ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನ ಭಾರತದಂತೆ ಜಾತ್ಯಾತೀತ ಆದರಷ್ಟೆ ಮಾತುಕತೆ: ಬಿಪಿನ್ ರಾವತ್

|
Google Oneindia Kannada News

ನವದೆಹಲಿ, ನವೆಂಬರ್ 30: ಭಾರತ ಒಂದು ಹೆಜ್ಜೆ ಇಟ್ಟರೆ ನಾವು ಎರಡು ಇಡುತ್ತೇವೆ ಎಂದು ಪಾಕಿಸ್ತಾನ ಹೇಳುತ್ತಿದೆ. ಆದರೆ ಅವರ ಆ ಹೆಜ್ಜೆ ಧನಾತ್ಮಕ ಆಯಾಮದಲ್ಲಿಯೇ ಇರಬೇಕೆಂದು ಪಾಕಿಸ್ತಾನ ಖಾತ್ರಿ ಪಡಿಸಿಕೊಳ್ಳಬೇಕು ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.

ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದ ಸೇನಾ ಮುಖ್ಯಸ್ಥ ಬಿಪಿನ್ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದ ಸೇನಾ ಮುಖ್ಯಸ್ಥ ಬಿಪಿನ್

ಪಾಕಿಸ್ತಾನದ ಆ ಹೆಜ್ಜೆಯಿಂದ ಭಾರತಕ್ಕೆ ಋಣಾತ್ಮಕ ಪರಿಣಾಮಗಳಾಗುವ ಹಾಗಿದ್ದರೆ, ಭಾರತವು ಮೊದಲೇ ಹೇಳಿರುವಂತೆ ಭಯೋತ್ಪಾದನೆ ಹಾಗೂ ಮಾತುಕತೆ ಜೊತೆ-ಜೊತೆಯಾಗಲು ಸಾಧ್ಯವಿಲ್ಲ ಎಂದು ರಾವತ್ ಹೇಳಿದ್ದಾರೆ. ಇತ್ತೀಚೆಗಷ್ಟೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ ಮಾತಿಗೆ ಅವರು ಪ್ರತಿಕ್ರಿಯಿಸಿದ್ದಾರೆ.

ಪಕೋಡಕ್ಕೆ ನಿರ್ಬಂಧ, ಮುಖಸ್ತುತಿ ಮಾಡುವವರಿಗಿಲ್ಲ ಬಡ್ತಿ: ಸೇನೆ ಹೊಸ ನಿಯಮಪಕೋಡಕ್ಕೆ ನಿರ್ಬಂಧ, ಮುಖಸ್ತುತಿ ಮಾಡುವವರಿಗಿಲ್ಲ ಬಡ್ತಿ: ಸೇನೆ ಹೊಸ ನಿಯಮ

ಪಾಕಿಸ್ತಾನಕ್ಕೆ ಭಾರತದೊಂದಿಗೆ ಸಂಬಂಧ ಸುಧಾರಿಸಿಕೊಳ್ಳಬೇಕು ಎಂಬ ಇಚ್ಛೆ ನಿಜವಾಗಿಯೂ ಇದ್ದದ್ದೇ ಆದಲ್ಲಿ ಅದು ಮೊದಲು ಜಾತ್ಯಾತೀತ, ಧರ್ಮಾತೀತ ರಾಷ್ಟ್ರವಾಗಬೇಕು. ಭಾರತವು ಜಾತ್ಯಾತೀತ ರಾಷ್ಟ್ರ, ಅದು ಸಹ ನಮ್ಮಂತೆ ಜಾತ್ಯಾತೀತ ಆಗುವಂತಿದ್ದರೆ ಮಾತ್ರವೇ ಮಾತುಕತೆ ಸಾಧ್ಯ. ಜೊತೆಗೆ ಪಾಕಿಸ್ತಾನವು ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್‌ ಬಗ್ಗೆ ತನ್ನ ನಿಲವು ಸ್ಪಷ್ಟಪಡಿಸಬೇಕು.

If Pakistan develop as a secular state India will talk: Bipin Rawat

ಭಾರತೀಯ ಸೇನೆಯಲ್ಲಿ ಮಹಿಳೆಯರಿಗೆ ಆದ್ಯತೆ ಬಗ್ಗೆ ಮಾತನಾಡಿದ ಅವರು, ಭಾರತೀಯ ಸೇನೆಯಲ್ಲಿ ಮಹಿಳೆಯರ ಪ್ರವೇಶ ಇತ್ತೀಚೆಗೆ ಹೆಚ್ಚುತ್ತಿದೆ. ಆದರೆ ಅವರನ್ನು ನಾವಿನ್ನೂ ಸಂಘರ್ಷ ಸಮಯಗಳಲ್ಲಿ ಬಳಸಿಲ್ಲ, ಆ ರೀತಿಯ ಪರಿಸ್ಥಿತಿಗಳನ್ನು ಎದುರಿಸಲು ಅವರಿನ್ನೂ ಪೂರ್ಣ ಸಿದ್ಧರಿಲ್ಲ ಎಂಬುದು ಸೇನೆ ಅಭಿಪ್ರಾಯ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಮಹಿಳೆ, ಪುರುಷರು ಇಬ್ಬರೂ ಒಟ್ಟಿಗೆ ಕಾರ್ಯಾಚರಣೆ ಮಾಡುತ್ತಿದ್ದಾರೆ. ಆದರೆ ಇಲ್ಲಿ ಅದಕ್ಕಿನ್ನೂ ಸಮಯ ಬೇಕು ಎಂದು ಅವರು ಹೇಳಿದ್ದಾರೆ.

English summary
We are a secular state. If they're willing to become secular like us, then they seem to have an opportunity syas Army chief Bipin Rawat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X