'ನಾನು ಸನ್ನಿ ಲಿಯೋನ್ ಅಲ್ಲ ಬಿಟ್ಬಿಡ್ರೋ'!: ದೆಹಲಿ ವ್ಯಕ್ತಿಯ ವಿಚಿತ್ರ ಗೋಳು

ನವದೆಹಲಿ, ಜುಲೈ 31: ಕೆಲವು ದಿನಗಳಿಂದ ದೆಹಲಿಯ 27 ವರ್ಷದ ಯುವಕನ ಗೋಳು ಹೇಳತೀರದು. ಹಗಲೂ ರಾತ್ರಿ ಆತನ ಫೋನ್‌ಗೆ ಒಂದರ ಮೇಲೊಂದು ಕರೆಗಳು, ಮಿಸ್ಡ್‌ಕಾಲ್‌ಗಳು ಮತ್ತು ಮೆಸೇಜ್‌ಗಳು. ಅದು ಒಂದೆರಡು ಬಾರಿಯಲ್ಲ. ಎಷ್ಟು ಬಾರಿ ಫೋನ್ ಕರೆಗಳಿಗೆ ಪ್ರತಿಕ್ರಿಯೆ ನೀಡುವುದು? ಸಂದೇಶಗಳಿಗೆ ರಿಪ್ಲೈ ಕಳುಹಿಸುವುದು? 'ನಾನು ಸನ್ನಿ ಲಿಯೋನ್ ಅಲ್ಲ, ಈ ಫೋನ್ ನಂಬರ್‌ ಮಾಲೀಕ. ನನ್ನ ಹೆಸರು ಪುನೀತ್ ಅಗರವಾಲ್' ಎಂದು ಹೇಳಿ ಹೇಳಿ ಹೈರಾಣಾಗಿದ್ದಾರೆ.

ಆರಂಭದಲ್ಲಿ ತಮಾಷೆ ಎನಿಸಿದರೂ ಪದೇ ಪದೇ ಕರೆಗಳು ಬರುವುದನ್ನು ಕಂಡು ಪುನೀತ್ ರೋಸಿದ್ದಾರೆ. ಇದು ಇಲ್ಲಿಗೇ ಮುಗಿಯುವುದಿಲ್ಲ ಎಂದು ಕೊನೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಬಾಲಿವುಡ್ ಸಿನಿಮಾ ನಿರ್ದೇಶಕರು, ನಿರ್ಮಾಪಕರ ವಿರುದ್ಧ ದೂರು ನೀಡಿದ್ದಾರೆ.

ಆದದ್ದಿಷ್ಟು, 'ಅರ್ಜುನ್ ಪಾಟಿಯಾಲಾ' ಎಂಬ ಚಿತ್ರದಲ್ಲಿ ನಟಿ ಸನ್ನಿ ಲಿಯೋನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲಿ ಸನ್ನಿ ಲಿಯೋನ್ ಸಹನಟನೊಂದಿಗೆ ಸಂಭಾಷಿಸುವ ವೇಳೆ ತಮ್ಮ ಫೋನ್ ನಂಬರ್ ಹಂಚಿಕೊಳ್ಳುವ ಸನ್ನಿವೇಶವಿದೆ. ಸಾಮಾನ್ಯವಾಗಿ ಇಂತಹ ದೃಶ್ಯಗಳಲ್ಲಿ ಅರ್ಧ ಸಂಖ್ಯೆಗಳನ್ನೋ ಅಥವಾ ಚಾಲ್ತಿಯಲ್ಲಿಲ್ಲದ ಸಂಖ್ಯೆಯನ್ನೋ ಹೇಳುತ್ತಾರೆ. ಆದರೆ, ಈ ಸಿನಿಮಾದಲ್ಲಿ ಸನ್ನಿ ಲಿಯೋನ್ ಇದು ತನ್ನ ನಂಬರ್ ಎಂದು ಪೂರ್ಣವಾಗಿ ಫೋನ್ ನಂಬರ್ ಹೇಳುತ್ತಾರೆ. ವಾಸ್ತವವಾಗಿ ಆ ನಂಬರ್ ದೆಹಲಿಯ ಪುನೀತ್ ಅಗರವಾಲ್ ಅವರದ್ದಾಗಿದೆ.

I Am Not Sunny Leone Stop Calling Delhi Man Files Complaint

ಈ ನಂಬರ್ ಸನ್ನಿ ಲಿಯೋನ್ ಅವರ ನಿಜವಾದ ನಂಬರ್ ಎಂದು ಭಾವಿಸಿಕೊಂಡ ಜನರು ನಿರಂತರವಾಗಿ ಆ ನಂಬರ್‌ಗೆ ಕರೆ ಮಾಡಿದ್ದಾರೆ. 'ಪ್ರತಿ ದಿನವೂ ಕನಿಷ್ಠ 150 ಮಂದಿ ನನಗೆ ಕರೆ ಮಾಡಿ ಸನ್ನಿ ಲಿಯೋನ್ ಅವರೊಂದಿಗೆ ಮಾತನಾಡಬೇಕು ಎಂದು ಕೇಳುತ್ತಾರೆ. ಇನ್ನು ಅನೇಕರು ವಿಡಿಯೋ ಕರೆಗಳನ್ನೂ ಮಾಡಿದ್ದಾರೆ. ಅಶ್ಲೀಲ ಮಾತುಗಳನ್ನು ಕೂಡ ಆಡಿದ್ದಾರೆ' ಎಂದು ಪುನೀತ್ ಆರೋಪಿಸಿದ್ದಾರೆ.

ಇದರಿಂದ ಕಂಗೆಟ್ಟ ಪುನೀತ್ ವಾಯವ್ಯ ದೆಹಲಿಯ ಪೊಲೀಸರಿಗೆ ದೂರು ನೀಡಿದ್ದಾರೆ. ತಮ್ಮ ಅನುಮತಿ ಇಲ್ಲದೆಯೇ ತಮ್ಮ ಮೊಬೈಲ್ ಸಂಖ್ಯೆಯನ್ನು ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.

ಜುಲೈ 26ರಂದು ಸಿನಿಮಾ ಬಿಡುಗಡೆಯಾಗಿತ್ತು. ಆ ದಿನದಿಂದಲೂ ಸನ್ನಿ ಲಿಯೋನ್ ಅವರಿಗಾಗಿ ಅವರ ಅಭಿಮಾನಿಗಳು ಕರೆ ಮಾಡುತ್ತಲೇ ಇದ್ದಾರೆ. ಸನ್ನಿ ಲಿಯೋನ್ ಅವರನ್ನು ಸಂಪರ್ಕಿಸಬೇಕೆಂದು ಕರೆ ಮಾಡುವ ವ್ಯಕ್ತಿಗಳು ತಮಗೆ ಕಿರುಕುಳ ನೀಡಿದ್ದಾರೆ. ಕೆಟ್ಟ ಕೆಟ್ಟ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಅವರು ಕರೆ ಮಾಡಿ ನಾಚಿಕೆಗೇಡಿನ ಸಹಾಯಕ್ಕಾಗಿ ಕೇಳುತ್ತಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

'ಪೊಲೀಸರು ಎಫ್‌ಐಆರ್ ದಾಖಲು ಮಾಡಿಲ್ಲ. ಅವರು ಮಾಡಿಕೊಳ್ಳದೇ ಇದ್ದರೆ ನಾನು ಹೈಕೋರ್ಟ್‌ಗೆ ಹೋಗುತ್ತೇನೆ' ಎಂದು ಪುನೀತ್ ಹೇಳಿದ್ದಾರೆ.

'ಇದು ಪರಿಗಣಿಸಬಹುದಾದ ಅಪರಾಧವಲ್ಲ. ಹೀಗಾಗಿ ನಾವು ಎಫ್‌ಐಆರ್ ದಾಖಲಿಸಲು ಸಾಧ್ಯವಿಲ್ಲ ಮತ್ತು ಚಿತ್ರದ ತಯಾರಕರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ' ಎಂದು ವಾಯವ್ಯ ಪೊಲೀಸ್ ಉಪ ಆಯುಕ್ತ ವಿಜಯಾಂತ್ಯ ಆರ್ಯ ತಿಳಿಸಿದ್ದಾರೆ.

ರೋಹಿತ್ ಜುಗ್ರಾಜ್ ನಿರ್ದೇಶನದ ಅರ್ಜುನ್ ಪಾಟಿಯಾಲಾ ಚಿತ್ರವು ಜುಲೈ 26ರಂದು ಬಿಡುಗಡೆಯಾಗಿತ್ತು. ಕೃತಿ ಸನೊನ್ ಮತ್ತು ದಲ್ಜೀತ್ ದಸೋಂಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಚಿತ್ರದಲ್ಲಿ ಸನ್ನಿ ಲಿಯೋನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+