣಿನ ಕಿರಿಕಿರಿ ಮತ್ತು ಅಸ್ತಮಾ ಹಾಗೂ ತೀವ್ರವಾದ ಗಂಟಲಿನ ಊತಕ್ಕೆ ಕಾರಣವಾಗಬಹುದು.

ಕೃಷಿ ಜಮೀನುಗಳನ್ನು ಸುಡುವುದು, ವಾಹನಗಳಿಂದ ಬರುವ ಹೊಗೆ, ಕೈಗಾರಿಕೆಗಳಿಂದ ಉಂಟಾಗುವ ಮಾಲಿನ್ಯ ಹಾಗೂ ವಿದ್ಯುತ್ ಸ್ಥಾವರಗಳು ಹೆಚ್ಚಾಗಿ ದೆಹಲಿಯ ಮಾಲಿನ್ಯಕ್ಕೆ ಕಾರಣವಾಗಿರುವ ಅಂಶಗಳಾಗಿವೆ.

ಸೆಪ್ಟೆಂಬರ್ 1 ರಿಂದ ಅಕ್ಟೋಬರ್ 10ರ ಒಳಗೆ ಪಂಜಾಬ್ ಹಾಗೂ ಹರ್ಯಾಣದಲ್ಲಿ ಕೃಷಿ ಭೂಮಿಗೆ ಬೆಂಕಿ ಹಾಕಲಾಗುತ್ತಿದ್ದು, ಮಾಲಿನ್ಯ ಹೆಚ್ಚಿದೆ.
ಅಮೃತಸರ, ಪಟಿಯಾಲಾ, ಪಂಜಾಬ್, ಕುರುಕ್ಷೇತ್ರ, ಕರ್ನಲ್, ಅಂಬಾಲಾದಲ್ಲಿ ಕೃಷಿ ಚಟುವಟಿಕೆಗಳು ಹೆಚ್ಚಿದೆ.

ದೆಹಲಿ ಸರ್ಕಾರವು ವಾಯು ಗುಣಮಟ್ಟದ ಮುನ್ಸೂಚನೆ ನೀಡುವುದು ಹಾಗೂ ಅನಾರೋಗ್ಯಕರ ವಾಯು ಪರಿಸ್ಥಿತಿಯನ್ನು ತಡೆಗಟ್ಟಲು ಗ್ರೇಡ್ ಆಕ್ಷನ್ ಪ್ಲಾನ್‌ನ್ನು ಮುಂಚಿತವಾಗಿಯೇ ಜಾರಿಗೊಳಿಸುವ ಅಗತ್ಯವಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಭೂ ವಿಜ್ಞಾನ ಸಚಿವಾಲಯದ ಅಡಿಯಲ್ಲಿರುವ ವಾಯು ಗುಣಮಟ್ಟ ಹಾಗೂ ಹವಾಮಾನ ಮುನ್ಸೂಚನೆ ಮತ್ತು ಸಂಶೋಧನೆಯು ದೆಹಲಿಯ ಎಕ್ಯೂಐ ಪಿಎಂ 10 ಇದ್ದು ಮಧ್ಯಮ ಪ್ರಮಾಣದಲ್ಲಿದೆ , ವಾತಾವರಣದಲ್ಲಿ ಧೂಳಿನ ಕಣಗಳು ಸೇರ್ಪಡೆಯಾಗಿ ಮುಂದಿನ ಮೂರು ದಿನ ವಾಯುಗುಣಮಟ್ಟ ತೀವ್ರ ಕಳಪೆಯಾಗಿರಲಿದೆ ಎಂದು ಹೇಳಿದೆ.

ಕಣಗಳು 10 ಮೈಕ್ರೋಮೀಟರುಗಳಿಗಿಂತ ಕಡಿಮೆ ವ್ಯಾಸ ಹೊಂದಿರುವ ಉಸಿರಿನೊಂದಿಗೆ ಸೇರಬಹುದಾದ ಮಾಲಿನ್ಯಕಾರಕ ಕಣಗಳಾಗಿವೆ. 2.5 ಮೈಕ್ರೋಮೀಟರುಗಳಿಗಿಂತ ದೊಡ್ಡದಾದ ಕಣಗಳು ಗಾಳಿಯಲ್ಲಿ ಶೇಖರವಾಗಬಹುದು, ಇವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತವೆ.

ಒಡ್ಡಿಕೊಳ್ಳುವಿಕೆಯು ಕಣ್ಣು ಮತ್ತು ಗಂಟಲಿನ ಕಿರಿಕಿರಿ, ಕೆಮ್ಮು ಅಥವಾ ಉಸಿರಾಟದ ತೊಂದರೆ ಮತ್ತು ಅಸ್ತಮಾ ಉಲ್ಬಗೊಳ್ಳುವುದಕ್ಕೆ ಕಾರಣವಾಗಬಹುದು. ಪದೇಪದೇ ಮತ್ತು ವಿಪರೀತವಾದ ಒಡ್ಡಿಕೊಳ್ಳುವಿಕೆಯು ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+