ಭಯೋತ್ಪಾದನೆ ಚಟುವಟಿಕೆಗೆ ಕೇರಳ ಹೆಚ್ಚು ಪ್ರಶಸ್ತ: ಭಟ್ಕಳ
ನವದೆಹಲಿ, ಸೆ. 19: ಇಂಡಿಯನ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯ ಸೂತ್ರಧಾರ ಯಾಸಿನ್ ಭಟ್ಕಳ ಕರಾಳ ಹಸ್ತ ಮಂಗಳೂರು, ಗೋವಾದತ್ತಲೂ ಪಸರಿಸಿತ್ತು ಎಂಬ ಸ್ಫೋಟಕ ಮಾಹಿತಿ ಹೊರಬಿದ್ದ ನಂತರ ಭಯೋತ್ಫಾದನೆ ಚಟುವಟಿಕೆಗೆ ಪ್ರಶಸ್ತ ತಾಣವೆನಿಸಿರುವ ಕೇರಳದಲ್ಲೂ ಯಾಸಿನ್ ಭಟ್ಕಳನ ಹೆಜ್ಜೆ ಗುರುತು ಮೂಡಿಸಿದ್ದಾನೆ ಎಂಬ ಸಂಗತಿ ಬಹಿರಂಗವಾಗಿದೆ.
ರಾಷ್ಟ್ರೀಯ ತನಿಖಾ ದಳದ (NIA) ಬಂಧನದಲ್ಲಿರುವ ಯಾಸಿನ್ ಭಟ್ಕಳ ಮತ್ತು ಅವನ ಸಹಚರ ಅಸಾದುಲ್ಲಾ ಅಖ್ತರ್ ಅಲಿಯಾಸ್ ಹಡ್ಡಿ ನಿರಂತವಾಗಿ ತಮ್ಮ ಪಾತಕ ಕೃತ್ಯಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. 2008ರ ಬೆಂಗಳೂರು ಬಾಂಬ್ ಸ್ಫೋಟದ ಬಗ್ಗೆ ಹೆಚ್ಚಿನ ಮಾಹಿತಿ ಕೆದಕಿದಾಗ ಕೇರಳದಲ್ಲಿನ ಭಯೋತ್ಪಾದನೆ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದ್ದಾನೆ.
ಕೇರಳದಲ್ಲಿ IM ಸ್ಥಾಪನೆಗೆ ತಾನೇ ಕಾರಣ ಎಂದಿರುವ ಯಾಸಿನ್ ಭಟ್ಕಳ ಇನ್ನೂ ಏನೆಲ್ಲ ಹೇಳಿದ್ದಾನೆ ಕೇಳಿ:

ಕೇರಳದಲ್ಲೂ sleeper cellಗಳಿವೆ
ಕರ್ನಾಟಕ, ಬಿಹಾರ, ಪುಣೆ, ಗೂವಾದಲ್ಲಿ sleeper cellಗಳನ್ನು ಸ್ಥಾಪಿಸಿ ಭಯೋತ್ಪಾದಕ ಚಟುವಟಿಕೆಗೆ ಯುವಕರನ್ನು ನೇಮಿಸಿಕೊಳ್ಳುವುದರ ನಡುವೆಯೇ ಕೇರಳದಲ್ಲೂ ತಾವು ಸಕ್ರಿಯರಾಗಿದ್ದೆವು. ಕೇರಳದ ಉತ್ತರ ಜಿಲ್ಲೆಗಳಲ್ಲಿ ಹೊಸ sleeper cellಗಳನ್ನು ಸ್ಥಾಪಿಸಿಕೊಂಡಿದ್ದೇವೆ. ಅಲ್ಲಿ ವ್ಯಾಪಕ ತರಬೇತಿ ನೀಡಲಾಗುತ್ತಿದೆ. ಹೀಗೆ ತರಬೇತಿ ಪಡೆದವರು ಭಾರತದಲ್ಲಿ ಹೊಸದಾಗಿ ದಾಳಿ ನಡೆಸಲು ಸಜ್ಜಾಗಿದ್ದಾರೆ.

ಹವಾಲಾ ಮೂಲಕ ಕೊಲ್ಲಿ ರಾಷ್ಟ್ರಗಳಿಂದ ಉಗ್ರರಿಗೆ ಹಣ
ಭಯೋತ್ಪಾದನೆ ತರಬೇತಿ ನೀಡಲು ಅನೇಕ ವರ್ಷಗಳಿಂದ LeT ಕೊಲ್ಲಿ ರಾಷ್ಟ್ರಗಳಲ್ಲಿ ಯುವಕರನ್ನು ನೇಮಿಸಿಕೊಳ್ಳುತ್ತಿದೆ. ಹವಾಲಾ ಜಾಲದ ಮೂಲಕ ಕೊಲ್ಲಿ ರಾಷ್ಟ್ರಗಳಿಂದ ಉಗ್ರ ಚಟುವಟಿಕೆಗಳಿಗೆ ಹಣ ಹರಿದುಬರುತ್ತಿದೆ. ಟಿ ನಾಜಿರ್ ಎಂಬ ಕೇರಳ ಪ್ರಜೆ ಲಷ್ಕರ್ ಸಂಘಟನೆಯ ಪರವಾಗಿ ಕೇರಳದಲ್ಲಿ ಸಕ್ರಿಯನಾಗಿದ್ದಾನೆ. ಕಾಸರಗೋಡು, ಕಣ್ಣೂರು ಮತ್ತು ಕೋಜಿಕ್ಕೋಡ್ ಗಳಲ್ಲಿ IM ತಂಡಗಳು ಕಾರ್ಚಾರಣೆಯಲ್ಲಿವೆ.

ಕಠ್ಮಂಡುವಿನಿಂದ ಕರಾಚಿಗೆ LeT ನೇರ ಸಂಪರ್ಕ
ಅಷ್ಟೇ ಅಲ್ಲ. ಕಠ್ಮಂಡುವಿನಿಂದ ಕರಾಚಿಗೆ ನೇರ ಸಂಪರ್ಕವಿದೆ. ಕರಾಚಿಯಲ್ಲಿ Lashkar-e-Tayyaba (LeT) ಕೇಂದ್ರಗಳಲ್ಲಿ ತರಬೇತಿ ನೀಡಿ ಭಯೋತ್ಪಾದಕ ಕೃತ್ಯಗಳನ್ನು ನಡೆಸುವಂತೆ ಅವರನ್ನು ಭಾರತಕ್ಕೆ ಕಳುಹಿಸಲಾಗುತ್ತಿದೆ.

Students Islamic Movement of India
ಕೇರಳದಲ್ಲಿ ನಮಗೆ ಅನುಕಂಪ ನೀಡುವವರು ಹೆಚ್ಚಾಗಿದ್ದಾರೆ. Students Islamic Movement of India ಬಗ್ಗೆ ಅನುಕಂಪ ಹೊಂದಿರುವವರು ನಮಗೆ ಸಾಥ್ ನೀಡಿದ್ದಾರೆ. Harkat-ul Jihad-al Islami ಮತ್ತು LeT ಕೇರಳದಲ್ಲೂ ಬೇರು ಬಿಟ್ಟಿದೆ.












Click it and Unblock the Notifications