ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಧರ್ಮರಾಯ'ನಿಗೆ ಬೆಂಬಲ, ಐಐಟಿಗೆ ಆರೆಸ್ಸೆಸ್ ಗುದ್ದು

By Mahesh
|
Google Oneindia Kannada News

ನವದೆಹಲಿ, ಜುಲೈ 20: ಪುಣೆಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ (ಎಫ್‌ಟಿಐಐ) ಯ ಅಧ್ಯಕ್ಷರಾಗಿ ಗಜೇಂದ್ರ ಚೌಹಾಣ್ ಅವರನ್ನು ತಾತ್ಕಾಲಿಕವಾಗಿ ಕೆಳಗಿಳಿಸಿ ಪ್ರಶಾಂತ್ ಪತ್ರಾಬೆ ಅವರನ್ನು ಸರ್ಕಾರ ನೇಮಿಸಿದ್ದು ನೆನಪಿರಬಹುದು.

ಅದರೆ, ಬೂದಿ ಮುಚ್ಚಿದ ಕೆಂಡದಂತಿರುವ ಈ ಪ್ರಕರಣವನ್ನು ರಾಷ್ಟ್ರೀಯ ಸ್ವಯಂ ಸೇವಕರ ಸಂಘ (ಆರೆಸ್ಸೆಸ್) ಮತ್ತೆ ಕೆಣಕಿದೆ. ಗಜೇಂದ್ರ ಪರ ತನ್ನ ಮುಖವಾಣಿಯಲ್ಲಿ ಬರೆದುಕೊಂಡಿರುವ ಆರೆಸ್ಸೆಸ್, ಐಐಟಿಯನ್ನೂ ಜರೆದಿದೆ. [ಸಲ್ಮಾನ್ ಬೆಂಬಲದ ನಂತರ 'ಧರ್ಮರಾಯ'ನಿಂದ ಮುಕ್ತಿ]

ಮಹಾಭಾರತ ಧಾರಾವಾಹಿಯಲ್ಲಿ 'ಧರ್ಮರಾಯ'ನ ಪಾತ್ರ ಮಾಡಿದ್ದ ಗಜೇಂದ್ರ ಅವರ ವಿರುದ್ಧದ ಪ್ರತಿಭಟನೆಗಳನ್ನು ಆರೆಸ್ಸೆಸ್ 'ಹಿಂದೂ ವಿರೋಧಿ' ಎಂದು ಕರೆದಿದೆ. ಜೊತೆಗೆ ಐಐಟಿಗಳಂಥ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳನ್ನು 'ಭಾರತ ವಿರೋಧಿ ಮತ್ತು ಹಿಂದೂ ವಿರೋಧಿ'ಚಟುವಟಿಕೆಗಳ ತಾಣಗಳನ್ನಾಗಿ ಪರಿವರ್ತಿಸಲಾಗುತ್ತಿದೆ ಎಂದು ಆರೋಪಿಸಿದೆ.

IITs being used for 'anti-India, anti-Hindu' activities

ಎಡರಂಗ ಮತ್ತು ಕಾಂಗ್ರೆಸ್, ಈ ಪ್ರತಿಷ್ಠಿತ ಸಂಸ್ಥೆಗಳನ್ನು ನಿಯಂತ್ರಿಸುತ್ತಿವೆ ಮತ್ತು ಇವೆರಡೂ ಪಕ್ಷಗಳು ಆಡಳಿತ ಮಂಡಳಿಗಳ ಮೂಲಕ ಸಂಸ್ಥೆಯನ್ನು ಮೋದಿ ಸರ್ಕಾರದ ವಿರುದ್ಧ ದಾಳವಾಗಿ ಬಳಸುತ್ತಿವೆ. [ಮೋದಿ ವಿರುದ್ಧ ದನಿ ಎತ್ತಿದ್ದಕ್ಕೆ ವಿದ್ಯಾರ್ಥಿಗಳಿಗೆ ನಿಷೇಧ?]

ಐಐಟಿ-ಬಾಂಬೆಯ ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷ ಹಾಗೂ ಖ್ಯಾತ ಪರಮಾಣು ವಿಜ್ಞಾನಿ ಅನಿಲ್ ಕಾಕೋಡ್ಕರ್ ಮತ್ತು ಐಐಎಂ-ಅಹ್ಮದಾಬಾದ್‌ನ ಅಧ್ಯಕ್ಷ ಎ.ಎಂ.ನಾಯ್ಕಾ ಅವರ ವಿರುದ್ಧವೂ ಅದು ದಾಳಿ ನಡೆಸಿದೆ.

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮತಿ ಇರಾನಿಯವರು ನಿರ್ದೇಶಕರ ನೇಮಕಗಳನ್ನು ಲಘುವಾಗಿ ಪರಿಗಣಿಸಿದ್ದಾರೆ ಎಂದು ಆರೋಪಿಸಿರುವ ಕಾಕೋಡ್ಕರ್ ಅವರು ಐಐಟಿ ಬಾಂಬೆಯ ಬೋಧಕರು ಮತ್ತು ವಿದ್ಯಾರ್ಥಿಗಳ 'ಕಿಸ್ ಆಫ್ ಲವ್' ಆಚರಣೆಯ ಬಗ್ಗೆ ತುಟಿಪಿಟಕ್ಕೆಂದಿಲ್ಲ ಏಕೆ ಎಂದು ಪ್ರಶ್ನಿಸಿದೆ.

ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿರುವ ಭಾರತ ವಿರೋಧಿ ಮತ್ತು ಹಿಂದೂ ವಿರೋಧಿ ಚಟುವಟಿಕೆಗಳಿಗಾಗಿ ಆಡಳಿತ ಮಂಡಳಿಗಳನ್ನೂ ಹೊಣೆಗಾರರನ್ನಾಗಿಸಬೇಕು ಎಂದು ಆರೆಸ್ಸೆಸ್ ಬರೆದುಕೊಂಡಿದೆ. (ಪಿಟಿಐ)

English summary
After an Organiser article termed as "anti-Hindu" the protests against Gajendra Chauhan's appointment as FTII chairman, another piece in the RSS organ has alleged that prestigious institutes like IITs were being turned into places for "anti-India and anti-Hindu" activities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X