"ವಂದೇ ಮಾತರಂ ಅನ್ನು ಗೌರವಿಸದೆ, ಅಫ್ಜಲ್ ಗುರುವನ್ನು ಗೌರವಿಸುತ್ತೀರಾ?"

Posted By:
Subscribe to Oneindia Kannada

ನವದೆಹಲಿ, ಡಿಸೆಂಬರ್ 08: "ವಂದೇ ಮಾತರಂ ಗೆ ಗೌರವ ನೀಡದೆ, ಇನ್ನೇನು ಅಫ್ಜಲ್ ಗುರುವಿಗೆ ಗೌರವ ನೀಡುತ್ತೀರಾ?" ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಖಾರವಾಗಿ ಪ್ರಶ್ನಿಸಿದ್ದಾರೆ.

ವಂದೇ ಮಾತರಂಗೆ ವಂದಿಸುವುದಿಲ್ಲ: ಸಂಸದ ರಹ್ಮಾನ್

ಉತ್ತರ ಪ್ರದೇಶದ ಬಿಎಸ್ ಪಿಯ ಮೇಯರ್ ಒಬ್ಬರು, ತಮ್ಮ ಕಚೇರಿಯಲ್ಲಿ ವಂದೇ ಮಾತರಂ ಹಾಡುವ ನಿಯಮವನ್ನು ಮೂಲೆಗೆ ತಳ್ಳಿದ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, 'ಕೆಲವರಿಗೆ ತಮ್ಮ ತಾಯಿಗೆ ಗೌರವ ನೀಡುವುದಕ್ಕೆ ಯಾಕೆ ಇಷ್ಟವಿಲ್ಲವೋ ಕಾಣೆ. ಅಮ್ಮನಿಗೆ ಗೌರವ ನೀಡದೆ ಅಫ್ಜಲ್ ಗುರುವಿಗೆ ಗೌರವ ನೀಡಬೇಕೇನು ಎಂದು ಪ್ರಶ್ನಿಸಿದರು.

If not mother, will you salute Afzal Guru? Venkaiah Naidu

ಹಿಂದುತ್ವ ಎಂಬುದು ನಮ್ಮ ಸಂಸ್ಕೃತಿ ಮತ್ತು ಪರಂಪರೆ. ಕೆಲವು ಜನರು ಅದಕ್ಕೆ ಸಂಕುಚಿತ ಅರ್ಥ ನೀಡುತ್ತಿದ್ದಾರೆ ಎಂದ ಅವರು, ಭಾರತಕ್ಕೆ ಗೌರವ ನೀಡಬೇಕಾಗಿರುವುದು ಕೇಲವ ಒಬ್ಬರ ಕೆಲಸವಲ್ಲ, 130 ಕೋಟಿ ಭಾರತೀಯರೂ ಯಾವ ಜಾತಿ, ಮತಗಳ ಹಂಗಿಲ್ಲದೆ ಭಾರತವನ್ನು ಗೌರವಿಸಬೇಕಿದೆ ಎಂದರು.

ತಮಿಳುನಾಡಿನ ಶಾಲೆ, ಕಾಲೇಜುಗಳಲ್ಲಿ 'ವಂದೇ ಮಾತರಂ' ಕಡ್ಡಾಯ

ಉತ್ತರ ಪ್ರದೇಶದ ಸ್ಥಳೀಯ ಸಂಸ್ಥೆಯ ಚುನಾವಣೆಯ ನಂಗತರ ಮೇಯರ್ ಆಗಿ ಆಯ್ಕೆಯಾದ ಬಿಎಸ್ ಪಿಯ ಸುನಿತಾ ವರ್ಮಾ ಎಂಬುವವರು ಮೀರತ್ ಮುನ್ಸಿಪಲ್ ಕಾರ್ಪೋರೇಶನ್ ನಲ್ಲಿ ವಂದೇ ಮಾತರಂ ಹಾಡದೆ, 'ಜನಗಣಮನ ಮಾತ್ರವೇ ನಮ್ಮ ರಾಷ್ಟ್ರಗೀತೆ, ಆದನ್ನಷ್ಟೇ ಹಾಡುತ್ತೇವೆ' ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ನಾಯ್ಡು ವಂದೇ ಮಾತರಂ ಅನ್ನು ಪ್ರತಿ ಭಾರತೀಯರೂ ಗೌರವಿಸಬೇಕು ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
After a mayor in Uttar Pradesh ruled that singing of national song, 'Vande Mataram', before local body meetings was not necessary, Vice President Venkaiah Naidu on Dec 7th asked if not the motherland, should they salute Afzal Guru.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ