ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ನಿಮ್ಮ ಪತಿ ಹುತಾತ್ಮರಾದರು ಎಂಬ ಸುದ್ದಿ ಕೇಳಿಯೂ ನನ್ನ ಕಣ್ಣು ಹನಿಗೂಡಲಿಲ್ಲ!"

|
Google Oneindia Kannada News

ನವದೆಹಲಿ, ಜನವರಿ 26: ಅದು ನವೆಂಬರ್ 25 ನೇ ತಾರೀಖು... ತಂದೆ-ತಾಯಿಯರೊಂದಿಗೆ ಸಂತಸದ ಸಮಯ ಕಳೆಯುತ್ತಿದ್ದ ಮಹಾಜಬೀನ್ ಗೆ ಇದ್ದಕ್ಕಿದ್ದಂತೆ ಸುದ್ದಿಯೊಂದು ಬಂದಿತ್ತು...

"ನಿಮ್ಮ ಪತಿ ಭಯೋತ್ಪಾದಕರೊಂದಿಗಿನ ಎನ್ ಕೌಂಟರ್ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ" ಸುದ್ದಿ ಕಿವಿಗೆ ಬಡಿಯುತ್ತಿದ್ದಂತೆಯೇ ಮಹಾಜಬೀನ್ ಬಿಕ್ಕಿ ಬಿಕ್ಕಿ ಅಳುತ್ತಾಳೆ ಎಂದುಕೊಂಡಿದ್ದವರಿಗೆಲ್ಲ ಅಚ್ಚರಿ.. ಆಕೆಯ ಕಣ್ಣಲ್ಲಿ ಹನಿಮೂಡಲಿಲ್ಲ, ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವ ಸಂಗಾತಿಯನ್ನು ಕಳೆದುಕೊಂಡ ನೋವಿಗಿಂತ, ತನ್ನ ಪತಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದನಲ್ಲ ಎಂಬ ಹೆಮ್ಮೆ ಆಕೆಯ ಕಣ್ಣಲ್ಲಿ ಢಾಳಾಗಿ ಕಾಣುತ್ತಿತ್ತು!

ಉಗ್ರನಾಗಿ ಬೆಳೆದ ವಾನಿ, ಭಾರತದ ಯೋಧನಾಗಿ ಹುತಾತ್ಮನಾದಉಗ್ರನಾಗಿ ಬೆಳೆದ ವಾನಿ, ಭಾರತದ ಯೋಧನಾಗಿ ಹುತಾತ್ಮನಾದ

ಹೌದು, ಭಯೋತ್ಪಾದಕನಾಗಿ, ನಂತರ ತಪ್ಪಿನ ಅರಿವಾಗಿ ಭಾರತೀಯ ಸೇನೆಗೆ ಸೇರಿದ ಲಾನ್ಸ್ ನಾಯಕ್ ನಾಜಿರ್ ಅಹ್ಮದ್ ವಾನಿ ಅವರಿಗೆ ಜನವರಿ 26, ಗಣರಾಜ್ಯೋತ್ಸವ ದಿನದಂದು ಮರಣೋತ್ತರ 'ಪರಮವೀರ ಚಕ್ರ' ಪ್ರಶಸ್ತಿ ನೀಡಲಾಯ್ತು. ಆ ನಂತರ ಅವರ ಪತ್ನಿ ಪತ್ರಕರ್ತರೊಂದಿಗೆ ಕೆಲ ಹೊತ್ತು ಮಾತನಾಡಿದರು. ಈ ಸಂದರ್ಭದಲ್ಲಿ ವಾನಿ ಜೊತೆಗಿನ ತಮ್ಮ ಬದುಕು ಎಷ್ಟು ಸಂಭ್ರಮದಿಂದ ಕೂಡಿತ್ತು ಎಂಬುದನ್ನು ವಿವರಿಸಿದರು... ವಾನಿ ಹುತಾತ್ಮರಾದ ಸುದ್ದಿ ಕೇಳಿ ಹನಿಗೂಡದ ಕಣ್ಣು, ಅವರೊಂದಿಗೆ ಒಡನಾಡಿದ ಕ್ಷಣಗಳನ್ನು ಮೆಲುಕು ಹಾಕುವಾಗ ಅರಿವಿಲ್ಲದೆ ಒದ್ದೆಯಾಗಿತ್ತು..!

ನಮ್ಮಿಬ್ಬರದು ಪ್ರೇಮ ವಿವಾಹ

ನಮ್ಮಿಬ್ಬರದು ಪ್ರೇಮ ವಿವಾಹ

"ನಮ್ಮಿಬ್ಬರದು ಪ್ರೇಮ ವಿವಾಹ. ವಾನಿ ನನ್ನನ್ನು ತುಂಬಾನೇ ಪ್ರೀತಿಸುತ್ತಿದ್ದರು. ನನ್ನ ಪ್ರತಿ ಹೆಜ್ಜೆಗೂ ಪ್ರೋತ್ಸಾಹ ನೀಡುತ್ತಿದ್ದರು. ಅಷ್ಟೇ ಅಲ್ಲ, ತಮ್ಮೊಂದಿಗಿರುವವರೆಲ್ಲರೂ ಖುಷಿಯಾಗಿರುವಂತೆ ಅವರು ನೋಡಿಕೊಳ್ಳುತ್ತಿದ್ದರು"- ಮಹಾಜಬೀನ್

ಪತಿ ನನ್ನೊಂದಿಗೇ ಇದ್ದಾರೆ

ಪತಿ ನನ್ನೊಂದಿಗೇ ಇದ್ದಾರೆ

"ನಾನೊಬ್ಬ ಶಿಕ್ಷಕಿ. ನನಗೆ ವಾನಿ ನಡೆದುಹೋದ ದಾರಿಯೇ ಆದರ್ಶ. ನನ್ನ ವಿದ್ಯಾರ್ಥಿಗಳೂ ನನ್ನ ರಾಜ್ಯವನ್ನು(ಜಮ್ಮು-ಕಾಶ್ಮೀರ) ಪ್ರೀತಿಸುವಂತೆ ಮಾಡುತ್ತೇನೆ. ಅವರಲ್ಲಿ ದೇಶಭಕ್ತಿ ಬಿತ್ತುವ ಕೆಲಸ ಮಾಡುತ್ತೇನೆ. ನನ್ನ ಪತಿ ನನಗೆ ಎಂದಿಗೂ ಸ್ಫೂರ್ತಿಯಾಗಿ ನನ್ನೊಂದಿಗೇ ಇದ್ದಾರೆ ಎಂಮಬ ಭಾವನೆ ನನ್ನದು"- ಮಹಾಜಬೀನ್

ವೀರ ಯೋಧ, ಹುತಾತ್ಮ ನಜೀರ್ ವನಿಗೆ ಮರಣೋತ್ತರ ಅಶೋಕ್ ಚಕ್ರವೀರ ಯೋಧ, ಹುತಾತ್ಮ ನಜೀರ್ ವನಿಗೆ ಮರಣೋತ್ತರ ಅಶೋಕ್ ಚಕ್ರ

ಅದೇ ಕೊನೆಯ ಮಾತು ಎಂಬುದು ಗೊತ್ತಿರಲಿಲ್ಲ!

ಅದೇ ಕೊನೆಯ ಮಾತು ಎಂಬುದು ಗೊತ್ತಿರಲಿಲ್ಲ!

"ಅವರು ಹುತಾತ್ಮರಾಗುವ ಮುನ್ನಾ ದಿನ ನನಗೆ ಫೋನಾಯಿಸಿದ್ದರು. ನನ್ನ ಆರೋಗ್ಯದ ಬಗ್ಗೆ ವಿಚಾರಿಸಿದ್ದರು. ಮನೆಯಲ್ಲಿ ಎಲ್ಲರ ಬಗ್ಗೆಯೂ ವಿಚಾರಿಸಿದ್ದರು. ಅದೇ ನಾನು ಅವರೊಂದಿಗೆ ಆಡುವ ಕೊನೆಯ ಮಾತು ಎಂಬುದು ನನಗೆ ಗೊತ್ತಿರಲಿಲ್ಲ. ಟೇಕ್ ಕೇರ್ ಎಂದು ಫೋನ್ ಇಟ್ಟಿದ್ದೆ! ವಿಧಿ ಅವರ ಹಣೆಯಲ್ಲಿ ಬೇರೆಯದೇ ಕತೆ ಬರೆದಿತ್ತು" -ಮಹಾಜಬೀನ್

Array

ಪ್ರತಿಯೊಬ್ಬರಿಗೂ ಆದರ್ಶಪ್ರಾಯರಾಗಿದ್ದರು

"ತಮ್ಮ ಜಮ್ಮು-ಕಾಶ್ಮೀರ 162/TA ಲೈಟ್ ಇನ್ಫಾಂಟ್ರಿ ಬೆಟಾಲಿಯನ್ ನ ಕೀರ್ತಿಯನ್ನು ಹೆಚ್ಚಿಸಬೇಕು ಎಮಬುದು ಅವರ ಮಹಾದಾಸೆಯಾಗಿತ್ತು. ಕರ್ತವ್ಯ ಮೊದಲು, ಉಳಿದಿದ್ದೆಲ್ಲ ಆಮೇಲೆ ಎನ್ನುತ್ತಿದ್ದರು. ತಮ್ಮ ಜೊತೆಗಿರುವ ಜನರಿಗೆಲ್ಲ ಅವರು ಎಂದುಗೂ ಆದರ್ಶವಾಗಿದ್ದರು"- ಮಹಾಜಬೀನ್

'ಉರಿ' ಸಿನೆಮಾ ನೋಡಿದ ನಂತರ ಹಳೆಯ ನೆನಪುಗಳ ಮೆರವಣಿಗೆ'ಉರಿ' ಸಿನೆಮಾ ನೋಡಿದ ನಂತರ ಹಳೆಯ ನೆನಪುಗಳ ಮೆರವಣಿಗೆ

English summary
"I did not cry when I was told he is no more. There was an inner resolve which did not allow me to cry," Mahajabeen, wife of Lance Naik Nazir Ahmad Wani told.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X