ಮಾಧ್ಯಮಗಳ ಮೇಲೆ ಗೂಬೆ ಕೂರಿಸಿದ ಕುಮಾರ್ ವಿಶ್ವಾಸ್
ನವದೆಹಲಿ, ಮೇ.4: ಆಮ್ ಆದ್ಮಿ ಪಕ್ಷದ ಮಹಿಳಾ ಕಾರ್ಯಕರ್ತೆ ಜೊತೆ ಅಕ್ರಮ ಸಂಬಂಧ ಹೊಂದಿರುವ ಆರೋಪವನ್ನು ಎಎಪಿ ಮುಖಂಡ, ಕವಿ ಕುಮಾರ್ ವಿಶ್ವಾಸ್ ಅಲ್ಲಗೆಳೆದಿದ್ದಾರೆ. ಇದೆಲ್ಲವೂ ಮಾಧ್ಯಮಗಳ ಷಡ್ಯಂತ್ರ, ಬಿಜೆಪಿ ಮಾಡಿರುವ ಕುತಂತ್ರ ಎಂದು ತಿರುಗೇಟು ನೀಡಿದ್ದಾರೆ.
ಕುಮಾರ್ ವಿಶ್ವಾಸ್ ವಿರುದ್ಧ ಬಂದಿರುವ ಆರೋಪಗಳೆಲ್ಲವೂ ಸುಳ್ಳು ಎಂದಿರುವ ಎಎಪಿ ಮುಖ್ಯಸ್ಥ ಸಂಜಯ್ ಸಿಂಗ್, ಕುಮಾರ್ ವಿಶ್ವಾಸ್ ಅವರು ಅಕ್ರಮ ಸಂಬಂಧ ಹೊಂದಿದ್ದಾರೆ ಎಂಬ ಸುದ್ದಿಯಲ್ಲಿ ಯಾವುದೇ ಹುರುಳಿಲ್ಲ. ತನ್ನ ಮಾನ ಹರಣವಾಗುತ್ತಿದೆ ಎಂದು ನಾಲ್ವರ ಹೆಸರನ್ನು ಹೇಳಿದ್ದಾಳೆ. ಹೀಗಾಗಿ ಕುಮಾರ್ ವಿಶ್ವಾಸ್ ಮೇಲೆ ದೂರು ನೀಡಿದ್ದಾಳೆ ಎನ್ನುವುದು ಸರಿಯಲ್ಲ ಎಂದಿದ್ದಾರೆ.[ಅಕ್ರಮ ಸಂಬಂಧ ಆರೋಪ, ಕುಮಾರ್ ವಿಶ್ವಾಸ್‌ಗೆ ನೋಟಿಸ್]
ಕಥೆ ಹೆಣೆಯುವುದರಲ್ಲಿ ಮಾಧ್ಯಮಗಳು ಎಲ್ಲರಿಗಿಂತ ಮುಂದಿವೆ. ಸಂಸಾರಸ್ಥರು ಮಾಡುವ ಕೆಲಸ ಇದಲ್ಲ, ಕೊಳಕು ರಾಜಕೀಯ ವ್ಯವಸ್ಥೆ ವಿರುದ್ಧ ನಾವು ನಡೆಸುತ್ತಿರುವ ಹೋರಾಟವನ್ನು ಹತ್ತಿಕ್ಕಲು ಮಾಧ್ಯಮಗಳು ಕೈಜೋಡಿಸಿವೆ ಎಂದು ಕುಮಾರ್ ವಿಶ್ವಾಸ್ ಗಂಭೀರ ಆರೋಪ ಮಾಡಿದ್ದಾರೆ.

ಮಹಿಳಾ ಆಯೋಗಕ್ಕೆ ದೂರು ಸಲ್ಲಿಕೆ
ವಿಶ್ವಾಸ್ ವಿರುದ್ಧ ಎಎಪಿ ಮಹಿಳಾ ಕಾರ್ಯಕರ್ತೆ ದೂರು ನೀಡಿದ್ದಾರೆ. ಲೋಕಸಭೆ ಚುನಾವಣೆ 2014 ಸಂದರ್ಭದಲ್ಲಿ ವಿಶ್ವಾಸ್ ಜೊತೆ ಮಹಿಳೆ ಪ್ರಚಾರದಲ್ಲಿ ಪಾಲ್ಗೊಂಡಿದ್ದಳೂ ಎನ್ನಲಾಗಿದೆ. ಈ ಬಗ್ಗೆ ವಿವರ ನೀಡುವಂತೆ ವಿಶ್ವಾಸ್ ಗೆ ಆಯೋಗ ಸಮನ್ಸ್ ಜಾರಿ ಮಾಡಿದೆ.
|
ಆಕೆ ನನ್ನನ್ನು ಅಣ್ಣ ಎಂದು ಕರೆಯುತ್ತಾಳೆ
ಆಕೆ ನನ್ನನ್ನು ಅಣ್ಣ ಎಂದು ಕರೆಯುತ್ತಾಳೆ. ಈ ಘಟನೆ ಬಗ್ಗೆ ದೂರು ದಾಖಲಿಸಿದ್ದೇನೆ. ಮುಂದೇನು ಮಾಡಲಿ ಎಂದು ಕೇಳಿದ್ದಾಳೆ. ನಾನು ಹೇಗೆ ಆರೋಪಿಯಾಗಲು ಸಾಧ್ಯ ಎಂದು ವಿಶ್ವಾಸ್ ಪ್ರಶ್ನಿಸಿದ್ದಾರೆ.
|
ನಾನು ಯಾವ ಪಕ್ಷದ ಏಜೆಂಟ್ ಅಲ್ಲ
ನಾನು ಯಾವ ಪಕ್ಷದ ಏಜೆಂಟ್ ಅಲ್ಲ. ಬಿಜೆಪಿ ಅಥವಾ ಕಾಂಗ್ರೆಸ್ ಪಕ್ಷಕ್ಕೆ ಸೇರಿಲ್ಲ. ಎಎಪಿ ಕಾರ್ಯಕರ್ತೆಯಾಗಿ ದುಡಿದಿದ್ದೇನೆ. ನನಗಾದ ಅನ್ಯಾಯದ ಬಗ್ಗೆ ಸ್ಪಷ್ಟನೆ ನೀಡುವಂತೆ ಕುಮಾರ್ ವಿಶ್ವಾಸ್ ರಲ್ಲಿ ಕೇಳಿಕೊಂಡಿದ್ದೇನೆ.
|
ಅಜಯ್ ವೋಹ್ರಾ ಮೇಲೆ ಕುಮಾರ್ ಕೆಂಗಣ್ಣು
ಇದೆಲ್ಲವೂ ದೂರುದಾರ ಅಜಯ್ ವೋಹ್ರಾ ಅವರ ಕುತಂತ್ರ, ವಿಪಕ್ಷಗಳ ಜೊತೆ ಕೈಜೋಡಿಸಿರುವ ವೋಹ್ರಾ ಸುಳ್ಳು ಆಪಾದನೆ ಮಾಡಿದ್ದಾರೆ ಎಂದು ವಿಶ್ವಾಸ್ ಹೇಳಿದ್ದಾರೆ.












Click it and Unblock the Notifications